ಹಳ್ಳದಲ್ಲಿ ಕಾಣಿಸಿಕೊಂಡ ಮೊಸಳೆಗಳು : ಜನರಲ್ಲಿ ಮನೆ ಮಾಡಿದ ಆತಂಕ

ಹಳ್ಳದಲ್ಲಿ ಕಾಣಿಸಿಕೊಂಡ ಮೊಸಳೆಗಳನ್ನು ಕಂಡು ಜನ ಆತಂಕಗೊಂಡಿರುವ ಘಟನೆ ಧಾರವಾಡದ ಅಳ್ನಾವರ್ ತಾಲೂಕಿನಲ್ಲಿ ನಡೆದಿದೆ.

ಹೌದು.. ಎರಡು ಮೊಸಳೆಗಳು ಅಳ್ನಾವರ್ ಪಟ್ಟಣದ ಸಮೀಪದಲ್ಲಿರುವ ಡೌಗಿ ನಾಲಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಕಳೆದ ಒಂದು ವಾರದಿಂದ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ.

ಹೀಗಾಗಿ ಜನರು ಡೌಗಿನಾಲಾ ಹಳ್ಳದ ಸುತ್ತ ಹೊಗಲು ಹೆದರುತ್ತಿದ್ದಾರೆ. ನಿರಂತರ ಸುರಿದ ಮಳೆಗೆ ಹಳ್ಳಕ್ಕೆ ಬಂದು ನೆಲೆ ನಿಂತಿರುವ ಮೊಸಳೆಗಳನ್ನ ಹಿಡಿಯಲು  ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಖ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights