ದೀಪ ಹಚ್ಕೊಂಡು ಹುಡುಕಿದ್ರೂ ಅಶೋಕ್‌ ಖೇಣಿಯಂತ ಭ್ರಷ್ಟ ಮತ್ತೊಬ್ಬ ಸಿಗಲ್ಲ : S.R ಹಿರೇಮಠ್‌

ಬೀದರ್ : ದೀಪ ಹಚ್ಚಿಕೊಂಡು ಹುಡುಕಿದ್ರೂ ಅಶೋಕ ಖೇಣಿ ಅಂತ ಮತ್ತೊಬ್ಬ ಭ್ರಷ್ಟ, ಅಯೋಗ್ಯ ಸಿಗಲಿಕ್ಕ ಸಾಧ್ಯವಿಲ್ಲ ಎಂದು ಸಮಾಜಸೇವಕ ಎಸ್.ಆರ್ ಹಿರೇಮಠ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಸಂಪನ್ಮೂಲವನ್ನು ಲೂಟಿ ಮಾಡಿದವನನ್ನು ಅಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಸಿಕೊಂಡಿರುವುದು ನಾಚಿಕೆಗೇಡಿತನದ್ದು ಎಂದಿದ್ದಾರೆ. ಖೇಣಿ ಭ್ರಷ್ಟಾಚಾರ ಆರಂಭವಾಗಲು ಜೆಡಿಎಸ್ ನ ದೇವೆಗೌಡರೇ ಮೂಲ ಎಂದು ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ಕಾಂಗ್ರೆಸ್ ಜನ ವಿರೋಧಿ ಪಕ್ಷಗಳಾಗಿವೆ. ಜನಾರ್ಧನರೆಡ್ಡಿ, ಯಡಿಯೂರಪ್ಪ ಜೈಲಿಗೆ ಹೋದ್ರು,  ಈಗ ಅಶೋಕ ಖೇಣಿ ಕಾಲ ಸನ್ನಿಹಿತವಾಗಿದೆ. ಸದನ ಸಮಿತಿ ಕೊಟ್ಟ ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯವಾಗದೆ, ಭ್ರಷ್ಟರ ಬೆನ್ನಿಗೆ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ ಎಂದು ಕೆಂಡ ಕಾರಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.