‘ಜಗ್ಗು ದಾದಾ’ ಚಿತ್ರದಲ್ಲಿ ದರ್ಶನ್ ಜೊತೆ ಅಂಬರೀಶ್?

ಚಾಲೆಂಜಿಂಗ್ ಸ್ಟಾರ್ ಮತ್ತು ರೆಬೆಲ್ ಸ್ಟಾರ್ ಕಾಂಬಿನೇಷನ್ ಫ್ಲಾಪ್ ಆದ ಉದಾಹರಣೆಯೇ ಇಲ್ಲ. ‘ಅಣ್ಣಾವ್ರು’, ‘ಬುಲ್ ಬುಲ್’ ಮತ್ತು ‘ಅಂಬರೀಶ’ ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸೀನಿಯರ್ ಸ್ಟಾರ್ ಅಂಬರೀಶ್ ತೆರೆಹಂಚಿಕೊಂಡು ನಿಮ್ಮನ್ನೆಲ್ಲಾ ರಂಜಿಸಿದ್ದರು.

ಇಬ್ಬರ ಜುಗಲ್ಬಂದಿ ‘ಜಗ್ಗು ದಾದಾ’ ಸಿನಿಮಾದಲ್ಲೂ ಮುಂದುವರೆಯಲಿದೆಯಾ? ಹೀಗೊಂದು ಅನುಮಾನ ನಮಗೆ ಮೂಡಲು ಕಾರಣ ಈ ಫೋಟೋ….

Cinema3

ದರ್ಶನ್ ಅಭಿನಯಿಸುತ್ತಿರುವ ‘ಜಗ್ಗು ದಾದಾ’ ಶೂಟಿಂಗ್ ಸ್ಪಾಟ್ ನಲ್ಲಿ ಕ್ಲಿಕ್ ಆಗಿರುವ ಫೋಟೋ ಇದು. ದರ್ಶನ್, ನಿರ್ದೇಶಕ ರಾಘವೇಂದ್ರ ಹೆಗಡೆ ಜೊತೆ ಅಂಬರೀಶ್ ರನ್ನ ನೀವು ಫೋಟೋದಲ್ಲಿ ಕಾಣಬಹುದು.

ಹಾಗಾದ್ರೆ, ‘ಜಗ್ಗು ದಾದಾ’ ಚಿತ್ರದಲ್ಲಿ ಅಂಬರೀಶ್ ಮಿಂಚ್ತಾರಾ? ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ‘ಜಗ್ಗು ದಾದಾ’ ಚಿತ್ರತಂಡ ಹೇಳುವ ಪ್ರಕಾರ, ಶೂಟಿಂಗ್ ಸ್ಪಾಟ್ ಗೆ ಅಂಬರೀಶ್ ಭೇಟಿ ನೀಡಿದ್ದರು ಅಷ್ಟೆ.

ರಾಜಕೀಯ, ಎಲೆಕ್ಷನ್ ಕಿರಿಕಿರಿ ಮಧ್ಯೆ ‘ಜಗ್ಗು ದಾದಾ’ ಶೂಟಿಂಗ್ ನೋಡಲು ಅಂಬಿ ಬಂದಿದ್ದಾರೆ ಅಂದ್ರೆ ಏನಾದರೂ ಸ್ಪೆಷಲ್ ಇರಲೇಬೇಕು. ನೋಡೋಣ, ‘ಜಗ್ಗು ದಾದಾ’ ಅಡ್ಡದಿಂದ ಏನೇನು ಸ್ಪೆಷಲ್ ಕಾದಿದೆ ಅಂತ.

Comments are closed.