35 ಸಾವಿರಕ್ಕೂ ಅಧಿಕ ಹಾವುಗಳ ಸಂರಕ್ಷಣೆ ಮಾಡಿದ ಸ್ನೇಕ್ ಶ್ಯಾಮ್…!

ಹಾವು ಸಂರಕ್ಷಣೆ ಮಾಡುವಲ್ಲಿ ಹೆಸರುವಾಸಿಯಾಗಿರುವ ರಾಷ್ಟ್ರಮಟ್ಟದಲ್ಲು ಖ್ಯಾತಿ ಗಳಿಸಿರೋ ಸ್ನೇಕ್ ಶ್ಯಾಮ್ ಮೈಸೂರಿನ ಇನ್‌ಫೋಸಿಸ್ ಆವರಣದಲ್ಲಿ 35 ಸಾವಿರನೇ ಹಾವು ಹಿಡಿದು ದಾಖಲೆ ಸೃಷ್ಟಿಸಿದ್ದಾರೆ.

ಈಗಾಗಲೇ  34 ಸಾವಿರ ಹಾವುಗಳ ಸಂರಕ್ಷಣೆ ಮಾಡಿದ ಸ್ನೇಕ್ ಶ್ಯಾಮ್, 35ಸಾವಿರದ ಹಾವನ್ನ ಇನ್ಫೋಸಿಸ್‌ನಲ್ಲಿ ಹಿಡಿಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

ಇನ್ಫೋಸಿಸ್ ಸಿಬ್ಬಂದಿ ಹಾವು ಕಂಡು ಸ್ನೇಕ್ ಶಾಮ್‌ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಶ್ಯಾಮ್ ಕೊಳಕು ಮಂಡಲದ ಹಾವನ್ನ ಸಂರಕ್ಷಣೆ ಮಾಡಿದ್ದಾರೆ. ಈ ವರೆಗು 80ಸಾವಿರಕ್ಕು ಹೆಚ್ಚು ಹಾವುಗಳ ರಕ್ಷಣೆ ಮಾಡಿದ್ದಾರೆ. ಆದರೆ  1997ರಿಂದ ದಾಖಲೆ ಸಂಗ್ರಹ ಮಾಡಿರುವ ಸ್ನೇಕ್ ಶ್ಯಾಮ್ ಮೈಸೂರಿನ ಇನ್‌ಫೋಸಿಸ್ ಆವರಣದಲ್ಲಿ 35 ಸಾವಿರನೇ ಹಾವು ಹಿಡಿದಿದ್ದಾರೆ.

40ವರ್ಷದಿಂದ ಹಾವುಗಳನ್ನ ಸಂರಕ್ಷಣೆ ಮಾಡ್ತಿರೋ ಶ್ಯಾಮ್, ಈಗ ಅಧಿಕೃತವಾಗಿ ಹಲವು ವಿವಿಧ ಜಾತಿಯ ಹಾವುಗಳನ್ನ 35ಸಾವಿರ ಹಾವುಗಳ ರಕ್ಷಣೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights