ಬಾಲಿವುಡ್ ನಲ್ಲೂ ಸದ್ದು ಮಾಡಲಿದೆಯಾ ‘ಶಿವಲಿಂಗ’?

ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ‘ಶಿವಲಿಂಗ’ ಸಿನಿಮಾ ಎಲ್ಲೆಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಪಿ.ವಾಸು ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ದಕ್ಷಿಣ ಭಾರತದ ಖ್ಯಾತ ನಟರು ವೀಕ್ಷಿಸಿ ಈಗಾಗಲೇ ಒಳ್ಳೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ಮಾತ್ರವಲ್ಲದೇ, ರೀಮೇಕ್ ಮಾಡಲು ಮುಂದೆ ಬಂದಿದ್ದಾರೆ.

ಇದೀಗ ಹೊಸ ವಿಚಾರ ಏನಪ್ಪಾ ಅಂದ್ರೆ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅಭಿನಯದ ‘ಶಿವಲಿಂಗ’ ಚಿತ್ರ ಬಾಲಿವುಡ್ ಅಂಗಳಕ್ಕೂ ಕಾಲಿಡುವ ಲಕ್ಷಣಗಳಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಬಿಟೌನ್ ನಲ್ಲೂ ಸಿನಿಮಾ ಸದ್ದು ಮಾಡಲಿದೆ.

Shivalinga

ಅಂದಹಾಗೆ ‘ಶಿವಲಿಂಗ’ ನನ್ನು ಬಾಲಿವುಡ್ ಅಂಗಳಕ್ಕೂ ಕೊಂಡೊಯ್ಯಬಹುದು ಎಂಬ ಆಲೋಚನೆ ಬಂದಿದ್ದು ಬೇರಾರಿಗೂ ಅಲ್ಲ, ಸ್ಯಾಂಡಲ್ ವುಡ್ ನ ನಿರ್ಮಾಪಕ ಕಮ್ ನಟ ರಾಕ್ ಲೈನ್ ವೆಂಕಟೇಶ್ ಅವರಿಗೆ.

ಇನ್ನು ಬಾಲಿವುಡ್ ನಲ್ಲಿ ಕನ್ನಡದ ‘ಶಿವಲಿಂಗ’ ನನ್ನು ಯಾರು ಪ್ರತಿಷ್ಠಾಪನೆ ಮಾಡ್ತಾರೆ ಅಂತ ನೀವು ಯೋಚನೆ ಮಾಡುತ್ತಿದ್ದೀರಾ?

Comments are closed.