ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಯಶ್ ಮತ್ತು ದರ್ಶನ್ ರನ್ನು ಅಖಾಡಕ್ಕೆ ಧುಮುಕಿಸಲು ಬಿಗ್ ಪ್ಲ್ಯಾನ್….

ಕೆಆರ್‌ಪೇಟೆ ಉಪಚುನಾಣೆಗೆ ಸಂಸದೆ ಸುಮಲತಾ ಅಮಬರೀಶ್ ಅವರನ್ನು ಕರೆದುಕೊಂಡು ಬಂದು ಅಬ್ಬರದ ಪ್ರಚಾರ ಮಾಡಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸರ್ಕಸ್ ಮಾಡ್ತದ್ದೋ. ಇದೀಗ ಜೋಡೆತ್ತುಗಳಾದ ಯಶ್ ಮತ್ತು ದರ್ಶನ್ ಅವರನ್ನು ಅಖಾಡಕ್ಕೆ ಧುಮುಕಿಸಬೇಕೆಂದು ಅದೊಂದು ಪಕ್ಷ ಸರ್ಕಸ್ ಮಾಡ್ತಾ ಇದೆ. ಆಗಿದ್ರೆ ಯಾವ ಪಕ್ಷ ಜೋಡೆತ್ತುಗಳನ್ನು ಕರೆತರಬೇಕು ಅಂತಾ ಸರ್ಕಸ್ ಮಾಡ್ತಾ ಇದೆ ಅಂತೀರಾ ಅದಕ್ಕುತ್ತರ ಇಲ್ಲಿದೆ ನೋಡಿ.

ಕೆಆರ್‌ಪೇಟೆ ಉಪಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿರುವುದರ ಜೊತಗೆ ಹೊಸ ಹೊಸ ತಿರುವುಗಳನ್ನು ಸಹ ಪಡೆದುಕೊಳ್ಳುತ್ತಿದೆ. ಇಷ್ಟುದಿನ ಸ್ವಾಭಿಮಾನದ ಹೆಸರಲ್ಲಿ ಮಂಡ್ಯ ಲೋಕಸಭಾ ಚುನಾಣೆಯಲ್ಲಿ ಗೆಲುವು ಸಾಧಿಸಿರುವ ಸಂಸದೆ ಸುಮಲತಾ ಅಂಬರೀಶ್ ಅವರನ್ನು ತಮ್ಮ ಪಕ್ಷದ ಪರ ಪ್ರಚಾರ ಮಾಡಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಸುಮಲತಾ ಅವರಿಗೆ ದುಂಬಾಲು ಬಿದ್ದಿದ್ರು. ಇದೀಗ ಸುಮಲತಾ ಅಂಬರೀಶ್ ನಾನು ಯಾವುದೇ ಪಕ್ಷಕ್ಕೂ ಸಪೋಟ್ ಮಾಡಲ್ಲ. ನಾನು ತಟಸ್ಥವಾಗಿ ಇರುತ್ತೇನೆ ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಇದೀಗ ಬಿಜೆಪಿ ನೀವು ಬರದೇ ಇದ್ರೆ ಜೋಡೆತ್ತುಗಳು ಎಂದು ಕರೆಸಿಕೊಳ್ಳುವ ದರ್ಶನ್ ಮತ್ತು ಯಶ್ ಅವರನ್ನು ಕಳುಹಿಸಿ ಎಂದು ಸುಮಲತಾ ಅವರಿಗೆ ದುಂಬಾಲು ಬಿದ್ದಿದೆ.

ಇನ್ನು ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಪಕ್ಷ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಬಹಿರಂಗವಾಗಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿತ್ತು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಸುಮಲತಾ ಅವರು ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಯಾಣಗೌಡ ಅವರನ್ನು ಬೆಂಬಲಿಸಿ ಪ್ರಚಾರ ಮಾಡಬೇಕೆಂದು ಸುಮಲತಾ ಅವರನ್ನು ಕೇಳಿಕೊಂಡಿತ್ತು. ಇದಕ್ಕೆ ಸದ್ಯ ಸುಮಲತಾ ಅವರು ನಿರಾಕರಿಸಿದ್ದಾರೆ. ಆದ್ರೆ ಬಿಜೆಪಿ ಇದೀಗ ನೀವು ಬನ್ನಿ, ನೀವು ಬರದೇ ಇದ್ರೆ ಜೋಡೆತ್ತುಗಳನ್ನು ಪ್ರಚಾರಕ್ಕೆ ಕಳಿಸಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ದರ್ಶನ್ ಮತ್ತು ಯಶ್ ಮಂಡ್ಯ ಚುನಾವಣೆಯ ವೇಳೆ ನಾವು ಜೋಡೆತ್ತುಗಳು, ಸುಮಕ್ಕನ ಪರ ನಿಂತು ಅವರನ್ನು ಗೆದ್ದೆ ಗೆಲ್ಲಿಸುತ್ತೇವೆ ಎಂದು ಎದುರಾಳಿಗಳಿಗೆ ಸವಾಲಾಕಿದ್ರು. ಅದರಂತೆ ಈ ಜೋಡೆತ್ತುಗಳು ಸುಮಲತಾ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಈಗಾಗಿ ಈ ಜೋಡೆತ್ತುಗಳ ಜೋಡಿಯನ್ನು ಕೆಆರ್‌ಪೇಟೆ ಉಪಕಣದಲ್ಲಿ ನಾರಾಯಣಗೌಡ ಅವರ ಪರ ನಿಲ್ಲಬೇಕೆಂದು ಬಿಜೆಪಿ ದುಂಬಾಲು ಬಿದ್ದಿದೆ.

ಒಟ್ಟಾರೆ ಇಷ್ಟು ದಿನ ಕಾಂಗ್ರೆಸ್ ಮತ್ತು ಬಿಜೆಪಿ ಸುಮಮಲತಾ ಅವರನ್ನು ತಮ್ಮ ಪ್ರಚಾರಕ್ಕೆ ತರಬೇಕು ಎಂದು ಪ್ರಯತ್ನ ಪಟ್ರು. ಇದೀಗ ಬಿಜೆಪಿ ಜೋಡೆತ್ತಗಳಿಗೆ ಗಾಳ ಹಾಕಿದೆ. ಆದ್ರೆ ಜೋಡೆತ್ತುಗಳು ಕೆಆರ್‌ಪೇಟೆ ಅಖಾಡಕ್ಕೆ ಬಿಜೆಪಿ ಪರ ಎಂಟ್ರಿ ಕೋಡ್ತಾರಾ ಇಲ್ವಾ ಎಂದು ಕಾದುನೋಡಬೇಕಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.