Bagalkot : ಸಾಲಬಾಧೆಯಿಂದ ಮತ್ತೋರ್ವ ಅನ್ನದಾತ ಆತ್ಮಹತ್ಯೆ ….

ಬಾಗಲಕೋಟೆ : ಡೆತ್ ನೋಟ್ ಬರೆದಿಟ್ಟು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮದಬಾವಿಯಲ್ಲಿ ಘಟನೆ ವರದಿಯಾಗಿದೆ.


ಸಾಲಬಾಧೆ ತಾಳಲಾರದೆ ಹೊಲದಲ್ಲಿರೋ ಗಿಡಕ್ಕೆ ನೇಣಿಗೆ ಶರಣಾಗಿದ್ದಾರೆ. ಸದಾಶಿವ ಗೋವಿಂದಪ್ಪ ತಿಮ್ಮಾಪೂರ್ (೬೦) ಆತ್ಮಹತ್ಯೆ ಮಾಡಿಕೊಂಡ ರೈತ. ರೈತ ಸದಾಶಿವ ವಿಜಯಾಬ್ಯಾಂಕ್ ನಲ್ಲಿ ೪ ಲಕ್ಷ ಸಾಲ, ಸೊಸೈಟಿಯಲ್ಲಿ ೧ ಲಕ್ಷ ಸಾಲ, ಹಲವರ ಕಡೆ ೨ ಲಕ್ಷ ಕೈಗಡ ಸಾಲ ಮಾಡಿದ್ದರು. ೪ ಎಕರೆ ಜಮೀನಿನಲ್ಲಿ ಕೊರೆಸಿದ್ದ ೨ ಬೋರ್ ವೆಲ್ ಗಳೂ ವಿಫಲವಾಗಿದ್ದವು.  ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.  ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One thought on “Bagalkot : ಸಾಲಬಾಧೆಯಿಂದ ಮತ್ತೋರ್ವ ಅನ್ನದಾತ ಆತ್ಮಹತ್ಯೆ ….

  • ಅಕ್ಟೋಬರ್ 25, 2017 at 9:37 ಫೂರ್ವಾಹ್ನ
    Permalink

    I like what you guys are up too. Such smart work and reporting! Keep up the excellent works guys I¡¦ve incorporated you guys to my blogroll. I think it’ll improve the value of my website 🙂

Comments are closed.