‘ಮನೆ ಎಂದಮೇಲೆ ಸಣ್ಣ ಪುಟ್ಟ ವೈಮನಸ್ಸುಗಳು ಸಹಜ’ – ಸಚಿವ ಇ.ತುಕಾರಾಮ್

ಇಂದು ಕಾಂಗ್ರೆಸ್ ನಡೆಸಲಿರುವ ಶಾಸಕಾಂಗ ಸಭೆಗೆ ಯಾವೆಲ್ಲಾ ಶಾಸಕರು ಭಾಗವಹಿಸುತ್ತಾರೆ ಎನ್ನುವ ಕುತೂಹಕ ಸೃಷ್ಟಿಯಾಗಿದೆ. ಸಿಎಲ್ ಪಿ ಸಭೆಗೆ ಆಯಾ ಜಿಲ್ಲೆಗಳ ಶಾಸಕರನ್ನು ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸಲಾಗಿದೆಯಾದರೂ ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರು ಈ ಸಭೆಯಲ್ಲಿ ಭಾಗವಹಿಸುತ್ತಾರಾ ಅನ್ನೋ ಪ್ರಶ್ನೆ ಸದ್ಯ ಎದುರಾಗಿದೆ.

ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಮ್ ಅವರು ಮಾತನಾಡಿ ‘ಮನೆ ಎಂದಮೇಲೆ ಸಣ್ಣ ಮುಟ್ಟ ವೈಮನಸ್ಸುಗಳು ಸಹಜ ಆದರೆ ಯಾವ ಶಾಸಕರೂ ಪಕ್ಷ ಬಿಡುವ ಮಾತು ಇಲ್ಲ’ ಎಂದಿದ್ದಾರೆ. ನಾಗೇಂದ್ರ ಸೇರಿದಂತೆ ಎಲ್ಲಾ ಶಾಸಕರು ಶಾಸಕಾಂಗ ಸಭೆ ಬರುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ ಹೇಳಿದಂತೆ ನಾವು ಜೊತೆಗೆ ಕೆಲಸ ಮಾಡುತ್ತೇವೆ. ಯಾವ ಭಿನ್ನ ಮತ ಇಲ್ಲ, ಯಾರೂ ಪಕ್ಷ ಬಿಡುವುದಿಲ್ಲ.

ಒಗ್ಗಟ್ಟಿನಿಂದ ಇದ್ದೇವೆ ಆ ಒಗ್ಗಟ್ಟನ್ನು ಮುರಿಯುವುದಿಲ್ಲ . ಜೊತೆಗೆ ಒಗ್ಗಟ್ಟಾಗಿ ಲೋಕಸಭೆ ಎಲೆಕ್ಷನ್ ಎದುರಿಸಿ ಗೆಲ್ಲುತ್ತೇವೆ ಎಂದಿದ್ದಾರೆ. ಹೀಗಾಗಿ ಸಿಎಲ್ ಪಿ ಸಭೆಗೆ ಎಲ್ಲರೂ ಬರುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.