ರಕ್ತಕ್ಕೂ ಒಂದು App !

blood

ಈಗೀಗ ಎಲ್ಲವೂ ಬೆರಳ ತುದಿಯಲ್ಲೇ ಎನ್ನುವಂತಾಗಿದೆ. ಬ್ಯಾಂಕ್ ಕೆಲಸಗಳಿಗೆ ಒಂದು App, ಊಟ ತರಿಸೋಕೆ ಒಂದು App, ಬಟ್ಟೆ ಖರೀದಿಸೋಕೆ ಒಂದು App…ಹೀಗೆ ಪ್ರತಿಯೊಂದೂ ಆಪ್ಲಿಕೇಶನ್ ಗಳ ಮೂಲಕವೇ ನಡೆಯೋ ಜಮಾನಾ ಇದು. ಈ ಸಾಲಿಗೆ ಲೇಟೆಸ್ಟ್ ಎಂಟ್ರಿ ಬ್ಲಡ್ ಬ್ಯಾಂಕಿಂಗ್ App. ಅಂದ್ರೆ, ಮಾನವ ರಕ್ತವನ್ನು ಶೇಖರಿಸಿ, ಇನ್ನೊಬ್ಬರಿಗೆ ದಾನ ಮಾಡಲು ಸಹಾಯಮಾಡುವಂಥ App ಒಂದು ಇದೀಗ ರೆಡಿಯಾಗಿದೆ.
ಇದೊಂದು ಪಕ್ಕಾ ಬ್ಯಾಂಕಿಂಗ್ App. ಬ್ಯಾಂಕಿಂಗ್ ಅಪ್ಲಿಕೇಶನ್ ಗಳಲ್ಲಿ ಹಣವನ್ನು ಡೆಪಾಸಿಟ್ ಮಾಡೋದು, ಬೇರೊಬ್ಬರಿಗೆ ಹಣ ಟ್ರಾನ್ಸಫರ್ ಮಾಡೋದು, ಬೇಕಾದಾಗ ವಿತ್ ಡ್ರಾ ಮಾಡೋದು ಎಲ್ಲಾ ಅದೆಷ್ಟು ಸುಲಭವಾಗಿ ಮಾಡುತ್ತೇವೆ. ಅದೇ ರೀತಿ ಈ Appನಲ್ಲೂ ಆ ಎಲ್ಲಾ ಕೆಲಸಗಳನ್ನೂ ಮಾಡಬಹುದು. ಒಂದೇ ವ್ಯತ್ಯಾಸ ಅಂದ್ರೆ ಅಲ್ಲಿ ಹಣದಲ್ಲಿ ಮಾಡೋ ವಹಿವಾಟನ್ನು ಇಲ್ಲಿ ರಕ್ತದಲ್ಲಿ ಮಾಡೋದು. ಅಂದ್ಹಾಗೆ ಇದು ಬ್ಲಡ್ ಬ್ಯಾಂಕಿಂಗ್ App.
ಒಂದು ಸಲ ನೀವು ರಕ್ತದಾನ ಮಾಡಿದ್ರೆ ಈ App ನಿಮ್ಮ ಟ್ರಾಕ್ ರೆಕಾರ್ಡ್ ಇಡಲು ಶುರು ಮಾಡುತ್ತೆ. ನೀವು ಎಷ್ಟು ಯೂನಿಟ್ ರಕ್ತವನ್ನು ದಾನ ಮಾಡ್ತೀರೋ ಅಷ್ಟು ನಿಮ್ಮ ಅಕೌಂಟಿನಲ್ಲಿ ಜಮೆಯಾಗುತ್ತಾ ಹೋಗುತ್ತೆ. ಇದನ್ನ ನಿಮ್ಮ ಪರಿಚಿತರು ಅಥವಾ ಸಂಬಂಧಿಕರಿಗೆ ರಕ್ತದ ಅವಶ್ಯಕತೆ ಇದ್ದರೆ ತಮ್ಮ ಆಪ್ ಮೂಲಕ ಕೂಡಲೇ ಅವರಿಗೆ ರಕ್ತ ದೊರೆಯುವಂತೆ ಮಾಡಬಹುದು. ರೆಡ್ ಕ್ರಾಸ್ ಸಂಸ್ಥೆಯ ರಕ್ತದಾನ ಘಟಕ ಈ ಆಪ್ ಅಭಿವೃದ್ಧಿಪಡಿಸಿದೆ.

blood donation
ಈ ಆಪ್ ಮೂಲಕ ರಕ್ತದಾನ ಮಾಡಿರುವವರು ಅದರ ಸದ್ಬಳಕೆಯಾಗುವಂತೆ ನೋಡಿಕೊಳ್ಳಬಹುದು. ಅಷ್ಟೇ ಅಲ್ಲ, ಎಮರ್ಜೆನ್ಸಿ ಟೈಮಲ್ಲಿ ರಕ್ತ ಸಿಗದೇ ಇರುವ ಸಮಸ್ಯೆಗೆ ಈ ಆಪ್ ದೊಡ್ಡ ಮಟ್ಟಿಗಿನ ಪರಿಹಾರ ನೀಡುತ್ತದೆ. ಬ್ಯಾಂಕಿಂಗ್ ಆಪ್ ನಲ್ಲಿ ಹಣವನ್ನು ಟ್ರಾನ್ಸಫರ್ ಮಾಡುವಂತೆ ಬ್ಲಡ್ ಬ್ಯಾಂಕಿಂಗ್ ಆಪ್ ನಲ್ಲಿ ಬೇರೆಯವರ ಅಕೌಂಟಿಗೆ ಇಂತಿಷ್ಟು ಯೂನಿಟ್ ರಕ್ತವನ್ನು ರವಾನೆ ಮಾಡಬಹುದು. ಅವರು ಆಪ್ ನಲ್ಲಿ ತಮ್ಮ ಅಕೌಂಟಿಗೆ ಬಂದಿರುವ ರಕ್ತದ ಡೀಟೆಲ್ಸ್ ನ್ನು ತೋರಿಸಿದರೆ ರೆಡ್ ಕ್ರಾಸ್ ಮತ್ತು ಅದರ ಸಹಾಯಕ ಸಂಸ್ಥೆಗಳು ಆ ಕೂಡಲೇ ರಕ್ತ ನೀಡುತ್ತವೆ.

ಹೆಚ್ಚಾಗಿ ಯುವಜನತೆ ಆಪ್ ಗಳ ಮೂಲಕವೇ ಕೆಲಸಗಳನ್ನು ಮಾಡಲು ಬಯಸುತ್ತದೆ. ಆದ್ದರಿಂದ ಅವರನ್ನು ಹೆಚ್ಚೆಚ್ಚು ರಕ್ತದಾನ ಮಾಡೋದಕ್ಕೂ ಈ ಆಪ್ ಮೂಲಕ ಪ್ರೋತ್ಸಾಹ ನೀಡಬಹುದು ಅನ್ನೋದು ರೆಡ್ ಕ್ರಾಸ್ ಸಂಸ್ಥೆಯ ಆಲೋಚನೆ. ಅಷ್ಟೇ ಅಲ್ಲ, ಒಮ್ಮೆ ರಕ್ತದಾನ ಮಾಡಿದ ವ್ಯಕ್ತಿ ಮತ್ತೆ ನಾಲ್ಕು ತಿಂಗಳ ನಂತರ ರಕ್ತದಾನ ಮಾಡಲು ಈ ಆಪ್ ಒಂದು ರಿಮೈಂಡರ್ ಕೂಡ ಕಳಿಸುತ್ತದೆ. ಇದೆಲ್ಲದರಿಂದಾಗಿ ಈಗಿರುವ ರಕ್ತದ ಅಭಾವಕ್ಕೆ ಉತ್ತಮ ಪರಿಹಾರ ಕೊಡುವ ಭರವಸೆಯನ್ನು ತಂತ್ರಜ್ಞಾನದ ಮೂಲಕ ಮಾಡಲು ರೆಡ್ ಕ್ರಾಸ್ ಸಂಸ್ಥೆ ಮುಂದೆ ಬಂದಿದೆ. ಭವಿಷ್ಯದಲ್ಲಿ ರಕ್ತದ ಅಭಾವದಿಂದ ಜೀವ ಕಳೆದುಕೊಳ್ಳುವ ಸನ್ನಿವಶಗಳನ್ನು ತಡೆಗಟ್ಟಲು ಈ ಆಪ್ ಸಹಕಾರಿಯಾಗಬಹುದು ಎನ್ನುವ ಭರವಸೆಯಿದೆ.

Comments are closed.

Social Media Auto Publish Powered By : XYZScripts.com