ಮೋದಿ ಜಾಕೆಟ್‌ ಮೇಲೆ ರಮ್ಯಾ ಕಣ್ಣು : ಯಾರ ಕ್ರೆಡಿಟ್‌ ಕಾರ್ಡ್‌ ಬಳಸಿ ತಗೊಂಡ್ರಿ ಎಂದು ಕೇಳಿದ ಮಾಜಿ ಸಂಸದೆ

ಬೆಂಗಳೂರು : ಕಾಂಗ್ರೆಸ್‌ ಪಕ್ಷದ ಸೋಶಿಯಲ್‌ ಮೀಡಿಯಾ ಮುಖ್ಯಸ್ಥೆ ರಮ್ಯಾ ಪ್ರಧಾನಿ ಮೋದಿಯವರ ಜಾಕೆಟ್‌ ಮೇಲೆ ಕಣ್ಣು ಹಾಕಿದ್ದಾರೆ.

ನರೇಂದ್ರ ಮೋದಿ ಅವರೇ ನೀವು ಧರಿಸಿರುವ ಲೋರೊ ಪಿಯಾನಾ ಜಾಕೆಟ್ ತುಂಬಾ ಇಷ್ಟವಾಯ್ತು, ಕೇವಲ 17,000 ಯುರೋ ಬೆಲೆ! ತುಂಬಾ ಅಗ್ಗ, ಯಾರ ಕ್ರೆಡಿಟ್ ಕಾರ್ಡ್ ಬಳಸಿ ಪೇ ಮಾಡಿದ್ರಿ? ಎಂಬ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.ಇದಕ್ಕೆ ಪ್ರತಿಯಾಗಿ ಬಿಜೆಪಿ ಬೆಂಬಲಿಗರು, ರಮ್ಯಾ ಅವರಿಗೆ ಮರು ಸವಾಲು ಹಾಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯಾಬ್ಲೋಟ್ ವಾಚಿನ ಬೆಲೆ, ರಾಹುಲ್ ಗಾಂಧಿ ಧರಿಸಿದ್ದ ಜಾಕೆಟ್ ಬೆಲೆ ನಿಮಗೆ ಗೊತ್ತಿಲ್ಲವೇ? ಎಂಬ ಪ್ರಶ್ನಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.