ಎಟಿಪಿ ಚಾಲೆಂಜರ್ಸ್‌ ಟೆನಿಸ್ ಟೂರ್ನಿ : ರಾಮಕುಮಾರ್ ರಾಮನಾಥನ್ ಭರ್ಜರಿ ಪ್ರದರ್ಶನ

ಭಾರತದ ರಾಮಕುಮಾರ್ ರಾಮನಾಥನ್ ಅವರು ಭರ್ಜರಿ ಪ್ರದರ್ಶನ ನೀಡಿದರೂ, ಇಲ್ಲಿ ನಡೆದಿರುವ ಎಟಿಪಿ ಚಾಲೆಂಜರ್ಸ್‌ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ.

ಪುರಷರ ಸಿಂಗಲ್ಸ್ ಪಂದ್ಯದಲ್ಲಿ ರಾಮಕುಮಾರ್ 3-6, 6-3, 1-6 ರಿಂದ ತೈವಾನ್ ನ ಜಾಸನ್ ಜಾಂಗ್ ವಿರುದ್ಧ ಸೋಲು ಕಂಡರು. ಒಂದು ಗಂಟೆ 50 ನಿಮಿಷ ನಡೆದ ಪಂದ್ಯದಲ್ಲಿ ರಾಮಕುಮಾರ್ ಅವರು ಭರ್ಜರಿ ಪ್ರದರ್ಶನ ನೀಡಿದರು. ಮೊದಲ ಸೆಟ್ ನಲ್ಲಿ ಸೋಲು ಅನುಭವಿಸಿದರೂ, ಎರಡನೇ ಸೆಟ್ ನಲ್ಲಿ 3-0 ಯಿಂದ ಮುನ್ನಡೆ ಸಾಧಿಸಿದರು.

ಅಲ್ಲದೆ ಈ ಸೆಟ್ ನ್ನು 6-3 ರಿಂದ ಗೆದ್ದು ಬೀಗಿದರು. ಮೂರನೇ ಹಾಗೂ ನಿರ್ಣಾಯಕ ಸೆಟ್ ನಲ್ಲಿ ಜಾಂಗ್ ಸಮಯೋತಿ ಆಟ ಪ್ರದರ್ಶಿಸಿ ಗೆಲುವು ದಾಖಲಿಸಿದರು.

ಅರ್ಹತಾ ಸುತ್ತಿನಲ್ಲಿ ರಾಮಕುಮಾರ್ ಅವರು ಅಮೆರಿಕದ ಇಬ್ಬರು ಆಟಗಾರರನ್ನು ಮಣಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.