ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟ : ಬಿಜೆಪಿಗೆ ಸ್ಪಷ್ಟ ಬಹುಮತ – ಕಾಂಗ್ರೆಸ್ ಗೆ ಹೀನಾಯ ಸೋಲು

ಮೊನ್ನೆ ಚುನಾವಣೆಯಾದ 14 ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು ಮೂರರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಒಂದರಲ್ಲಿ ಬಹುಮತ ಸಿಕ್ಕಿದೆ. ಒಂದು ಸಂಸ್ಥೆಗಳಲ್ಲಿ ಅತಂತ್ರ ಫಲಿತಾಂಶ ಎದುರಾಗಿದೆ. ಕೆಲವು ಕಡೆ ಜೆಡಿಎಸ್ ಪಕ್ಷ, ಇನ್ನೂ ಕೆಲವು ಕಡೆ ಪಕ್ಷೇತರರು ಕಿಂಗ್ ಮೇಕರ್ ಆಗಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಕುಂದಗೋಳ ಮತ್ತು ಜೋಗ ಪಟ್ಟಣ ಪಂಚಾಯಿತಿಗಳೂ ಕೂಡ ಬಿಜೆಪಿ ಪಾಲಾಗಿವೆ. ಇನ್ನು, ಕಾಂಗ್ರೆಸ್ ಪಕ್ಷವು ಕನಕಪುರ ನಗರಸಭೆಯನ್ನು ಸ್ಪಷ್ಟಬಹುಮತದೊಂದಿಗೆ ಗೆದ್ದುಕೊಂಡಿದೆ.

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 45 ವಾರ್ಡ್​ಗಳ ಪೈಕಿ ಕಾಂಗ್ರೆಸ್ 22ರಲ್ಲಿ ಗೆದ್ದಿದೆ. ಅಧಿಕಾರ ಹಿಡಿಯಲು ಇನ್ನೊಂದೇ ಸ್ಥಾನ ಬೇಕಿರುವ ಕಾಂಗ್ರೆಸ್​ಗೆ ಪಕ್ಷೇತರರ ಬೆಂಬಲ ಸಿಗುವ ಸಾಧ್ಯತೆ ಇದೆ.


ಎಲ್ಲಾ 14 ಸ್ಥಳೀಯ ಸಂಸ್ಥೆಗಳ 418 ವಾರ್ಡ್​ಗಳ ಪೈಕಿ 151ರಲ್ಲಿ ಕಾಂಗ್ರೆಸ್​,  125ರಲ್ಲಿ ಬಿಜೆಪಿ, 61ರಲ್ಲಿ ಜೆಡಿಎಸ್ ಜಯಭೇರಿ ಭಾರಿಸಿದೆ. ಈ ಮೂಲಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟಾರೆಯಾಗಿ​ ಮೇಲುಗೈ ಸಾಧಿಸಿದೆ.
ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಕ್ಕಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights