ತಾಯಿಯೊಂದಿಗೆ ಮಕ್ಕಳೂ ಹೊರಟರು ಯಾನಕ್ಕೆ…!!
ಬಹುಶ: ಇದು ಭಾರತೀಯ ಚಿತ್ರರಂಗದಲ್ಲೇ ಮೊದಲಿರಬಹುದು. ಒಂದೇ ತಾಯಿಯ ಮೂವರು ಹೆಣ್ನುಮಕ್ಕಳು ಒಂದೇ ಸಾರಿ ತೆರೆಮೇಲೆ ನಾಯಕಿಯಾರಾಗಿರುವುದು ಇತಿಹಾಸದಲ್ಲಿ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಮೂವರು ಹುಡುಗಿಯರಿಗೆ ಆಕ್ಷನ್ ಕಟ್ ಹೇಳುತ್ತಿರುವುದು ಸ್ವತ: ಇವರ ತಾಯಿ. ಹಾಗಿದ್ದರೆ ಸ್ಯಾಂಡಲ್ವುಡ್ ನಲ್ಲಿ ಹೊಸ `ಯಾನ’ ಶುರುಮಾಡಿರುವ ಈ ಫಿಲ್ಮೀ ಫ್ಯಾಮಿಲಿಯ ಹೊಸ ಪ್ರಾಜೆಕ್ಟ್ ಬಗ್ಗೆ ಡಿಟೈಲ್ಸ್ ಇಲ್ಲಿದೆ ನೋಡಿ..
ಕನ್ನಡ ಚಿತ್ರರಂಗಕ್ಕೆ ತನ್ನದೇ ಕೊಡುಗೆ ನೀಡಿರುವ ಜೈ ಜಗದೀಶ್ ಹಾಗು ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೂವರು ಹೆಣ್ಣುಮಕ್ಕಳು ವೈಭವಿ, ವೈನಿಧಿ, ವೈಸಿರಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇದೊಂದು ಪ್ರವಾಸ ಕಥನವಾಗಿದ್ದು, ಚಿತ್ರಕ್ಕೆ `ಯಾನ’ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಇದು ಪಕ್ಕಾ ಯೂತ್ಸ್ ಅನ್ನ ಗಮನದಲ್ಲಿಟ್ಟುಕೊಂಡು ಹೆಣೆದಿರುವ ಕಥೆಯಾಗಿದೆ.
ವಿಶೇಷ ಅಂದರೆ ಯಾನ ಚಿತ್ರವನ್ನ ಸ್ವತ: ವಿಜಯಲಕ್ಷ್ಮಿ ಸಿಂಗ್ ಅವರೇ ನಿರ್ದೇಶಿಸುತ್ತಿದ್ದಾರೆ. ಇದು ಕನ್ನಡ ಚಿತ್ರಗಂದಲ್ಲೇ ಮೊದಲು. ಹಾಗಾಗಿ ಸ್ಯಾಂಡಲ್ವುಡ್ ನಲ್ಲಿ ಈ ಸಿನಿಮಾದ ಬಗ್ಗೆ ಸಹಜವಾಗಿ ಕುತೂಹಲ ಹುಟ್ಟಿಕೊಂಡಿದೆ. `ಯಾನ’ ಚಿತ್ರವನ್ನ ನಿರ್ಮಿಸುವುದಕ್ಕೆ ಮುಂದಾಗಿರುವುದು ವಿಜಯಲಕ್ಷ್ಮಿಯವರ ಪತಿ, ನಟ ಜೈ ಜಗದೀಶ್.
ಕಳೆದ ಹಲವು ವರ್ಷಗಳಿಂದ ಈ ಕಥೆಯನ್ನ ಹೆಣೆಯುವುದಕ್ಕೆ ಶುರುಮಾಡಿದ್ದರು ವಿಜಯಲಕ್ಷ್ಮಿ ಸಿಂಗ್. ಹಾಗೆ ಒಮ್ಮೆ ಕಥೆ ರೆಡಿಯಾದ ಕೂಡಲೇ ಮಕ್ಕಳೊಂದು ಚರ್ಚಿಸಿ ತನ್ನ ಮೂವರು ಹೆಣ್ಣು ಮಕ್ಕಳನ್ನೇ ನಾಯಕಿಯರನ್ನಾಗಿ ಆಯ್ಕೆ ಮಾಡಲಾಯಿತು. ಇವರಿಗಾಗಿ ಮೂವರು ಯುವ ನಟರನ್ನ ಹುಡುಕುವ ಪ್ರಯತ್ನದಲ್ಲಿದ್ದಾರೆ ನಿರ್ದೇಶಕರು. ಅಲ್ಲದೆ ಜೋಶ್ವಾ ಶ್ರೀಧರ್ ಅವರ ಫ್ರೆಶ್ ಟ್ಯೂನ್ಸ್ ಈ ಚಿತ್ರಕ್ಕಿದೆ…
ಇನ್ನು ಮೂವರು ಮಕ್ಕಳೊಂದಿಗೆ ವಿಜಯಲಕ್ಷ್ಮಿ ಬೆಂಗಳೂರು, ಪಶ್ಚಿಮ ಘಟ್ಟಗಳು ಹಾಗು ಗೋವಾದ ಸುಂದರ ಬೀಚ್ ಗಳಲ್ಲಿ `ಯಾನ’ ಕ್ಕೆ ಅಣಿಯಾಗುತ್ತಿದ್ದಾರೆ. ವಿಜಯಲಕ್ಷ್ಮಿ ಸಿಂಗ್ ಅವರಿಗೆ ದಕ್ಷಿಣ ಭಾರತದ ಪ್ರಮುಖ ಕಲಾವಿದರೊಂದಿಗೆ ಸ್ನೇಹವಿರುವುದರಿಂದ, ಇಲ್ಲಿನ ಕೆಲ ಲೆಜೆಂಡ್ ಗಳನ್ನ ಈ ಸಿನಿಮಾದಲ್ಲಿ ನೋಡಬಹುದು. ಹೀಗಾಗಿ ಸ್ಯಾಂಡಲ್ವುಡ್ ನಲ್ಲಿ ಶುರುವಾಗುತ್ತಿರುವ ಹೊಸ `ಯಾನ’ ಎಲ್ಲೆಲ್ಲಿ ಏನೇನು ಹಂಗಾಮ ಮಾಡುತ್ತದೋ ಭವಿಷ್ಯದಲ್ಲಿ ನೋಡೋಣ…
Comments are closed.