Election 2019 : ಸರಕಾರ ಬಿಳಿಸಲು ಬಿಜೆಪಿಯಲ್ಲಿ ನಡೆದಿದೆ ಜೋರು ಲೆಕ್ಕಾಚಾರ…..!

ಕಳದ ಬಾರಿಗಿಂತ ಒಂದು ಸಿಟು ಹೆಚ್ಚು ಬಂದರೂ ಬಿಜೆಪಿ ರಾಜ್ಯದಲ್ಲಿ ಸರಕಾರ ರಚಿಸುವ ಪ್ರಕ್ರಿಯೆಗೆ ಕೈ ಹಾಕಿಲಿದೆ ಎಂಬ ಗುಸುಗುಸು ರಾಝಕೀಯ ವಲಯದಲ್ಲಿ ಜೋರು ಪಡೆದುಕೊಂಡಿದೆ.

 

2014ರಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದು ತನ್ನ ಬಲ ಪ್ರದರ್ಶನ ಮಾಡಿತ್ತು. ಈ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆ ನೇರ ಹಣಾಹಣಿಯಲ್ಲಿರುವ ಬಿಜೆಪಿಗೆ ತನ್ನ ಬಲ ಹೆಚ್ಚಿಸಿಕೊಳ್ಳುವುದು ಮೊದಲ ಆದ್ಯತೆಯಾಗಿದೆ. ಅದರಲ್ಲಿಯೂ ದಕ್ಷಿಣದಲ್ಲಿ ಬಿಜೆಪಿ ಅಸ್ತಿತ್ವ ಇರುವುದೇ ಕರ್ನಾಟಕದಲ್ಲಿ. ಹೀಗಾಗಿ ಇಲ್ಲ ಗರಿಷ್ಠ ಕಟಾವು ಪಕ್ಷದ ಹೆಬ್ಬಯಕೆಯಾಗಿದೆ.

ಜಂಟಿ ಹೋರಾಟದ ನಡುವೆಯೂ ದೋಸ್ತಿ ಪಕ್ಷಗಳಿಗೆ ಹೆಚ್ಚಿನ ಸೀಟು ಬರದಿದ್ದರೇ ಅದು ಮೈತ್ರಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬುದನ್ನು ತೋರುತ್ತದೆ. ಅಂತಹ ಸಂದರ್ಭದಲ್ಲಿ ಸಹಜವಾಗಿಯೇ ಅಧಿಕಾರ ಪಲ್ಲಟಕ್ಕೆ ಬಿಜೆಪಿ ಪ್ರಯತ್ನ ಜೋರಾಗಲಿದೆ ಎಂದೇ ಹೇಳಲಾಗುತ್ತಿದೆ.

ಇದರ ಜೊತೆಗೆ ಕಾಂಗ್ರೆಸ್‌ ಹೆಸರಿಗಿದ್ದ ಎರಡು ಕ್ಷೇತ್ರಗಳಲ್ಲಿ (ಕುಂದಗೋಳ ಹಾಗೂ ಚಿಂಚೋಳಿ) ಸಹ ಉಪ ಚುನಾವಣೆ ನಡೆಯುತ್ತಿದ್ದು ಇಲ್ಲೂ ಎಲ್ಲುವ ಮೂಲ ಶಾಸನಸಭೆಯಲ್ಲಿ ಬಹುಮತದ ಸನಿಹ ಬರುವುದು ಬಿಜೆಪಿಯ ಆಶಯವಾಗಿದೆ.

ಹೆಚ್ಚಿನ ಸೀಟು ಬಾರದಿದ್ಲಲ್ಲಿ ದೋಸ್ತಿ ಸರಕಾರ ಪಕ್ಷಗಳ ನಾಯಕರಲ್ಲಿ ಮನೆ ಮಾಡಿರುವ ಅಸಮಾಧಾನ, ಅತೃಪ್ತಿ ಸ್ಫೋಟಗೊಳ್ಳಲಿದ್ದು, ಅದರ ಪ್ರಯೋಜನ ಪಡೆಯಲು ಬಿಜೆಪಿ ತುದಿಗಾಲ ಮೇಲೆ ನಿಂತಿದೆ ಎನ್ನಲಾಗಿದೆ.

ಇದರ ಜೊತೆಗೆ ಕೇಂದ್ರದಲ್ಲಿಯೂ ಮೋದಿ ಸರಕಾರ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದಲ್ಲಿ ಈ ಪ್ರಯತ್ನ ಇನ್ನಷ್ಟು ಬಲ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಜಾರಕಿಹೊಳಿ ಭವಿಷ್ಯ: ಬಿಜೆಪಿ 2014 ರಲೋಕಸಭಾ ಚುನಾವಣೆಯಲ್ಲಿ ಪಡೆದಷ್ಟು ಸೀಟುಗಳನ್ನು ಈ ಬಾರಿ ಪಡೆದರೆ ರಾಜ್ಯದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಕೈ ಹಾಕುವುದು ಖಂಡಿತ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಬಿಜೆಪಿಯವರು 2014 ಕ್ಕಿಂದ ಜಾಸ್ತಿ ಸೀಟು ಬಂದರೆ ಸರ್ಕಾರ ಅಸ್ಥಿರಕ್ಕೆ ಕೈ ಹಾಕುತ್ತಾರೆ.ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ. ಇದು
ಪ್ರಜಾಪ್ರಭುತ್ವದಲ್ಲಿ ಸರಿಯಾದ ನಡೆ ಅಲ್ಲ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.