ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್ ಶೇರಿಂಗ್ ಸೌಲಭ್ಯ

ನವದೆಹಲಿ: ಹೊಸ ಹೊಸ ಇಮೋಟ್‌ಐಕಾನ್‌ಗಳನ್ನು ಸೇರಿಸಿ ಅಪ್‌ಡೇಟ್ ಆಗಿರುವ ವಾಟ್ಸಾಪ್ ಇದೀಗ ಡಾಕ್ಯುಮೆಂಟ್ ಶೇರ್ ಮಾಡುವ ಸೌಲಭ್ಯವನ್ನೂ ಒದಗಿಸಿದೆ.
ವಾಟ್ಸಾಪ್ ಅಪ್‌ಡೇಟ್ ಆಗಿದ್ದರೆ ಚಾಟಿಂಗ್ ಮೂಲಕ ಡಾಕ್ಯುಮೆಂಟ್ ಗಳನ್ನು ಶೇರ್ ಮಾಡಬಹುದಾಗಿದೆ.

ಆಂಡ್ರಾಯಿಡ್ ಒಎಸ್ ನಲ್ಲಿ
ವಾಟ್ಸಾಪ್ ಚಾಟ್ ಬ್ಲಾಕ್‌ಗೆ ಹೋಗಿ ಅಲ್ಲಿ ಅಟ್ಯಾಚ್ ಫೈಲ್ ಎಂಬ ಆಪ್ಶನ್ ಟಚ್ ಮಾಡಿದರೆ ಅಲ್ಲಿ ಕ್ಯಾಮೆರಾ, ಗ್ಯಾಲರಿ, ಆಡಿಯೋ, ಲೊಕೇಷನ್, ಕಾಂಟಾಕ್ಟ್ ಎಂಬೀ ಆಪ್ಶನ್‌ಗಳ ಜತೆಗೆ ಡಾಕ್ಯುಮೆಂಟ್ ಎಂಬ ಆಪ್ಶನ್ ಲಭ್ಯವಾಗುತ್ತಿದೆ.

ಐಒಎಸ್ ನಲ್ಲಿ

ಅಪ್‌ಲೋಡ್ ಐಕಾನ್ ಟಚ್ ಮಾಡಿದರೆ ಶೇರ್ ಡಾಕ್ಯುಮೆಂಟ್ ಎಂಬ ಆಪ್ಶನ್ ಸಿಗುತ್ತದೆ.

ಆಂಡ್ರಾಯಿಡ್ ಮತ್ತು ಐಒಎಸ್ ಫೋನ್‌ಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗುತ್ತಿದೆ.

ಆದಾಗ್ಯೂ, ನೀವು ಡಾಕ್ಯುಮೆಂಟ್‌ನ್ನು ಚಾಟ್ ನಲ್ಲಿ ಕಳುಹಿಸಬೇಕೆಂದಿದ್ದರೆ, ನೀವು ಕಳುಹಿಸುತ್ತಿರುವ ವ್ಯಕ್ತಿಯ ವಾಟ್ಸಾಪ್ ಅಪ್‌ಡೇಟೆಡ್ ಆಗಿರಬೇಕು. ಅಪ್‌ಡೇಟ್ ಆಗದೇ ಇರುವ ವಾಟ್ಸಾಪ್‌ಗೆ ಡಾಕ್ಯುಮೆಂಟ್ ಶೇರಿಂಗ್ ಸಾಧ್ಯವಾಗುವುದಿಲ್ಲ.

Comments are closed.