BIGG BOSS ನಲ್ಲಿ ನಡೆದೇ ಹೋಯ್ತು ಭಾರೀ ಜಗಳ : ಸಮೀರ್‌-ಚಂದ್ರು ಕಿತ್ತಾಡಿದ್ದಾದರೂ ಏಕೆ..?

ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಸ್ಪರ್ಧಿಗಳೆಲ್ಲರೂ ಒಬ್ಬರಿಗೊಬ್ಬರು ಹೊಂದಿಕೊಂಡು ಖುಷಿ ಖುಷಿಯಾಗಿಯೇ ಕಳೆದಿದ್ದಾರೆ. ಆದರೆ ಲಕ್ಷುರಿ ಬಜೆಟ್‌ ಟಾಸ್ಕ್‌ ಮುಗಿದ ಮೇಲೆ ಮನೆಯಲ್ಲೊಂದು ಬಾರೀ ದೊಡ್ಡ ಜಗಳ ನಡೆದುಬಿಟ್ಟಿತು.

ಅಡುಗೆ ಮನೆಯಲ್ಲಿ ಸಿಹಿ ಕಹಿ ಚಂದ್ರ ಮತ್ತು ಸಮೀರಾಚಾರ್ಯ ಮಧ್ಯೆ ಜಗಳ ನಡೆದೇ ಹೋಯಿತು. ಕೇವಲ ಒಂದೇ ಒಂದು ಜಗ್‌ಗಾಗಿ ಸಿಹಿಕಹಿ ಚಂದ್ರು ಹಾಗೂ ಸಮೀರಾಚಾರ್ಯ ಇಬ್ಬರು ಕೂಗಾಡಿ ರಾದ್ಧಾಂತ ಎಬ್ಬಿಸಿದರು.

ಜಗ್‌ ತೆಗೆದುಕೊಂಡಿದ್ದಕ್ಕಾಗಿ ಸಮೀರಾಚಾರ್ಯ ಅವರ ಮೇಲೆ ಸಿಹಿ ಕಹಿ ಚಂದ್ರು ಕೋಪಗೊಂಡು ಕಿರುಚಾಡಿದ್ದಾರೆ. ಈ ವೇಳೆ ಜಗಳ ಕೇಳಿಸಿಕೊಂಡು ಮನೆಯವರೆಲ್ಲರೂ ಬಂದು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ.

ಕೊನೆಯಲ್ಲಿ ಇಷ್ಟೆಲ್ಲಾ ಆದ ಮೇಲೆ ಇವರಿಬ್ಬರೂ ಮಾಡಿದ್ದು ತಮಾಷೆಗಾಗಿ ಎಂದು ತಿಳಿದುಬಂದಿದ್ದು, ಮನೆಯವರಿಗೆಲ್ಲಾ ಗಾಬರಿ ಮಾಡಲು ಇಬ್ಬರೂ ಮಾತಾಡಿಕೊಂಡು ಈ ರೀತಿ ನಟಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.