ಪ್ಯಾನ್‌ ಕಾರ್ಡ್‌ಗೆ ಆಧಾರ್ ಜೋಡಣೆ : ಡಿಸೆಂಬರ್‌ 31ರವರೆಗೆ ಗಡುವು ವಿಸ್ತರಿಸಿದ ಕೇಂದ್ರ

ದೆಹಲಿ : ಪ್ಯಾನ್‌ ಕಾರ್ಡ್‌ ನಂಬರ್‌ ಜೊತೆ ಆಧಾರ್‌ ಕಾರ್ಡ್‌ ನಂಬರ್‌ ನೋಂದಣಿ ಮಾಡಿಸಲು ಇದ್ದ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.

ಆಗಸ್ಟ್‌ 31ರೊಳಗೆ ಪ್ಯಾನ್‌ ಕಾರ್ಡ್‌ಗೆ ಆಧಾರ್‌ ನಂಬರ್ ಲಿಂಕ್‌ ಮಾಡುವ ಗಡುವು ನೀಡಲಾಗಿತ್ತು. ಈಗ ಮತ್ತೆ ಆ ಅವಧಿಯನ್ನು ವಿಸ್ತರಿಸಲಾಗಿದೆ.

ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿದ್ದು, ಜನ ಸರ್ಕಾರಿ ಸೇವೆ ಪಡೆಯಲು ಆಧಾರ್‌ ನೋಂದಣಿ ಮಾಡಿಸುವ  ದಿನಾಂಕದ ಗಡುವನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸುವುದಾಗಿ ಹೇಳಿತ್ತು. ಈಗ ಪ್ಯಾನ್‌ ಕಾರ್ಡ್‌ ಜೊತೆ ಆಧಾರ್ ನಂಬರ್‌ ಲಿಂಕ್‌ ಮಾಡುವುದಕ್ಕೆ ಇದ್ದ ಗಡುವನ್ನೂ ವಿಸ್ತರಿಸಿದೆ.

Comments are closed.