ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಲಾಯಿಸಿದ ರೈತ : ವೈರಲ್ ಆದ ವಿಡಿಯೋ

ಹುಬ್ಬಳ್ಳಿಯಲ್ಲಿ ರೈತರೊಬ್ಬರು ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು.

ಜನರ ಮುಖದಲ್ಲಿ ನಗೆಯುಕ್ಕಿಸುತ್ತಿದೆ. ನಗರದ ಗಬ್ಬೂರು ಕ್ರಾಸ್ ಬಳಿ ಟ್ರ್ಯಾಕ್ಟರ್ ತೆಗೆದುಕೊಡು ಹೊಲಕ್ಕೆ ಹೋಗುತ್ತಿದ್ದ ರೈತ ತಲೆಗೆ ಹೆಲ್ಮೆಟ್ ಧರಿಸಿದ್ದ. ಇದನ್ನು ಕಂಡ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಟ್ರಾಫಿಕ್ ಪೊಲೀಸರ ದುಬಾರಿ ದಂಡಕ್ಕೆ ಹೆದರಿ ರೈತ ಹೆಲ್ಮೆಟ್ ಧರಿಸಿದ್ದಾನೆಂದು ಕೆಲವರು ವಿಶ್ಲೇಷಿಸಿದ್ದಾರೆ.

ನೂತನ ಮೋಟಾರು ವಾಹನ ಕಾಯ್ದೆಯ ಫಲಶೃತಿಯಿದು ಎಂದು ಕೆಲವರು ಕಿಚಾಯಿಸಿದ್ದಾರೆ. ಹುಬ್ಬಳ್ಳಿಯ ರಸ್ತೆಗಳು ಧೂಳುಮಯವಾಗಿವೆ. ಧೂಳಿನಿಂದ ರಕ್ಷಣೆ ಪಡೆಯಲು ಹೆಲ್ಮೆಟ್ ಹಾಕಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಹಾನಗರ ಪಾಲಿಕೆಯಿಂದ ರೈತರಿಗೆ ಹೆಲ್ಮೆಟ್ ಭಾಗ್ಯ ಎನ್ನುತ್ತಿದ್ದಾರೆ. ರೈತನ ಹೆಲ್ಮೆಟ್ ಈಗ ವಾಣಿಜ್ಯ ನಗರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights