ಪಬ್ಲಿಕ್ ಆಯ್ತು ಪತ್ರಕರ್ತರ ಲಂಚ ಪ್ರಕರಣ – ಸತ್ಯವೇನು ಮೇಲಕೋಟೆ ರಂಗಣ್ಣ..?

ಬಹುಕೋಟಿ ಆಂಬಿಡೆಂಟ್ ಹಗರಣ ಬಟಾಬಯಲಾಗುತ್ತಲೇ ಸೋ ಕಾಲ್ಡ್ ಪತ್ರಕರ್ತರು, ಡೀಲರುಗಳು ಬೆತ್ತಲಾಗಿದ್ದಾರೆ. ಸಾವಿರಾರು ಜನರ ಬೆವರಿನ ಹಣ ದೋಚಿದ್ದ ವಂಚಕನಿಂದ ತಮ್ಮ ಅನೈತಿಕ ಪಾಲು ಪಡೆದು ಗೆದ್ದೆವು ಎಂದುಕೊಂಡಿದ್ದವರ ಅಂಡಿಗೆ ಸಿಸಿಬಿ ತನಿಖೆ ಬರೆ ಎಳೆದಿದೆ. ಜೈಲು ಸೇರುವ ಭೀತಿಯಲ್ಲಿ ಡೀಲ್ ಪತ್ರಕರ್ತರು, ಬ್ರೋಕರ್ ಗಳು ನಿದ್ದೆ ಕಳೆದುಕೊಂಡಿದ್ದಾರೆ. ಸಿಸಿಬಿ ತನಿಖೆಯಿಂದ ಇಡೀ ಡೀಲ್ ಪ್ರಕರಣದ ಇಂಚಿಂಚೂ ಮಾಹಿತಿ ಬಹಿರಂಗವಾಗಿದೆ. ಅಸಲಿಗೆ ಈ ಆಂಬಿಡೆಂಟ್ ಹಗರಣ ಏನು ಅನ್ನೊ ಡೀಟೇಲ್ಸ್ ಮುಂದಿದೆ ಓದಿ.

ನೀವು ಕೂಡಿಟ್ಟ ಹಣ ನಮ್ಮ ಕಂಪನಿಗೆ ಕಟ್ಟಿ. ಅದನ್ನು ವಜ್ರ ವ್ಯಾಪಾರ ಮತ್ತು ರಿಯಲ್ ಎಸ್ಟೇಟ್ ಗೆ ಹಾಕಿ ಭಾರಿ ಪ್ರಮಾಣದ ಲಾಭ ಕೊಡ್ತೇವೆ ಎಂದು ಆ್ಯಂಬಿಡೆಂಟ್ ಕಂಪನಿ ನಂಬಿಸಿತ್ತು. ಈ ಕಂಪನಿಯ ಮಾತು ನಂಬಿದ ಬೆಂಗಳೂರಿನ ಸುಮಾರು 50 ಸಾವಿರ ಜನರು 900ಕೋಟಿಗೂ ಹೆಚ್ಚು ಹಣ ಹೂಡಿದ್ದರು. ಜನರಿಂದ ಹರಿದುಬಂದ ಹಣ ಕಂಡು ಆಂಬಿಡೆಂಟ್ ಕಂಪನಿಯ ಎಂಡಿ ಫರೀದ್ ಖುದ್ದು ಅಚ್ಚರಿಗೆ ಬಿದ್ದಿದ್ದ.

ಅಷ್ಟರಲ್ಲಿ ತಾವು ಯಾಮಾರಿದ್ದೇವೆ ಅನ್ನೋದು ಜನರಿಗೂ ಮನವರಿಕೆ ಆಗಿ ಹೋಗಿತ್ತು. ಕೂಡಲೇ ಕೆಲವರು ಡಿಜೆ ಹಳ್ಳಿ ಠಾಣೆಗೆ ತೆರಳಿ ದೂರು ನೀಡಿದ್ದರು. ಅದರೆ ಈ ಹಗರಣದ ಆಳ ಅಗಲ ಪೊಲೀಸರಿಗೂ ಅಷ್ಟಾಗಿ ಗೊತ್ತಾಗಿರಲಿಲ್ಲ.

ಇದೇ ಹೊತ್ತಿಗೆ ಟೈಂಸ್ ಆಫ್ ಇಂಡಿಯಾ ಮತ್ತು ಬೆಂಗಳೂರು ಮಿರರ್ ಪತ್ರಿಕೆಯಿಂದ ಹೊರದಬ್ಬಿಸಿಕೊಂಡಿದ್ದ ಪಳಗಿದ ಕ್ರೈಂ ರಿಪೊರ್ಟರ್ ಅಜ್ಮತ್ ಕೆಲಸ ಹುಡುಕುತ್ತಿದ್ದ. ಪಕ್ಕಾ ಡೀಲ್ ಮಾಸ್ಟರ್ ಗಳಾದ ಇವರ ಬಗ್ಗೆ ತಿಳಿದಿದ್ದ ಪಬ್ಲಿಕ್ ಟಿವಿ ರಂಗಣ್ಣ ಇವರಿಬ್ಬರನ್ನು ತನ್ನ ಚಾನೆಲ್ ಗೆ ಕರೆಸಿಕೊಂಡಿದ್ದರು. ಇದೇ ವೇಳೆ ಪಬ್ಲಿಕ್ ಟಿವಿ ಕೂಡಾ ಬಂಡವಾಳ ಇಲ್ಲದೆ ಸುಸ್ತಾಗಿಸ್ತು. ಅಜ್ಮತ್ ಗೆ ಷರತ್ತು ಹಾಕಿದ್ದ ರಂಗನಾಥ ಏನಾದರೂ ಮಾಡಿ ಪ್ರತಿ ತಿಂಗಳಿಗೆ 40 ಲಕ್ಷ ರೂ ವಸೂಲಿ ಮಾಡಿಕೊಡಬೇಕೆಂಬ ಜವಾಬ್ದಾರಿ ಹೊರಿಸಿದ್ದರು.

ತನ್ನ ಬಾಸ್ ಅಗ್ನೆಯಂತೆ ವಸೂಲಿಗಾಗಿ ಫೀಲ್ಡಿಗಿಳಿದ ಅಜ್ಮತ್, ಆಂಬಿಡೆಂಟ್ ಹಗರಣದ ಬುಡಕ್ಕೆ ಕೈ ಹಾಕಿದ್ದರು. ಮೊದಲು “ಅ್ಯಂಬಿಡೆಂಟ್ ಕಂಪನಿ ಯಿಂದ ಭಾರಿ ವಂಚನೆ” ಎಂದು ಪಬ್ಲಿಕ್ ಟಿವಿಯಲ್ಲಿ ಬ್ರೇಕಿಂಗ್ ಹಾಕಿಸಿ ಅದರ ಫೊಟೊ ತೆಗೆದು ಅದನ್ನು ಅ್ಯಂಬಿಡೆಂಟ್ MDಗೆ ವಾಟ್ಸಾಪ್ ಕಳಿಸಿದ್ದರು. ಇದನ್ನು ಕಂಡು ಕಂಗಾಲಾದ ಫರೀದ್, ದಯವಿಟ್ಟು ಸುದ್ದಿ ನಿಲ್ಲಿಸಿ ಎಂದು ದುಂಬಾಲು ಬಿದ್ದಿದ್ದಾನೆ. ಬಳಿಕ 5 ಕೋಟಿ ಪಡೆದು ಸುದ್ದಿ ನಿಲ್ಲಿಸುವ ಡೀಲ್ ಆಗಿತ್ತು. ಮೊದಲಿಗೆ 3 ಕೋಟಿ ರೂಗಳನ್ನು ಅಜ್ಮತ್ ಬ್ಯಾಂಕ್ ಖಾತೆ RTGS ಮಾಡಿದ್ದ. ಬಂದ ಹಣವನ್ನು ತನ್ನ ಬಾಸ್ ರಂಗಣ್ಣಗೆ ತಲುಪಿಸಿದ್ದ. ಬಳಿಕ ಸುದ್ದಿ ನಿಲ್ಲಿಸಿದ್ದೇನೆ ಅಂತಾ ಅಜ್ಮತ್ ಮತ್ತೆ ಫರೀದ್ ಗೆ ವಾಟ್ಸಾಪ್ ಮಾಡಿದ್ದರು.

ಅಷ್ಟರಲ್ಲಿ ಇದೇ ಅ್ಯಂಬಿಡೆಂಟ್ ಹಗರಣದ ಸುಳಿವು ಹಿಡಿದು ಪಾಲು ಕೇಳಲು ಸಮಯ ಟಿವಿಯ ಓನರ್ ವಿಜಯ್ ತಾತಯ್ಯ ಕೂಡಾ ಎಂಟ್ರಿ ಪಡೆದುಕೊಳ್ತಾನೆ. ಈತನ ಜತೆ ವೀಣಾ ಎಂಬ ಡೀಲರ್ ಲೇಡಿ ಕೂಡಾ ಜತೆ ಸೇರಿಕೊಳ್ತಾಳೆ. ಬಗೆ ಬಗೆಯ ಬ್ಲಾಕ್‌ಮೇಲ್ ಮೂಲಕ ಫರೀದ್ ನನ್ನು ಬೆದರಿಸಿ ಕಡೆಗೆ 40 ಕೋಟಿ ಕೊಡುವಂತೆ ಒಪ್ಪಿಸಲಾಗುತ್ತದೆ. 37 ಕೋಟಿ ವೈಟ್ ಮನಿ ಹಾಗೂ 3 ಕೋಟಿ ಹ್ಯಾಂಡ್ ಕ್ಯಾಷ್ ಅನ್ನು ಫರೀದ್ ನಿಂದ ವಿಜಯ್ ತಾತಯ್ಯ ಪಡೆಯುತ್ತಾನೆ. ಇದೆಲ್ಲ ಡೀಲ್ ನಡೆದು ಎಲ್ಲ ಸರಿ ಹೋಯಿತು ಎಂದು ಎಲ್ಲರೂ ಸುಮ್ಮನಾಗುತ್ತಾರೆ.

ಆದರೆ, ಹಣ ಕಳಕೊಂಡ ಜನ ಸುಮ್ಮನಿರಬೇಕಲ್ಲ. ಪ್ರಕರಣ ಸಿಸಿಬಿ ADGP ಅಲೋಕ್ ಕುಮಾರ್ ಕೈಗೆ ಬರುತ್ತದೆ. ಪ್ರಕರಣದ ತನಿಖೆ ಹೊಣೆಯನ್ನು ಅಲೋಕ್ ಅವರು ಎಸಿಪಿ ವೆಂಕಟೇಶ್ ಪ್ರಸನ್ನಗೆ ವಹಿಸುತ್ತಾರೆ. ಫರೀದ್ ನನ್ನು ವೆಂಕಟೇಶ್ ಪ್ರಸನ್ನ ವಿಚಾರಣೆ ನಡೆಸಿದಾಗ ಎಲ್ಲ ವಿಷಯ ಬಾಯಿ ಬಿಟ್ಟಿದ್ದಲ್ಲದೆ, ಪಬ್ಲಿಕ್ ಟಿವಿಗೆ ಕೊಟ್ಟ ಹಣದ ವಿವರ, ಡೀಲಿಂಗ್ ಕುರಿತ ಎಲ್ಲ ವಾಟ್ಸಾಪ್ ಮೆಸೇಜ್ ಹಾಗೂ ಹಣ ಸಂದಾಯದ ಡೀಟೇಲ್ ಗಳನ್ನು ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನಗೆ ನೀಡಿದ್ದಾನೆ. ಇಡೀ ಡೀಲ್ ಹಿಂದೆ ಪಬ್ಲಿಕ್ ಟಿವಿ ಮತ್ತು ಸಮಯ ಟಿವಿಯ ಮಾಲೀಕನ ಕೈವಾಡ ಇರುವುದು ಗೊತ್ತಾಗುತ್ತಲೇ ಸಿಸಿಬಿ ಪಬ್ಲಿಕ್ ರಂಗಣ್ಣಗೆ ನೋಟೀಸ್ ಕೊಡಲು ಮುಂದಾಗಿದೆ. ಇದರ ಸುಳಿವು ಅರಿತ ಪಬ್ಲಿಕ್ ರಂಗಣ್ಣ ರಾತ್ರೊ ತಾತ್ರಿ ಸಿಎಂ ಕಾಲು ಹಿಡಿದು ನೋಟೀಸ್ ತಪ್ಪಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಈ ಮಧ್ಯೆ ಪ್ರಕರಣ ರೂವಾರಿಗಳಾದ ಪಬ್ಲಿಕ್ ರಂಗಣ್ಣ, ಅಜ್ಮತ್, ವಿಜಯ್ ತಾತಯ್ಯ ತಮಗೆ ಸಂಬಂಧ ಇಲ್ಲದವರಂತೆ ಆರಾಮಾಗಿದ್ದರೂ, ಜೈಲು ಸೇರೋ ಭಯದಲ್ಲಿ ದಿನದೂಡುತ್ತಿದ್ದಾರೆ. ಸರಿಯಾದ ತನಿಖೆ ನಡೆದರೆ ಈ ಎಲ್ಲರೂ ಜೈಲು ಪಾಲಾಗೋದು ಖಚಿತ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಪಬ್ಲಿಕ್ ಟಿ.ವಿ ‘ ನಮ್ಮ ವಾಹಿನಿಯ ಯಾವುದೇ ಸದಸ್ಯರು ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಭಾಗಿಯಾಗಿಲ್ಲ ‘ ಎಂದು ಹೇಳಿದ್ದು, ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

‘ ಆ್ಯಂಬಿಡೆಂಟ್ ಡೀಲ್ ಪ್ರಕರಣದ ಬಗ್ಗೆ ಶೀಘ್ರ ತನಿಖೆಯಾಗಲಿ, ಅದರಲ್ಲಿ ಭಾಗಿಯಾಗಿರುವ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಬೇಕು ‘ ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.