20,000 ರೂಪಾಯಿ ನೋಟಿನಲ್ಲಿ ಗಣೇಶನ ಚಿತ್ರ….!

ನಮ್ಮ ದೇಶದಲ್ಲಿ ಅದೇಷ್ಟೊ ಬಾರಿ ನೋಟ್ ಚೇಂಜ್ ಮಾಡಲಾಗಿದೆ. ಆದರೆ ನಮ್ಮ ದೇಶದ ನೋಟುಗಳಲ್ಲಿ ನಾವು ಯಾವುದೇ ದೇವರ ಚಿತ್ರ ಇರುವುದನ್ನ ನೋಡಿಲ್ಲ. ಆದರೆ ಬೇರೆ ದೇಶದ ನೋಟಿನಲ್ಲಿ ವಿಘ್ನ ವಿನಾಯಕ ಫೋಟೋ ಇರುವುದಾಗಿ ತಿಳಿದು ಬಂದಿದೆ.

ಹೌದು… ಇಂಡೋನೇಷ್ಯಾದ ನೋಟಿನಲ್ಲಿ ಗಣೇಶನ ಚಿತ್ರ ಇರುವ ನೋಟಿನ ಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದ್ಆಡುತ್ತಿದೆ.  ಅಂದ ಹಾಗೆ ಭಾರತದ ನೋಟಿಲ್ಲಿ ನಮ್ಮ ಯಾವ ದೇವತೆಗಳು ಇಲ್ಲ. ಆದರೆ, ಈ ದೇಶದಲ್ಲಿ ವಿಘ್ನವಿನಾಶಕ ಗಣೇಶನ ಫೋಟೋ ಇದೆ. ಅದು ಮುಸ್ಲಿಂ ಪ್ರಾಬಲ್ಯ ಇರುವ ದೇಶದಲ್ಲಿ ಎಂದರೆ ನೀವು ನಂಬಲೇಬೇಕು.

ಬಾಲಿವುಡ್ ನಿರ್ಮಾಪಕ ತನುಜ್ ಗಾರ್ಗ್ ಎಂಬವರು ಇತ್ತೀಚೆಗೆ ಈ ಫೋಟೊವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಇದೊಂದೇ ದೇಶದ ನೋಟಿನಲ್ಲಿ ನಮ್ಮ ಪ್ರಥಮ ಪೂಜಕ ಗಣೇಶ ಸ್ಥಾನ ಪಡೆದಿದ್ದಾನೆ. ಅದು ಮುಸ್ಲಿಂ ಸಮುದಾಯದವರೇ ಹೆಚ್ಚಿರುವ ಇಂಡೋನೇಷ್ಯಾದಲ್ಲಿ’ ಎಂದು 20,000 ರೂಪಾಯಿಯ ಇಂಡೊನೇಷ್ಯಾದ ಹಳೆಯ ನೋಟನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಗಣೇಶ ಎಂದರೆ ಬುದ್ಧಿವಂತ, ಕಲೆ ಮತ್ತು ವಿಜ್ಞಾನದ ಸಂಕೇತ ಎಂದು ಇಲ್ಲಿ ನಂಬಲಾಗಿದೆ. ಈ ಕಾರಣಕ್ಕಾಗಿಯೇ ನೋಟಿನಲ್ಲಿ ಮುದ್ರಿಸಲಾಗಿದೆ ಎಂದು ಹೇಳಲಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.