ಅಮಿತಾಭ್-ಐಶ್ವರ್ಯ ಮುಖಕ್ಕೆ `ಕಪ್ಪು’ಮಸಿ !

aishwarya-rai-amitabh-bachchan-759

ತೆರಿಗೆದಾರರ ಸ್ವರ್ಗ ಅಂತಲೇ ಕರೆಸಿಕೊಳ್ಳುವ ಪನಾಮಾದ ಕಾನೂನು ಸಂಸ್ಥೆಯಿಂದ ದಾಖಲೆಗಳ ಸೋರಿಕೆಯಾಗಿವೆ. ವಿಶ್ವದ ಗಣ್ಯರು ತಮ್ಮ ದೇಶಕ್ಕೆ ಕಟ್ಟಬೇಕಿದ್ದ ತೆರಿಗೆಯನ್ನ ವಂಚಿಸಿ ಬೇರೆಡೆ ಹಣ ಹೂಡಿಕೆ ಮಾಡಿದ್ದರು. ಇದರಲ್ಲಿ ಭಾರತೀಯರೂ ಸೇರಿದ್ದಾರೆ. ಆದರೆ ಇಲ್ಲಿ ಕುತೂಹಲ ಕೆರಳಿಸಿರೊ ಸಂಗತಿ ಬೇರೆನೇ ಇದೆ. ಬಾಲಿವುಡ್ ಮೋಸ್ಟ್ ರೆಸ್ಪೆಕ್ಟೆಡ್ ಆಕ್ಟರ್ ಅಮಿತಾಬ್ ಬಚ್ಚನ್ ಹಾಗು ಅವ್ರ ಸೊಸೆ ಐಶ್ ಕೂಡ ಈ ಲಿಸ್ಟ್ನಲ್ಲಿದ್ದಾರೆ. ಹಾಗಿದ್ದರೆ ಇವರಿಬ್ಬರ ಗುಪ್ತನಿಧಿ ಎಲ್ಲೆಲ್ಲಿ ಹೂಡಿಕೆಯಾಗಿದೆ.?

ವಿಶ್ವವನ್ನ ಆಳ್ತಿರೋ ನಾಯಕರಿಂದ ಹಿಡಿದು, ನಟರು ಹಾಗು ವ್ಯಾಪಾರಸ್ಥರು ತೆರಿಗೆಯನ್ನ ವಂಚಿಸಿ, ಅಕ್ರಮವಾಗಿ ಬೇರೆ ಬೇರೆ ಕಡೆ ಹಣ ಹೂಡಿಕೆ ಮಾಡಿರೋದು ಈಗ ಬಯಲಾಗಿದೆ. ವಿದೇಶದಲ್ಲಿರುವ ಅನಾಮಿಕ ಕಂಪನಿಗಳ ಮೂಲಕ ತಮ್ಮ ವ್ಯವಹಾರವನ್ನ ಗೌಪ್ಯವಾಗಿರಿಸುವ ಸಂಸ್ಥೆ ಮೊಸ್ಸೆಕ್ ಫೊನ್ಸೆಕಾ. ಇಲ್ಲಿ ಬಿಟೌನ್ನ ಬಿಗ್ ಬಿ ಹಾಗು ಅವರ ಸೊಸೆ ಐಶ್ವರ್ಯ ರೈ ಬಚ್ಚನ್ ಹಣ ಹೂಡಿರುವುದು ಈಗ ಬಯಲಾಗಿದೆ.

445355-mossack-fonseca-reuters
ಸುಮಾರು ಎಂಟು ತಿಂಗಳುಗಳ ಕಾಲ ವಿಶ್ವದ ಪ್ರಮುಖ ಪತ್ರಿಕೆಗಳ ತನಿಖಾ ವರದಿಗಾರರು ಈ ಕೆಲಸದಲ್ಲಿ ಭಾಗಿಯಾಗಿದ್ದರು. ಮೊಸ್ಸೆಕ್ ಫೊನ್ಸೆಕಾ ಸಂಸ್ಥೆಯಲ್ಲಿ ವಿಶ್ವದ ಪ್ರಮುಖರು ಹೂಡಿರುವ ಹಣದ ಪಟ್ಟಿಯನ್ನ ಹೊರತೆಗೆಯಲಾಗಿದೆ. ಸುಮಾರು 1.15 ಕೋಟಿ ದಾಖಲೆ ಪತ್ರಗಳನ್ನ ಬಹಿರಂಗ ಪಡಿಸಲಾಗಿದೆ. ಇದರಲ್ಲಿ ಭಾರತದ 500 ಮಂದಿ ಹೆಸರುಗಳಿದ್ದು, ಇದರಲ್ಲಿ ಬ್ಯುಸಿನೆಸ್ ಮ್ಯಾನ್, ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ರಾಜಕಾರಣಿಗಳು ಸೇರಿದೆ. ಇದರಲ್ಲಿ ಅಮಿತಾಬ್ ಬಚ್ಚನ್ ಹಾಗು ಐಶ್ವರ್ಯ ರೈ ಹೆಸರು ಪ್ರಮುಖವಾಗಿ ದಾಖಲಾಗಿದೆ. ಅಷ್ಟೆ ಅಲ್ಲದೇ ಎಲ್ಲೆಲ್ಲಿ ಹಣ ಹೂಡಿದ್ದಾರೆ ಅನ್ನೋದು ಕೂಡ ಈಗ ಬಟಬಯಲಾಗಿದೆ.

ಬಿಗ್ ಬಿ ಅಮಿತಾಬ್ ಬಚ್ಚನ್ 1995ರಲ್ಲಿ ಎಬಿಸಿಎಲ್ ಕಂಪನಿ ಪ್ರಾರಂಭಿಸೋದಕ್ಕೂ ಎರಡು ವರ್ಷ ಮುನ್ನ ನಾಲ್ಕು ಶಿಪ್ಪಿಂಗ್ ಕಂಪನಿಗಳಲ್ಲಿ ಹಣ ಹೂಡಿದ್ದಾರೆ. 1993ರಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಕಂಪನಿ ಹಾಗೂ ಬಹಾಮಾ ಮೂರು ಶಿಪ್ಪಿಂಗ್ ಕಂಪನಿಗಳಿಗೆ ನಿರ್ದೇಶಕರಾಗಿರೋದು ದಾಖಲೆಗಳ ಸಮೇತ ಸಿಕ್ಕಿದೆ. ಈ ನಾಲ್ಕೂ ಕಂಪನಿಗಳಿಗೆ ಅಮಿತಾಬ್ ಬಚ್ಚನ್ ನಿರ್ದೇಶಕಾಗಿದ್ದರು. ಮಾತ್ರವಲ್ಲದೆ ಕೆಲವು ದಿನಗಳ ಬಳಿಕ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಗ್ಗೆ ದಾಖಲೆಗಳು ಲಭ್ಯವಾಗಿದೆ.
2016-04-04T060627Z_2_LYNXNPEC33012_RTROPTP_2_PANAMA-TAX.JPG.cf
ಬಿಗ್ಬಿ ಒಡೆತನದಲ್ಲಿ ಸೀ ಬಲ್ಕ್ ಶಿಪ್ಪಿಂಗ್ ಕಂಪನಿ ಲಿಮಿಟೆಡ್, ಲೇಡಿ ಶಿಪ್ಪಿಂಗ್ ಲಿಮಿಟೆಡ್, ಟ್ರೆಷರ್ ಶಿಪ್ಪಿಂಗ್ ಹಾಗು ಟ್ರಂಪ್ ಶಿಪ್ಪಿಂಗ್ ಲಿಮಿಟೆಡ್ ಎಂಬ ನಾಲ್ಕು ಕಂಪನಿಗಳಿವೆ. ಇದಕ್ಕೆ ಇನ್ನೂ ನಾಲ್ಕು ಮಂದಿ ನಿರ್ದೇಶಕರಿದ್ದು ಅವ್ರಲ್ಲೊಬ್ಬರು ಉಮೇಶ್ ಸಹಾಯ್ ಎಂಬ ಭಾರತೀಯನ ಹೆಸರು ಕೂಡ ಸೇರಿಕೊಂಡಿದೆ. ಹೀಗಾಗಿ ತೆರಿಗೆ ವಂಚನೆ ಮಾಡಿರೋದು ಪನಾಮ ಪೇಪರ್ಸ್ನಿಂದ ಈಗ ಬೆಳಕಿಗೆ ಬಂದಿದೆ.

ಅಮಿತಾಬ್ ಸೊಸೆ ಐಶ್ವರ್ಯ ರೈ ಬಚ್ಚನ್ ಕೂಡ 2005ರಲ್ಲಿ ಅಮಿತ್ ಪಾಟ್ರ್ನಸ್ ಲಿಮಿಟೆಡ್ನ ನಿರ್ದೇಶಕರಾಗಿದ್ದರು. ತದನಂತರ ಅಂದ್ರೆ ಮೂರು ವರ್ಷಗಳ ಬಳಿಕ 2008ರಲ್ಲಿ ಐಶ್ ಅದೇ ಸಂಸ್ಥೆಯ ಶೇರುದಾರರಾಗಿದ್ದಾರೆ. ಹೀಗಾಗಿ ಒಂದೇ ಕುಟುಂಬದ ಇಬ್ಬರು ಸದಸ್ಯರು ತೆರಿಗೆಯನ್ನ ವಂಚಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಐಶ್ ಅವರ ಮಾಧ್ಯಮ ಸಲಹೆಗಾರ, ಇದೆಲ್ಲ ಸುಳ್ಳು ದಾಖಲೆಗಳು ಅನ್ನೋ ಸಿದ್ಧ ಉತ್ತರ ನೀಡಿದ್ದಾರೆ.

ಇವರ ಜೊತೆ ಇನ್ನೂ ಪ್ರಮುಖರ ಹೆಸರು ಕೂಡ ಕೇಳಿಬಂದಿವೆ. ಆದರೆ ಅಮಿತಾಬ್ ಬಚ್ಚನ್ ಈ ಪ್ರಕರಣದ ಬಗ್ಗೆ ಎಲ್ಲೂ ಪ್ರತಿಕ್ರಿಯಿಸೋ ಗೋಜಿಗೆ ಹೋಗಿಲ್ಲ. ಕೆಲವು ದಿನಗಳ ಹಿಂದೆ ಬಿಗ್ ಬಿ ಸಿನಿಮಾಗಳಿಗೆ ಗುಡ್ ಬೈ ಹೇಳಲಿದ್ದು, ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಗಳಿವೆ ಅನ್ನುವ ಗಾಳಿ ಸುದ್ದಿ ಹಬ್ಬಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಅಮಿತಾಬ್ಗೆ ಇದು ದೊಡ್ಡ ಮಟ್ಟದ ಹಿನ್ನೆಡೆಯಾಗಲಿದೆ. ಅಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ ಪ್ರಕಾರ ಇದು ಅಪರಾಧ. ಹೀಗಾಗಿ ಮುಂದೆ ಈ ಪ್ರಕರಣ ಇನ್ಯಾವ ಹಾದಿ ಹಿಡಿಯತ್ತೋ ಅನ್ನೋ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು

Comments are closed.

Social Media Auto Publish Powered By : XYZScripts.com