ಆ್ಯಂಬಿಡೆಂಟ್ – ಎಲ್ಲದರ ಮಾಸ್ಟರ್‍ಮೈಂಡ್ ಅಲಿಖಾನ್ ಎಂಬ ‘ಜಗ’ದ್ಘಾತಕ..!

20 ಕೋಟಿ ಎಂಜಲಕ್ಕೆ ಜೊಲ್ಲು ಸುರಿಸಿದ ಬಿಲಿಯನೇರ್ ಜನಾರೆಡ್ಡಿ!
ಆ್ಯಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿಗೆ ಶರಣಾಗುವ ಮೊದಲು ಸತ್ಯ ಹರಿಶ್ಚಂದ್ರನಂತೆ ವ್ಯಾಟ್ಸಾಪ್ ಸಂದೇಸ ಹರಿಬಿಟ್ಟ ಗಾಲಿ ಜನಾರ್ಧನ ರೆಡ್ಡಿ, ‘ನನ್ನದು ಕೊಡುವ ಕೈಯೇ ಹೊರತು ಬೇಡುವ ಕೈಯಲ್ಲ.. ನಾನು ತಲೆ ಮರೆಸಿಕೊಡಿದ್ದೇನೆ ಎಂಬ ಮಾಧ್ಯಮಗಳ ವರದಿ ನೋಡಿನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ’ ಎಂದು ತನಗೆ ತಾನೆ ಸವಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತ, ಮಾಧ್ಯಮಗಳನ್ನೇ ಗೇಲಿ ಮಾಡಿದರು. ಆದರೆ ಅಂದು ನಗುತ್ತಲೇ ಬಿಕ್ಕಿಬಿಕ್ಕಿ ಅತ್ತಿದ್ದು ಈತನಿಂದ ಅವ್ಯಾಹತವಾಗಿ ಲೂಟಿಗೊಳಗಾಗಿ, ಅವಶೇಷಗಳಂತಾಗಿರುವ ಬಳ್ಳಾರಿ, ಆಂಧ್ರದ ಕಬ್ಬಿಣದ ಅದಿರು ಪ್ರದೇಶಗಳು.


ಸದ್ಯ ಜಾಮಿನು ಪಡೆದು ಜೈಲಿನಿಂದ  ಹೊರಬಂದಿರುವ ರೆಡ್ಡಿ ಬರೀ ನೈಸರ್ಗಿಕ ಸಂಪತ್ತಿನ ದರೋಡೆಕೋರನಷ್ಟೇ ಅಲ್ಲ, ಡೀಲು ಕುದುರಿಸಿ ಕೊಟ್ಟು ಅಷ್ಟಿಷ್ಟು ಗೆಬರಿಕೊಳ್ಳಬಲ್ಲ ದಲ್ಲಾಳಿಯೂ ಹೌದು ಎಂಬ ಸತ್ಯವನ್ನು ಈ ಪ್ರಕರಣವು ತೆರೆದಿಟ್ಟಿದೆ.
ಏನಿದು ಅಡ್ಡಕಸುಬಿಗಳ ಆ್ಯಂಬಿಡೆಂಟ್ ಅಧ್ವಾನ?
ಆ್ಯಂಬಿಡೆಂಟ್ ಎಂಬ ಪಾಶ್ ಹೆಸರಿನ ಬೆಂಗಳೂರು ಕಂಪನಿ ಸಾವಿರಾರು ಕೋಟಿ ಲೂಟಿ ಮಾಡಿದ್ದೇ ಶ್ರಮ, ಬೆವರು ಇಲ್ಲದೇ ದಿಢೀರ್ ಶ್ರೀಮಂತರಾಗುವ ಅತಿಯಾಸೆಯ ಮೇಲ್‍ಮಧ್ಯಮ,, ಮಧ್ಯಮವರ್ಗಗಳ ಮನಸ್ಥಿತಿಯನ್ನು ಬಳಸಿಕೊಂಡು. ‘ನಮ್ಮಲ್ಲಿ ಹಣ ಹೂಡಿ, ಮೂರ್ನಾಲ್ಕು ತಿಂಗಳಲ್ಲಿ ಅದನ್ನು ಡಬಲ್ ಮಾಡ್ತೀವಿ’ ಎಂಬ ಟ್ಯಾಗ್‍ಲೈನ್ ಅನ್ನು ಅತಿಯಾಶೆಯ ಅಮಾಯಕರ ತಲೆಗೆ ತುಂಬುವಲ್ಲಿ ಆ್ಯಂಬಿಡೆಂಟ್ ಮಾಲೀಕ ಫರೀದ್ ಮತ್ತು ಆತನ ಮಗ, ಕಂಪನಿಯ ನಿರ್ದೇಶಕ ಯಶಸ್ವಿಯಾದರು. ಹೇಗೆ ಎಂದು ಕೇಳಿದವರಿಗೆ ‘ಸರ್ವರಿಗೂ ಸಂಪತ್ತಿನ ಹಂಚಿಕೆ’ ಎಂಬ ಸಾಮಾಜಿಕ ನ್ಯಾಯದ ಬೋಧನೆ ಮಾಡಿದ ‘ನವ ಸಮಾಜವಾದಿ’ ಫರೀದ್, ‘ ನೀವು ಕೊಟ್ಟ ಹಣವನ್ನು ಡೈಮಂಡ್ ಬ್ಯುಸಿನೆಸ್ ಮತ್ತು ರಿಯಲ್ ಎಸ್ಟೇಟ್‍ನಲ್ಲಿ ಹೂಡಿ, ಭಾರಿ ಲಾಭಗಳಿಸಿ ನಿಮಗೆ ಕೊಡ್ತೀವಿ’ ಎಂದು ರೀಲುಬಿಟ್ಟ.


ಈ ‘ಬಂಗಾರದ ಮನುಷ್ಯ’ ಈ ಮಾತು ನಂಬಿದ ಸಿಲಿಕಾನ್ ಸಿಟಿಯ ಸಾವಿರಾರು ಕುಟುಂಬಗಳು ದೊಡ್ಡ ಆ್ಯಂಬಿಷೆನ್ ಇಟ್ಟುಕೊಂಡು ಆ್ಯಂಬಿಡೆಂಟ್‍ನಲ್ಲಿ ಪ್ರಾಮಾಣಿಕವಾಗಿ ದುಡ್ಡನ್ನು ಸುರಿದವು.
ಆದರೆ ತಿಂಗಳುಗಳು ಕಳೆದ ಮೇಲೆ ಫರೀದ್‍ನ ಬಳಿ ಹೋಗಿ ತಮ್ಮ ಕನಸಿನ ಮೊತ್ತ ಕೇಳಿದ ಗ್ರಾಹಕರಿಗೆ ಫರೀದ್ ಏನೇನೋ ಸಬೂಬು ಹೇಳಿ ಕಾಯಲು ಹೇಳತೊಡಗಿದ. ಬರುಬರುತ್ತ ಸತ್ಯದ ವಾಸನೆ ಹಿಡಿದ ಗ್ರಾಹಕರಿಗೆ ದುಸ್ವಪ್ನಗಳು ಕಾಡತೊಡಗಿದು. ತಾವೆಲ್ಲ ಯಾಮಾರಿದೆವು ಎಂದು ಅರಿತ ‘ಸಮಾನಮನಸ್ಕ’ ಗ್ರಾಹಕರಿಗೆ ಪುಣ್ಯಕ್ಕೆ ಆಗಲಾದರೂ ಕಾನೂನು, ಪೊಲೀಸ್ ವ್ಯವಸ್ಥೆಗಳು ನೆನಪಾದವು. ಥಟ್ಟಂತ ಜಾತಿ-ಧರ್ಮಗಳ ಭೇದಭಾವ ಮರೆತು ಒಟ್ಟಾದ ಈ ಗ್ರಾಹಕರು ಸೀದಾ ಬೆಂಗಳೂರಿನ ಡಿಜೆ ಹಳ್ಳಿಯ ಪೊಲೀಸರ ಬಳಿ ಹೋಗಿ ಬದುಕಿಸಲು ಮನವಿ ಮಾಡಿ, ದೂರು ದಾಖಲಿಸಿದರು.
ಸಿಸಿಬಿ ಎಂಟ್ರಿ
ಪ್ರಕರಣ ಸಿಸಿಬಿ ಕೈಗೆ ಬಂತು. ಫರೀದ್ ಮತ್ತಾತನ ಅಕೌಂಟುಗಳನ್ನು ಪರಿಶೀಲನೆ ಮಾಡತೊಡಗಿದ ಸಿಸಿಬಿಗೆ ಭಯಂಕರ ವಂಚನೆಯ ಜಾಲವೊಂದು ತೆರೆದುಕೊಳ್ಳತೊಡಗಿತು. 15 ಸಾವಿರ ಜನರ 900 ಕೋಟಿ ಈ ವಂಚಕರ ಅಕೌಂಟ್‍ನಲ್ಲಿ ಕಂಡುಬಂತು! ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಬಿಕಾ ಆಭರಣ ಮಳಿಗೆಯ ಮಾಲೀಕ ರಮೇಶ್ ಎಂಬಾತನ ಖಾತೆಗೆ ಸುಮ್ಮಸುಮ್ಮನೇ 20 ಕೋಟಿ ವರ್ಗಾಯಿಸಿದ್ದ ಫರೀದ್. ಇದರ ಜಾಡು ಹಿಡಿದು ಹೋದರೆ, ಜನಾರ್ಧನರೆಡ್ಡಿ, ಆತನ ಭಂಟ ಅಲಿಖಾನ್, ಫರೀದ ಗೆಳೆಯ ಬೃಜೇಶ ರೆಡ್ಡಿಯ ಹೆಸರುಗಳು ಪತ್ತೆಯಾದವು.. ‘ಇಡಿ ಅಧಿಕಾರಗಳು ಗೊತ್ತು. ತನಿಖೆಯಲ್ಲಿ ನಿನಗೆ ಸಹಾಯ ನೀಡುವುದಾಗಿ ಹೇಳಿ ಜನಾರ್ಧನ ರೆಡ್ಡಿ 20 ಕೋಟಿ ಕೇಳಿದ್ದರು ಎಂದ ಫರೀದ್ ..
ಬೃಜೇಶÀ ರೆಡ್ಡಿಯೇ ಕೊಂಡಿ!


ಗ್ರಾಹಕರ ದೂರ ದಾಖಲಾಗುವ ಮೊದಲೇ ಇ.ಡಿ ಫರೀದನ ಹಿಂದೆ ಬಿದ್ದಿತ್ತು. ಆಗ ಬೃಜೇಶ ರೆಡ್ಡಿ ಫರೀದ್‍ಗೆ ನೆರವು ನೀಡುವುದಾಗಿ ಹೇಳಿ ಜನಾರೆಡ್ಡಿ, ಅಲಿಖಾ£ರನ್ನು ಪರಿಚಯಿಸಿದ್ದ. ಆಗಲೇ ರೆಡ್ಡಿ 20 ಕೋಟಿ ಡೀಲ್‍ನ ಮಾತಾಡಿದ್ದು. ಈ ಡೀಲ್ ಮಾರ್ಚ್‍ನಲ್ಲಿ ತಾಜ್‍ವೆಸ್ಟ್ ಎಂಡ್ ಹೊಟೇಲಿನಲ್ಲಿ ನಡೆದಿತ್ತು. ಮೊದಲು ನಗದು ಕೇಳಿದ್ದ ಜನಾರೆಡ್ಡಿ, ನಂತರ ಆಭರಣಂಗಡಿಯಮಾಲೀಕರನ್ನು ಕರೆತಂದ. ಅಲಿಖಾನ್ ಸೂಚನೆಯಂತೆ ಫರೀದ್ ಬೆಂಗಳೂರಿನ ಅಂಬಿಕಾ ಜೆವೆಲರಿಯ ರಮೇ±ಕೊಠಾರಿಯ ಖಾತೆಗೆ ಹಾಕಿದ್ದ. ಈ ಹಣ ಇಟ್ಟುಕೊಂಡ ಕೊಠಾರಿ ಅದಕ್ಕೆ ಪ್ರತಿಯಾಗಿ 57 ಕೆಜಿ ಚಿನ್ನದ ಗಟ್ಟಿಗಳನ್ನು ಬಳ್ಳಾರಿ ಆಭರಣ ರಮೇಶನಿಗೆ ನೀಡಿದ್ದ. ಈ ಗಟ್ಟಿಗಳನ್ನು ಅಲಿಖಾನ್ ಜನಾಗೆ ತಲುಪಿಸಿದ್ದ!
ಗಣಿಗಳ್ಳರು, ಇಂಟರ್ ನ್ಯಾಷನಲ್ ಆರ್ತಿಕ ವಂಚಕ, ಆಭರಣ ವ್ಯಾಪಾರಿಗಳು…. ದಿಗ್ಭ್ರಮೆಹುಟ್ಟಿಸುವ ವಂಚನೆಯ ಜಾಲ! ಬಾಲಿವುಡ್, ಸ್ಯಾಂಡಲ್‍ವುಡ್‍ನಲ್ಲಿ ಅಪರಾಧ ಲೋಕದ ಚಿತ್ರಕತೆಗಳನ್ನು ಬರೆಯುವವರು ಅಲಿಖಾನ್, ರೆಡ್ಡಿ, ಫರೀದ್‍ಗಳನ್ನು ಭೇಟಿಯಾದರೆ ಕಥಾಗುಚ್ಛಗಳೇ ಸಿಗಬಹುದು.
ಅಂದಂತೆ ಈ ಅಲಿಖಾನ್ ಜನಾರೆಡ್ಡಿಯ ಗಣಿಯ ಲೂಟಿಯ ಸ್ಕೆಚ್‍ಗಳನ್ನು ಅಪಾರ ’ಶ್ರಮ’ದಿಂದ ಹೆಣೆದ ಮಾಸ್ಟರ್ ಮೈಂಡ್ ಈ ಅಲಿಖಾನ್. ಇಂಜಿನಿಯರಿಂಗ್ ಓದುವಾಗ ಇವನ ಟ್ಯಾಲೆಂಟ್ ನೋಡಿ ಪ್ರಧ್ಯಾಪಕರೇ ಅಚ್ಚರಿ ಪಡುತ್ತಿದ್ದರು. ಬಿಇ ನಂತರ ಈ ಹುಡುಗ ಐಟಿ ಅಥವಾ ಫೈನಾನ್ಸಿಯಲ್ ಸ್ತಾರ್ಟ್‍ಅಪ್ ತೆರೆಬಲ್ಲ ಪ್ರಿತಿಭೆ ಹೊಂದಿದ್ದಾನೆ ಎಂದು ಗುಣಗಾನ ಮಾಡುತ್ತಿದ್ರಂತೆ. ಆದರೆ ಬಿಇ ಜುಜುಬಿ ಅಂದ ಅಲಿಖಾನ್ ಹೇಗೋ ರೆಡ್ಡಿಯ ಸಂಪರ್ಕಕ್ಕೆ ಬಂದ. ತನ್ನ ಜಾಣ್ಮೆತನ್ನು ವಂಚನೆಗೆ ಬಳಸಿರೆಡ್ಡಿಗಳಿಗೆ ಆಪ್ತನಾದ. ಬಳ್ಳಾರಿಯಸಾಮಾನ್ಯ ಅಕ್ಕಸಾಲಿಗರು, ಟೇಲರ್‍ಗಳ ಹೆಸರಲ್ಲಿ ಬ್ಯಾಂಕ್ ಖತೆ ತೆರೆದು, ಅವುಗಳಲ್ಲಿ ಗಣಿಲೂಟಿದುಡ್ಡನ್ನು ಜಮಾ ಮಾಡಿದ್ದ, ಈ ಖಾತೆಗಳ ಜಾಡು ಹಿಡಿದು ಹೋದ ಅರಣ್ಯಾಧಿಕಾರಿಗಳು, ಲೋಕಾಯಿಕ್ತ ಸಂತೋಷಹೆಗಡೆಯವರು ಬೆಚ್ಚಿ ಬಿದ್ದಿದ್ದರು. ಪಾಪ, ಈ ಅಮಾಯಕ ಅಮಾಯPಕ, ಬಡ ಅಕ್ಕಸಾಲಿಗರು, ಟೇಲರ್‍ಗಳಿಗೆ ಅಲಿಖಾನ್ ಗೊತ್ತೂ ಇರಲಿಲ್ಲ, ತಮ್ಮಹೆಸರಲ್ಲಿ ಖಾತೆಗಳಿರುವುದೂ ಗೊತ್ತಿರಲಿಲ್ಲ! ಬ್ಯಾಂಕ್ ಅಧಿಕಾರಿಗಳ ನೆರವಿನಿಂದನ ಫೋರ್ಜರಿ ಮಾಡಿ ಖಾತೆಗಳನ್ನು ಸೃಷ್ಟಿಮಾಡಿ, ಸಾವಿರರು ಕೋಟಿಗಳ ವ್ಯವಹಾರ ನಡೆಸಿದ ‘ಪ್ರತಿಭಾವಂತ’ ಈ ಅಲಿಖಾನ್. ಬೇಲಿಕೇರ ಬಂದರಿನಲ್ಲಿ ಅರಣ್ಯ ಇಲಾಖೆ ಸ್ಟಾಕ್ ಮಾಡಿದ್ದ ಅಕ್ರಮ ಅದಿರನ್ನೇ ಚೀನಾಕ್ಕೆ ರಫ್ತು ಮಾಡಿದ ಭೂಪ ಈ ಅಲಿಖಾನ್!
ಫರೀದ್ ನಂಬಿ ವಂಚನೆಗೊಳಗಾದ 15 ಆವಿರ ಗ್ರಾಹಕರಿಗೆ ನ್ಯಾಯ ಒದಗಿಸುವ ಜವಶಬ್ದಾರಿ ಗೃಹ ಸಚಿವ ಪರಮೇಶ್ರರ್ ಜವಾಬ್ದಾರಿ. ಅವರು ಪೊಲೀಸ್ ಅಧಿಕಾರಿಗಳಾದ ಸುನಿಲಕುಮರ್, ಅಲೋಕ್ ಕುಮಾರ್ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡದಿದ್ದರೆ ಸಾಕಷ್ಟೇ1

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.