ಬೀದರ್ : ಗೂಂಡಾ ವರ್ತನೆ ತೋರಿದ ಟ್ರಾಫಿಕ್ ಪೋಲೀಸ್ – ಬೈಕ್ ಸವಾರರ ಮೇಲೆ ಹಲ್ಲೆ

ಬೀದರ್ : ಟ್ರಾಫಿಕ್ ಫೊಲೀಸ್ ಗೂಂಡಾ ರೀತಿಯಲ್ಲಿ ವರ್ತಿಸಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ನಗರದ ಮೋಹನ್ ಮಾರ್ಕೆಟ್ ನಲ್ಲಿ ಟ್ರಾಫಿಕ್ ಎಎಸ್ಐ ತನ್ನ ದರ್ಪ ತೋರಿದ್ದಾನೆ. ಬೈಕ್ ಸವಾರರು ರಾಂಗ್ ರೂಟ್ ನಲ್ಲಿ ಬಂದಿದ್ದಕ್ಕೆ ಎಎಸ್ಐ ಗೂಂಡಾ ವರ್ತನೆ ತೋರಿಸಿದ್ದಾನೆ.

ಪೊಲೀಸ್ ಗೂಂಡಾ ವರ್ತನೆಯನ್ನು ಪ್ರಶ್ನಿಸಿದ್ದಕ್ಕೆ ಶರ್ಟ್ ಹಿಡಿದು ಹಲ್ಲೆ ನಡೆಸಿದ್ದಾನೆ. ಎಎಸ್ಐ  ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದೆಯಲು ಮುಂದಾಗಿರುವ ವಿಡಿಯೋ ಈಗ ವೈರಲ್ ಆಗಿದೆ.

ಟ್ರಾಫಿಕ್ ಎಎಸ್ಐ ಬಸವರಾಜ್ ರಿಂದ ಕೃತ್ಯ ನಡೆದಿದೆ. ಎಎಸ್ಐ ಬಸವರಾಜ್ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.