ಅಂಗಾರಕ ಸಂಕಷ್ಟ ಚತುರ್ಥಿ ಹಿನ್ನೆಲೆ : ರೇಜಂತಲ ಸಿದ್ಧಿವಿನಾಯಕ ಮಂದಿರಕ್ಕೆ ಸಚಿವ ಬಂಡೆಪ್ಪ ಖಾಶೆಂಪೂರ ಭೇಟಿ

ಅಂಗಾರಕ ಸಂಕಷ್ಟ ಚತುರ್ಥಿ ವ್ರತ ಆಚರಣೆ ಅಂಗವಾಗಿ ಸಹಕಾರ ಸಚಿವರಾದ ಶ್ರೀ ಬಂಡೆಪ್ಪ ಖಾಶೆಂಪುರ ಅವರು ಇಂದು ಬೆಳಗ್ಗೆ ತಮ್ಮ ಕ್ಷೇತ್ರವಾದ ಬೀದರ್ ನಿಂದ 25 ಕೀ.ಮಿ ದೂರದ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿ ಇರುವ ರೇಜಂತಲ ಗ್ರಾಮದಲ್ಲಿ ಇರುವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪಾದಯಾತ್ರೆ ಮೂಲಕ ಸಾಗಿದರು.

ಜೊತೆಯಲ್ಲಿ ಬೀದರ್ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ ಪಾಟೀಲ್, ನಗರಸಭೆ ಅಧ್ಯಕ್ಷ ರಾದ ರಾಜು ಚಿಂತಾಮಣಿ ಸೇರಿದಂತೆ ಹಲವು ಅಭಿಮಾನಿಗಳು ಸಾಥ್ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.