ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿ ಕ್ವಾರ್ಟರ್ ಫೈನಲ್ಸ್ ಗೆ ಅರ್ಜೆಂಟೀನಾ-ಕೊಲಂಬಿಯಾ..

ಅರ್ಜೆಂಟೀನಾ ಹಾಗೂ ಕೊಲಂಬಿಯಾ ತಂಡಗಳು ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆದಿವೆ.
ಅರ್ಜೆಂಟೀನಾ 2-0ಯಿಂದ ಕತಾರ್ ತಂಡವನ್ನು ಮಣಿಸಿತು. ಮೊದಲಾವಧಿಯ ನಾಲ್ಕನೇ ನಿಮಿಷದಲ್ಲಿ ಮಾರ್ಟಿನೆಜ್ ಕತಾರ್ ತಂಡದ ಗೋಲ್ ಕೀಪರ್ ಅವರನ್ನು ವಂಚಿಸಿ ಮೊದಲ ಗೋಲು ದಾಖಲಿಸಿದರು. ಈ ಮೂಲಕ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಗೋಲು ಸಂಖ್ಯೆ ಹೆಚ್ಚಿಸಿಕೊಳ್ಳುವ ಮೆಸ್ಸಿ ಬಳಗದ ಆಸೆ ಫಲಿಸಲಿಲ್ಲ.
ಎರಡನೇ ಅವಧಿಯಲ್ಲಿ ಅರ್ಜೆಂಟೀನಾ ಭರ್ಜರಿ ಪ್ರದರ್ಶನ ನೀಡಿ ಗೋಲು ನೀಡದಂತೆ ತಡೆಯುವಲ್ಲಿ ಸಫಲವಾಯಿತು. 82ನೇ ನಿಮಿಷದಲ್ಲಿ ಅರ್ಜೆಂಟೀನಾ ಗೋಲು ದಾಖಲಿಸಿ ಅಂತರವನ್ನು ಹೆಚ್ಚಿಸಿತು.
ಇನ್ನೊಂದು ಪಂದ್ಯದಲ್ಲಿ ಕೊಲಂಬಿಯಾ 1-0ಯಿಂದ ಪರಾಗ್ವೆ ತಂಡವನ್ನು ಮಣಿಸಿತು. ಕೊಲಂಬಿಯಾ ಮೂರು ಪಂದ್ಯಗಳಿಂದ ಮೂರು ಜಯ ಸಾಧಿಸಿ 9 ಅಂಕ ಕಲೆ ಹಾಕಿದೆ. ಅರ್ಜೆಂಟೀನಾ ಮೂರು ಪಂದ್ಯಗಳಿಂದ 4 ಅಂಕ ಕಲೆ ಹಾಕಿದ್ದು, ಎರಡನೇ ಸ್ಥಾನದಲ್ಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.