ಬಿಗ್‌ಬಾಸ್‌ : ಕಂಗ್ಲೀಷ್‌ ರಾಣಿ ನಿವೇದಿತಾ ಗೌಡ ಸಂಭಾವನೆ ಎಷ್ಟು?

ಕನ್ನಡದ ಬಿಗ್‌ಬಾಸ್‌ ಎಲ್ಲೆಡೆ ಸುದ್ದಿಯಾಗುತ್ತಿದೆ. ಈಗಾಗಲೆ ಸೆಲೆಬ್ರಿಟಿಗಳು ಹಾಗೂ ಸಾಮಾನ್ಯರ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಸೆಲೆಬ್ರಿಟಿಗಳು ಸಾಮಾನ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ.

ಆದರೆ ಯಾರಿಗೂ ತೊಂದರೆ ಮಾಡದೆ ತನ್ನ ಪಾಡಿಗೆ ತಾನು ಸುಮ್ಮನಿರುವ ಬಿಗ್‌ಬಾಸ್‌ನ ಬಾರ್ಬಿ ಡಾಲ್‌ ನಿವೇದಿತಾ, ಸಿಂಪಲ್ಲಾಗಿ ಆಟವಾಡ್ತಿದ್ದಾರೆ. ಬಿಗ್‌ಬಾಸ್‌ ಮನೆಯ ದೃಷ್ಠಿಗೊಂಬೆಯಂತಿರುವ ನಿವೇದಿತಾ, ತನ್ನ ವಿಶಿಷ್ಟ ಮಾತಿನ ಸ್ಟೈಲ್‌ನಿಂದಾಗಿ ಸಖತ್ ಫೇಮಸ್ ಆಗಿದ್ದಾರೆ. ಇವರಿಗೆ ಅಭಿಮಾನಿಗಳೂ ಹುಟ್ಟಿಕೊಂಡಿದ್ದು, ಫೇಸ್‌ಬುಕ್‌ನಲ್ಲಿ ಈಕೆಗಾಗಿ ಪೇಜ್‌ಗಳು ಹುಟ್ಟಿಕೊಂಡಿವೆ. ಅಲ್ಲದೆ ಈಕೆಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಓವರ್‌ ಆ್ಯಕ್ಟಿಂಗ್ ಮಾಡ್ತಾರೆ ಅಂತ ಟೀಕೆಯೂ ವ್ಯಕ್ತವಾಗುತ್ತಿದೆ.

ಈಕೆ ಬಿಗ್‌ಬಾಸ್‌ ಮನೆಯೊಳಗೆ ಬರಲು ತೆಗೆದುಕೊಂಡ ಸಂಭಾವನೆ ಎಷ್ಟು ಅಂತ ಯಾರಿಗೂ ತಿಳಿದಿರಲಿಕ್ಕಿಲ್ಲ. ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಪ್ರತೀ ಸ್ಪರ್ಧಾಳುವಿಗೂ ವಾರಕ್ಕೆ ಇಂತಿಷ್ಟು ಎಂದು ಸಂಭಾವನೆ ಕೊಡುತ್ತಾರಂತೆ. ಹಾಗೆಯೇ ನಮ್ಮ ಬಾರ್ಬಿ ಡಾಲ್‌ ನಿವೇದಿತಾಗೂ 40,000 ರೂ ವಾರಕ್ಕೆ ಸಂಭಾವನೆ ನೀಡಲಾಗುತ್ತಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.