ಸುಗ್ರೀವಾಜ್ಞೆ ಇಲ್ಲವೇ ಜನಮತಗಣನೆ ಮಾಡಿ – ರಾಮಮಂದಿರ ನಿರ್ಮಿಸಿ : ಪೇಜಾವರ ಶ್ರೀ ..

ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ಬಿದ್ದರೇ ಸುಗ್ರೀವಾಜ್ಞೆ ತರಲು ಮೋದಿ ಸರಕಾರ ಹಿಂದು-ಮುಂದು ನೋಡಬಾರದು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಆಗ್ರಹ ಮಾಡಿದ್ದಾರೆ.

ಇಂತಹ ಕ್ರಮಕ್ಕೆ ಮುಂದಾಗಲು ಮೋದಿ ಅವರು ಹಿಂಜರಿಕೆ ಮಾಡಬಾರದು. ಇದಕ್ಕಾಗಿ ಸರಕಾರ ಬಿದ್ದು ಹೋದರೂ ಸರ ತೀರ್ಮಾನ ಆಗಲೇಬೇಕು ಎಂದು ಅವರು ಜನಾಗ್ರಹ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಒಂದು ವೇಳೆ ಇದಕ್ಕಾಗಿ ಜನಮತ ಸಂಗ್ರಹ ಅಗತ್ಯ ಎನಿಸಿದರೆ ಸರಕಾರ ಅದಕ್ಕೂ ಮೀನಮೇಷ ಎಣಿಸದೇ ಕುಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಸೇರಿದಂತೆ ಯಾರೂ ವಿರೋಧಿಸುವುದಿಲ್ಲ. ಮುಸ್ಲಿಮರು ಸಹ ಈ ವಿಚಾರದಲ್ಲಿ ಸಹಿಷ್ಣುಗಳಾಗಬೇಕು ಎಂದು ಅವರು ಕರೆ ನೀಡಿದರು.

ಇದೇ ವೇಳೆ ರಾಮ ಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ನಿಗದಿತ ಸಮಯದಲ್ಲಿ ತೀರ್ಮಾನಿಸಲು ಸಾಧ್ಯವಾಗದಿದ್ದರೆ, ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಅನುಮತಿ ಕೊಡಿಸಬೇಕೆಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಬಿ.ವೈ.ರಾಘವೇಂದ್ರ ಮೂಲಕ ಕೇಂದ್ರ ಸರಕಾರಕ್ಕೆ ನಿರ್ಣಯದ ಪ್ರತಿಯನ್ನು ಸ್ವಾಮೀಜಿ ಸಲ್ಲಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.