ಅಂದು ಮೋದಿ ರಾಜೀನಾಮೆ ಕೇಳಿದ್ದ ಸ್ಮೃತಿ ಇರಾನಿ ಇಂದು ಮೋದಿ ಪರಮಾಪ್ತೆ

ಕಾಲಾಯ ತಸ್ಮೇ ನಮಃ ಎನ್ನುವುದಕ್ಕೆ ಇದೊಂದು ಉದಾಹರಣೆ, ಅಂದು ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಸಚಿವೆ ಇಂದು ಮೋದಿ ಪರಮಾಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದು ಮೋದಿ ರಾಜೀನಾಮೆಗೆ ಡಿಮಾಂಡ್ ಮಾಡಿದ್ದ ಸಚಿವೆ ಬೇರೆಯಾರೂ ಅಲ್ಲ, ಕಳೆದೆರಡು ದಿನಗಳಿಂದ ಸಂಸತ್ತಿನಲ್ಲಿನ ತನ್ನ ಬೆಂಕಿಯುಂಡೆಯಂತಹ ಭಾಷಣದಿಂದ ವಿಪಕ್ಷಗಳಿಗೆ ಬಿಸಿಮುಟ್ಟಿಸಿ, ಅಷ್ಟೇ ವಿವಾದ ಹುಟ್ಟು ಹಾಕಿರುವ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮೃತಿ ಇರಾನಿ.

ಹೌದು, ಬಿಜೆಪಿ ಕಾರ್ಯಕರ್ತೆಯಾಗಿದ್ದ ಸ್ಮೃತಿ ಇರಾನಿ, ಡಿಸೆಂಬರ್ 2004ರಲ್ಲಿ ಮೋದಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆ ಸಮಯದಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅಂದು ಸ್ಮೃತಿ, ಮೋದಿ ರಾಜೀನಾಮೆಗೆ ಒತ್ತಾಯಿಸಿದ ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ

ಮೋದಿ ಈ ತಕ್ಷಣದಿಂದಲೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು, ಇಲ್ಲವಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Comments are closed.