Bigg Boss S7 : ಸ್ಪರ್ಧಿಗಳ ಕಣ್ಣಲ್ಲಿ ನೀರು ತರಿಸಿದ ರವಿ ಬೆಳಗೆರೆ ತಾಯಿ ಕಳೆದುಕೊಂಡ ಆ ದಿನ….

ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ ಬದುಕು ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತದೆ. ಇದು ಹಿರಿಯ ಲೇಖಕ ರವಿ ಬೆಳಗೆರೆ ಅವರ ಅನುಭವ ಹಾಗೂ ಮನದಾಳದ ಮಾತು.

ಬಿಗ್ ಬಾಸ್ ಕನ್ನಡ ಸೀಸನ್ 7 ಆರಂಭವಾಗಿ ಇಂದಿಗೆ ಐದು ದಿನಗಳು ಪೂರ್ಣಗೊಂಡು ಆರನೇ ದಿನಕ್ಕೆ ಕಾಲಿಟ್ಟಿದೆ. ಮನೆಯ ಎಲ್ಲಾ ಸ್ಪರ್ಧಿಗಳು ಒಂದೊಂದು ಕ್ಷೇತ್ರದಿಂದ ಆಗಮಿಸಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ತಿಳಿದುಕೊಳ್ಳೋದಕ್ಕೆ ಇನ್ನೂ ಕೊಂಚ ಸಮಯದ ಬೇಕು.

ಕಳೆದ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನ ಅರ್ಥೈಸಿಕೊಳ್ಳಲು ಹಾಗೂ ಅವರಲ್ಲಿರುವ ಭಾವುಕತೆ ಹೊರಹಾಕುವಂತಹ ಪ್ರಯತ್ನ ನಡೆಯಿತು. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿರುವ ಸರ್ಫರ್ಧಿಗಳಿಗೆ ಅವರವರ ತಂದೆ-ತಾಯಿ ಬಗ್ಗೆ ಹೇಳಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಅತೀ ಹೆಚ್ಚು ಮನಸ್ಸಿಗೆ ಹತ್ತಿರವಾದ ತಂದೆ-ತಾಯಿ ಬಗ್ಗೆ ಹೇಳಿಕೊಳ್ಳುವಲ್ಲಿ ಸ್ಪರ್ಧಿಗಳು ನೋಡುಗರ ಕಣ್ಣಂಚನ್ನ ಒದ್ದೆ ಮಾಡಿದ್ದಾರೆ.

ಹೌದು… ಮನೆಯ ಸ್ಪರ್ಧಿಗಳು ತಾವು ಅತೀ ಹೆಚ್ಚು ಪ್ರೀತಿಸುವ ತಂದೆ-ತಾಯಿ-ಮಕ್ಯಕಳ ಬಗ್ಗೆ, ಅವರೊಂದಿಗೆ ಕಳದ ಸಿಹಿ-ಕಹಿ ಘಟನೆಗಳನ್ನು ಹೇಳಿಕೊಂಡರು. ಇದರಲ್ಲಿ ಹೆಚ್ಚು ಸ್ಪರ್ಧಿಗಳು  ತಂದೆ-ತಾಯಿಯನ್ನ ಕಳೆದುಕೊಂಡು ಅನುಭವಿಸಿದ ನೋವನ್ನ ಹಂಚಿಕೊಂಡರು. ಹೀಗೆ ತಂದೆ-ತಾಯಿಯನ್ನು ಕಳೆದುಕೊಂಡ ಸಂದರ್ಭವನ್ನು ಹಂಚಿಕೊಳ್ಳುತ್ತಲೇ ಪ್ರೇಕ್ಷಕರ ಕಣ್ಣಂಚನ್ನ ಒದ್ದೆ ಮಾಡಿದ್ದು ಖ್ಯಾತ ಬರಹಗಾರ, ಹಿರಿಯ ಪರ್ತಕರ್ತ, ಪ್ರಾಧ್ಯಾಪಕರಾದ ರವಿ ಬೆಳಗೆರೆ.

ರವಿ ಬೆಳಗೆರೆ ಅವರ ತಾಯಿಗೆ ಪಾರ್ಶ್ವವಾಯು. ಆ ಸಂದರ್ಭದಲ್ಲಿ ಅವರು ತಾಯಿಗೆ ಮಾಡಿದ ಸೇವೆ ನಿಜಕ್ಕೂ ಅದ್ಬುತ. ರವಿ ಅವರು ತಾಯಿ ಮೇಲಿಟ್ಟ ಪ್ರೀತಿಯನ್ನ ಕೇಳ್ತಾಯಿದ್ರೆ ತಾಯಿ ಮಕ್ಕಳ ನಡುವೆ ಇರುವ ಸಂಬಂಧಕ್ಕೆ ಕನ್ನಡಿ ಹಿಡಿದ ಹಾಕಿತ್ತು.

ರವಿ ಅವರು ತಾಯಿ ಪಾರ್ವತಿ ಅವರಿಗೆ ಪಾರ್ಶ್ವವಾಯು ಇದ್ದಾಗಾ ಅವರು ಇದ್ದಕ್ಕಿಂದ್ದಂಗೆ ಬೀಳ್ತಾಯಿದ್ರಂತೆ. ಹೀಗಾಗಿ 21 ವರೆ ವರ್ಷಕ್ಕೆ ರವಿ ಅವರು ಮದುವೆಯಾದ್ರು. ಮೊದಲನೇ ರಾತ್ರಿ ರವಿ ಅವರು ತಮ್ಮ ಹೆಂಡತಿ ಲಲಿತಾಗೆ ತಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿದ್ರಂತೆ. ಇಬ್ಬರು ದಂಪತಿಗಳು ತಾಯಿಯನ್ನ ಚೆನ್ನಾಗಿ ನೋಡಿಕೊಳ್ತಾಯಿರುವಾಗಾ ಎರಡನೇ ಬಾರಿಗೆ ರವಿ ತಾಯಿಗೆ ಪಾರ್ಶ್ವವಾಯು ಹೊಡೆದಿತ್ತು. ತುಂಬಾನೇ ಲಕ್ಷಣವಾಗಿ ಇದ್ದ ತಾಯಿಗೆ ತಂದೆ ಇಲ್ಲವಾದ್ರೂ ಲಕ್ಷಣವಾಗಿ ಹೂವು, ಹಣೆ ತುಂಬಾ ಕುಂಕುಮ ಇಟ್ಟುಕೊಳ್ಳುಲು ಹೇಳ್ತಾಯಿದ್ರಂತೆ ರವಿ. ಜೆಡೆ ಹಾಕ್ತಾಯಿದ್ರು. ಇಂತ ತಾಯಿಗೆ ಮೆದುಳಿನಲ್ಲಿ ರಕ್ತಶ್ರಾವವಾಗಿ ಆ ರಕ್ತ ಬೆನ್ನಿನೊಳಗೆ ಇಳಿದಿತ್ತು. ಆಗ ವೈದ್ಯರು ಬೆನ್ನಿಗೆ ಡಬ್ಬಣದ ಗಾತ್ರದ ಸೂಜಿ ಚುಚ್ಚಿದ್ದು ರವಿ ಅವರ ಮುಂದೆ. ಆ ಕ್ಷಣ ಹೇಳುತ್ತಲೇ ರವಿ ದುಕ್ಕುಸತೊಡಗಿದ್ರು. ಈ ವೇಳೆ 13 ದಿನ ಅವರ ತಾಯಿ ಕೋಮಾದಲ್ಲಿದ್ರಂತೆ. ಆ ಸಂದರ್ಭದಲ್ಲಿ ತಾಯಿಯ ಒಂದು ಮಾತನ್ನ ಕೇಳಲು ರವಿ ಹಪಾಹಪಿಸಿದ್ರು. ಆ ದಿನ ರಾತ್ರಿ ರವಿ ಗಂಜಿ ತರಲು ಮನೆಗೆ ಹೋದಾಗ ತಾಯಿ ಪ್ರಾಣ ಬಿಟ್ಟಿದ್ರು. ತಮ್ಮ ತಾಯಿ ಪ್ರಾಣ ಬಿಡುವಾಗ ತಾವು ಜೊತೆಗಿರಲಿಲ್ವಲ್ಲಾ ಅಂತ ಬಿಗ್ ಬಾಸ್ ಮನೆಯಲ್ಲಿ ಕಣ್ನೀರಿಡುವಾಗ ಸ್ಪರ್ಧಿಗಳ ಕಣ್ಣಂಚಲ್ಲಿ ತನ್ನಿಂದಾನೆ ನೀರು ಹರಿದು ಬಂತು.

ಈ ನೋವನ್ನ ಹೇಳಿಕೊಂಡೆ ನನಗೆ ತಾಯಿ ಇಲ್ಲ ಆದ್ರೆ ಕರ್ನಾಟದಲ್ಲಿ ನನಗೆ ಸಾವಿರಾರು ಅಮ್ಮಂದ್ರು ಇದಾರೆ, ಅಕ್ಕತಂಗಿದ್ರು, ಮಕ್ಕಳು, ಸಹೋದರರು ಇದ್ದಾರೆ ಅನ್ನೋ ಮಾತು ಹೇಳಿ ಭಾವುಕನಾದರು.

ಪತ್ನಿ ಈ ಸಂದರ್ಭದಲ್ಲಿ ರವಿ ಅವರಿಗೆ ಧೈರ್ಯ ತುಂಬಿ ಮುನ್ನಡೆಸಿದ್ರು. ತಾಯಿ ಪಾರ್ವತಿ ಸ್ಮರಣೆಯಲ್ಲಿ ‘ಪ್ರಾರ್ಥನಾ’ ಎನ್ನುವ ಹೆಸರಿನ ಶಾಲೆ ಮಾಡಿದ್ದಾರೆ. ಈ ಶಾಲೆಯ ವಿಶೇಷ ಅಂದ್ರೆ ಅರ್ಜಿಯಲ್ಲಿ ಜಾತಿ ಕಾಲಂ ಇಲ್ಲ. ಈ ಶಾಲೆಯಲ್ಲಿ 8000 ಮಕ್ಕಳು ಓದುತ್ತಾರೆ, 4000 ಸಿಬ್ಬಂದಿ ಕೆಲಸ ಮಾಡ್ತಾರೆ, ನಾಲ್ಕು ಕಾರ್ ಗಳಿವೆ ಆದರೆ ಇದನ್ನೆಲ್ಲಾ ನೋಡಲು ನನ್ನ ತಾಯಿ ಇಲ್ಲ ಎಂದು ರವಿ ಕಣ್ನೀರು ಹಾಕಿದ್ರು.

ಕೊನೆಗೆ ನೋಡುಗರಿಗೆ ರವಿ ಅವರು ಸಂದೇಶ ಕೊಟ್ಟಿದ್ದು ಮಾತ್ರ ಎಲ್ಲರ ಹೃದಯ ತುಂಬಿ ಬಂತು. ‘ಬದುಕಿರುವಾಗ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ ಅಂಥವರನ್ನ ಮುಂದೆ ಬದುಕು ಚೆನ್ನಾಗಿ ನೋಡಿಕೊಳ್ಳುತ್ತದೆ’ ಎಂದು ಸಂದೇಶ ಕೊಡುವ ಮೂಲಕ ತಮ್ಮ ಮಾತು ಮುಗಿಸಿದ್ರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights