ಈಗ ಇವರಿಬ್ಬರಲ್ಲಿ ದೀಪಿಕಾಗೆ ಯಾರು ಇಷ್ಟ ?

deepika-padukone-

 ದೀಪಕಾಗೆ ಎರಡು ಬಿಗ್ ಬ್ಯಾನರ್ ನಲ್ಲಿ ನಟಿಸೋಕೆ ಅವಕಾಶ ಸಿಕ್ಕಿದೆ. ಅದರಲ್ಲಿ ಒಂದು ರಣ್ಬೀರ್ ಕಪೂರ್ ಜೊತೆಯಾದರೆ, ಇನ್ನೊಂದು ರಣ್ವೀರ್ ಸಿಂಗ್ ಜೊತೆ. ಆದರೆ ಬ್ಯುಸಿಯಾಗಿ ನಟಿಗೆ ಯಾವುದಾದರೂ ಒಂದು ಸಿನಿಮಾದಲ್ಲಿ ಮಾತ್ರ ನಟಿಸೋಕೆ ಸಾಧ್ಯ.

 

ಬಿಟೌನ್ ನಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿರುವ ವಿಷಯವಿದು. ಮೊನ್ನೆ ಮಾಜಿ ಪ್ರಿಯಕರನ ಮನೆಗೆ ಹೋಗಿ ಒಂದಿಷ್ಟು ಹೊತ್ತು ಹರಟೆ ಹೊಡೆದು ಬಂದಿದ್ದೇ ಈ ಗಾಳಿಸುದ್ದಿಗೆ ದೊಡ್ಡ ಕಾರಣ. ಆದರೆ ಮಾಜಿ ಹಾಗು ಹಾಲಿ ಪ್ರಿಯಕರನ ಬಗ್ಗೆ ಏನೇ ಮಾತುಕಥೆಯಾಗುತ್ತಿದ್ದರೂ, ಇವರಿಬ್ಬರು ಮಾತ್ರ ತಮಗೇನು ಗೊತ್ತೇ ಇಲ್ಲ ಅಂತ ಸುಮ್ಮನಿದ್ದು ಬಿಟ್ಟಿದ್ದಾರೆ. ಅಸಲಿಗೆ ಸುದ್ದಿ ಹರಿದಾಡುತ್ತಿರುವುದು ಏನು ಅಂತ ನೋಡಿ.

deepika

ಬಾಲಿವುಡ್ ನಲ್ಲಿ ಸಿಕ್ಕಾ-ಪಟ್ಟೆ ಬ್ಯುಸಿಯಾಗಿದ್ದರೂ, ಬಂದ ಅವಕಾಶಗಳನ್ನ ಕೈ ಚೆಲ್ಲಬಾರದು ಅಂತ ಹಾಲಿವುಡ್ ಕಡೆ ಮುಖ ಮಾಡಿದ್ದಳು ದೀಪಿಕಾ ಪಡುಕೋಣೆ. ಅಲ್ಲಿ xxx ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಹಾಗೆ, ಇಲ್ಲಿ ಬಿಟೌನ್ ನಲ್ಲಿ ಸುದ್ದಿಗೆ ಸಿಕ್ಕಿಕೊಂಡಳು. ಹೀಗಿರುವಾಗಲೇ ಶೂಟಿಂಗ್ ಬಿಡುವು ಮಾಡಿಕೊಂಡು ಬಂದ ಡಿಪ್ಪಿ ಸೀದಾ ಮಾಜಿ ಪ್ರಿಯಕರ ರಣ್ಬೀರ್ ಕಪೂರ್ ಅಪಾರ್ಟ್ಮೆಂಟ್ ಗೆ ಹೋಗಿದ್ದಳು. ಅದೇ ಈಗ ಈ ಗಾಳಿ ಸುದ್ದಿಗೆ ಪ್ರಮುಖ ಕಾರಣ.

ದೀಪಿಕಾ ಅದ್ಯಾವಾಗ ರಣ್ಬೀರ್ ಮನೆಗೆ ಬಂದು ಹೋದಳೋ, ಆಗ ರಣ್ಬೀರ್ ದೀಪಿಕಾ ನೋಡಲು ಹಾಲಿವುಡ್ ಗೆ ಹೋಗಿದ್ದು ಬೆಳಕಿಗೆ ಬಂತು. ಇದೇ ಗ್ಯಾಪಿನಲ್ಲಿ ಕತ್ರಿನಾ ಕೈಫ್ ಜೊತೆ ಬ್ರೇಕ್ ಅಪ್ ಮಾಡಿಕೊಂಡು ಭಗ್ನ ಪ್ರೇಮಿಯಾಗಿದ್ದ ಕಪೂರ್ ಖಾಂದಾನಿನ ಈ ಕಂದ ಮತ್ತೆ ದೀಪಿಕಾ ಹಿಂದೆ ಬಿದ್ದ ಅಂತ ಸುದ್ದಿ ಆಯ್ತು. ಇಷ್ಟೆಲ್ಲ ಆದರೂ ಹಾಲಿ ಪ್ರಿಯಕರ ರಣ್ವೀರ್ ಸಿಂಗ್ ಮಾತ್ರ ಪ್ರತಿಕ್ರಿಯೆ ಕೊಡಲಿಲ್ಲ..

ಇಷ್ಟೆಲ್ಲ ಗಮನಿಸಿದ ಮೇಲೆ ಬಾಲಿವುಡ್ ಪಂಡಿತರಿಗೆ ಈಗ ಡೌಟ್ ಶುರುವಾಗಿದೆ. ಮತ್ತೆ ರಣ್ಬೀರ್ ಕಪೂರ್ ಹಾಗು ದೀಪಿಕಾ ನಡುವೆ ಏನೋ ಶುರುವಾಗಿದೆ ಅಂತ ಅವರು ಬಲವಾಗಿ ನಂಬಿದ್ದಾರೆ. ಆದರೆ ದೀಪಿಕಾ ಮ್ಯಾನೇಜರ್ ಪ್ರಕಾರ ” ದೀಪಕಾಗೆ ಎರಡು ಬಿಗ್ ಬ್ಯಾನರ್ ನಲ್ಲಿ ನಟಿಸೋಕೆ ಅವಕಾಶ ಸಿಕ್ಕಿದೆ. ಅದರಲ್ಲಿ ಒಂದು ರಣ್ಬೀರ್ ಕಪೂರ್ ಜೊತೆಯಾದರೆ, ಇನ್ನೊಂದು ರಣ್ವೀರ್ ಸಿಂಗ್ ಜೊತೆ. ಆದರೆ ಬ್ಯುಸಿಯಾಗಿರುವುದರಿಂದ ನಟಿಗೆ ಯಾವುದಾದರೂ ಒಂದು ಸಿನಿಮಾದಲ್ಲಿ ಮಾತ್ರ ನಟಿಸೋಕಷ್ಟೇ ಸಾಧ್ಯವಂತೆ.”

ಹೀಗಾಗಿ ಇಬ್ಬರಲ್ಲಿ ಯಾರನ್ನ ಆಯ್ಕೆ ಮಾಡಿಕೊಳ್ಳುತ್ತಾಳೆ ಅನ್ನುವುದರ ಮೇಲೆ ಈ ಗಾಳಿಸುದ್ದಿಯನ್ನ ನಂಬಬೇಕೋ ಬಿಡಬೇಕೋ ಅನ್ನುವ ಸಂಗತಿ ಗೊತ್ತಾಗಲಿದೆ. ಒಂದು ವೇಳೆ ಮಾಜಿ ಪ್ರಿಯಕರನ ಕಡೆ ದೀಪಿಕಾ ವಾಲಿದರೆ ಬಿಟೌನ್ `ರಣ್’ ರಂಗ ಆದರೂ ಆಗಬಹುದು… ಏನಕ್ಕೂ ನಿರೀಕ್ಷಿಸಿ.

Comments are closed.