ಆ್ಯಂಬಿಡೆಂಟ್ ಡೀಲ್ ಪ್ರಕರಣ : ಜನಾರ್ಧನ ರೆಡ್ಡಿಗಾಗಿ ಮುಂದುವರೆದ ಪೋಲೀಸರ ಶೋಧ

ಆ್ಯಂಬಿಡೆಂಟ್ ಮಾರ್ಕೆಟಿಂಗ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ಧನ ರೆಡ್ಡಿ ಬಂಧನಕ್ಕೆ ಪೋಲೀಸರ ಶೋಧ ಮುಂದುವರೆದಿದೆ. ಜನಾರ್ಧನ ರೆಡ್ಡಿಯ ಬೆಂಗಳೂರಿನ ನಿವಾಸದ ಮೇಲೆ ಕೇಂದ್ರ ವಿಭಾಗದ ಪೋಲೀಸರಿಗೆ ಗಣಿಧಣಿ ರೆಡ್ಡಿ ಇದುವರೆಗೆ ಪತ್ತೆಯಾಗಿಲ್ಲ. ಜನಾರ್ಧನ ರೆಡ್ಡಿ ಪತ್ತೆ ಮಾಡಲು ರಾಜ್ಯ ಪೋಲೀಸ್ ಇಲಾಖೆ ನೆರೆ ರಾಜ್ಯದ ಪೋಲೀಸರ ಸಹಾಯ ಪಡೆಯಲು ಮುಂದಾಗಿದೆ.

ಕೆಲವು ದಿನಗಳಿಂದ ತಲೆ ಮರೆಸಿಕೊಂಡಿರುವ ಜನಾರ್ಧನ ರೆಡ್ಡಿ ತಮ್ಮ ಪರಿವಾರದ ಸದಸ್ಯರ ಕೂಡ ಸಂಪರ್ಕದಲ್ಲಿಲ್ಲ. ಜನಾರ್ಧನ ರೆಡ್ಡಿಯ ಮೊಬೈಲ್ ಫೋನ್ ಸಿಗ್ನಲ್ ಮೂಲಕ ಅವರಿರುವ ಸ್ಥಳವನ್ನು ಪತ್ತೆ ಹಚ್ಚಲು ಯತ್ನಿಸಿದ ಪೋಲೀಸರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಜನಾರ್ಧನ ರೆಡ್ಡಿ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಕೊನೆಯ ಬಾರಿ ಹೈದರಾಬಾದ್ ನಲ್ಲಿ ಇದ್ದರೆಂದು ತಿಳಿದು ಬಂದಿದೆ. ಉದ್ಯಮಿಯೊಬ್ಬರಿಂದ 18 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಯನ್ನು ಪಡೆದಿರುವ ಆರೋಪ ಜನಾರ್ಧನ ರೆಡ್ಡಿ ಮೇಲಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.