ಒಂದು ವಾರ 50,000 ರೈತರಿಂದ ಬೃಹತ್ ಪ್ರತಿಭಟನೆ: ರೈತರ ದನಿ ಆಲಿಸಲು ಆಗ್ರಹ

ಇಂದಿನಿಂದ ಒಂದು ವಾರಗಳ ಕಾಲ ಮಹಾರಾಷ್ಟ್ರದಲ್ಲಿ ಸುಮಾರು 50,000 ರೈತರಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.

ಅಖಿಲ ಭಾರತ ಕಿಸಾನ್ ಸಭಾ(AIKS) ಈ ಪ್ರತಿಭಟನೆಯನ್ನು ನಡೆಸುತ್ತಿದ್ದು, ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆ, ನೀರಾವರಿ ಸೌಲಭ್ಯ, ರೈತರಿಗೆ ಪಿಂಚಣಿ ವ್ಯವಸ್ಥೆ ಮುಂತಾದ ಬೇಡಿಕೆಗಳ ಡೇರಿಕೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.

ಮಹಾರಾಷ್ಟ್ರದ ನಾಸಿಕ್ ನಿಂದ ಆರಂಭವಾಗಿ ಮುಂಬೈಯಲ್ಲಿ ಪ್ರತಿಭಟನಕಾರರು ಸೇರಿದ್ದಾರೆ.”ಮಹಾರಾಷ್ಟ್ರ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ರೈತರ ದನಿಯನ್ನು ಆಲಿಸುತ್ತಿಲ್ಲ. ಸರ್ಕಾರದ ಅವಧಿಗಳು ಮುಗಿಯುತ್ತ ಬಂದರೂ ನಮ್ಮ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ. ಆದ್ದರಿಂದ ಸರ್ಕಾರ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಕಾರಣ ನಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು AIKS ಹೇಳಿಕೆ ನೀಡಿದೆ.

2018 ಮಾರ್ಚ್ ನಲ್ಲಿ AIKS 35000 ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಿತ್ತು. ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನಿಟ್ಟಿತ್ತು. ಸರ್ಕಾರ ತನ್ನ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ವಾಪಸ್ ಪಡೆದಿತ್ತು. ಆದರೆ ಈ ಪ್ರತಿಭಟನೆ ನಡೆದು ಒಂದು ವರ್ಷವಾದರೂ ಸರ್ಕಾರ ತನ್ನ ಬೇಡಿಕೆ ಈಡೇರಿಸದ ಕಾರಣ ಮತ್ತೆ ಪ್ರತಿಭಟನೆಗೆ ಮುಂದಾಗಿದೆ.

ಒಡಿಶಾಸಲ್ಲಿ ಇದೇ ಬೇಡಿಕೆಗಳನ್ನು ಮುಂದಿಟ್ಟು ನಬ ನಿರ್ಮಾಣ ಕೃಷಕ್ ಸಂಘಟನಂ(NNKS) ಫೆ.21 ರಂದು 12 ಗಂಟೆಗಳ ಒಂದು ದಿನದ ಬಂದ್ ಗೆ ಕರೆನೀಡಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.