ಮೊದಲು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಆಮೇಲೆ ರೈತರ ಸಾಲಮನ್ನಾ ಮಾಡ್ತೀವಿ ಎಂದ HDK !

ಬೆಂಗಳೂರು : ವಿಶ್ವಾಸ ಮತ ಗೆದ್ದ ಬಳಿಕ ಸ್ವಲ್ಪ ನಿರಾಳರಾಗಿರುವ ಎಚ್‌ಡಿಕೆ ಇಂದು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಂದು ಯಾವುದೇ ಅಧಿಕೃತ ಕಾರ್ಯಕ್ರಮಗಲ್ಲಿ ಭಾಗಿಯಾಗಲ್ಲ. ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೆ . ಆದರೆ ಇಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕು. ಬೇರೆ ಬೇರೆ ನಾಯಕರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಮಾತುಕತೆ ನಡೆಸಲಿದ್ದಾರೆ ಎಂದಿರುವ ಎಚ್‌ಡಿ ಕೆ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ. ಯಡಿಯೂರಪ್ಪಂಗೆ ಬೇರೆ ಕೆಲಸವಿಲ್ಲ. ಮನೆ ಒಡೆಯುವುದೇ ಅವರ ಕೆಲಸ. ಅವರ ಮಾತುಗಳಿಗೆ ನಾವು ಬೆಲೆ ಕೊಡುವುದಿಲ್ಲ. ರೈತರ ಸಾಲ ಮನ್ನಾ ಮಾಡೇ ಮಾಡ್ತೀವಿ. ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿ ಸಾಲಮನ್ನಾ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ.  ಮೊದಲು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿ ನಂತರ ಸಾಲಮನ್ನಾ ಮಾಡುತ್ತೇವೆ. ಯಾರಿಗೂ ತೆರಿಗೆ ಹೊರೆಯಾಗದಂತೆ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ರೈತರ ಸಾಲಮನ್ನಾ ಮಾಡೋದಿಕ್ಕೆ ಹೇಗೆ ಹಣ ಹೊಂದಿಸಬೇಕೆಂದು ಗೊತ್ತಿದೆ. ನನಗೆ ಯಾವುದೇ ವೈಯುಕ್ತಿಕ ಆಕಾಂಕ್ಷೆಗಳಿಲ್ಲ. ರೈತರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಪುನರುಚ್ಛರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.