ಸೋಲಿನ ಭಯದಲ್ಲಿ ಬಿಜೆಪಿ ಮಾಡ್ತಿರೋದೆನೂ? : ಉಪ ಚುನಾವಣೆ ಸೋತರೆ ಕಟೀಲ್ಗೆ ಕಷ್ಟ

ಶತಾಯ-ಗತಾಯ ಅನರ್ಹ ಶಾಸಕರ ಕ್ಷೇತ್ರಗಳನ್ನ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿರುವ ಬಿಜೆಪಿಗೆ ಸೋಲಿನ ಆತಂಕ ಶುರುವಾಗಿದೆ. ಅದಕ್ಕೆ ಬಿಜೆಪಿ ಈಗ ಮಾಡ್ತಿರೋದೇನೂ?

ಕೇಂದ್ರ ಬಿಜೆಪಿ ಸರ್ಕಾರದ ಮಲತಾಯಿ ಧೋರಣೆ, ಅನುದಾನ ಬಿಡುಗಡೆ ಮಾಡುವಲ್ಲಿ ಕೇಂದ್ರದ ವಿಳಂಬ ನೀತಿ ಸೇರಿದಂತೆ ಹಲವು ಕಾರಣಗಳಿಂದ ಬಿಜೆಪಿಗೆ ಉಪ ಚುನಾವಣೆಯಲ್ಲಿ ಸೋಲಿನ ಭಯ ಶುರುವಾಗಿದೆ. ಇನ್ನು ಉಮೇದಿನಿಂದ ಸರ್ಕಾರ ರಚಿಸಿದ ಯಡಿಯೂರಪ್ಪ ಅವ್ರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವ್ರೆ ಹಲವು ವಿಚಾರಗಳಲ್ಲಿ ಅಡ್ಡಗಾಲು ಹಾಕ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿ ವೋಟ್ ಬ್ಯಾಂಕ್ ಮೇಲೆ ಪರಿಣಾಮ ಬೀರಿವೆ. ಹಾಗಾಗಿ ಅನರ್ಹ ಕ್ಷೇತ್ರಗಳಲ್ಲಿ ಸೋಲಿನ ಭಯ ರಾಜ್ಯ ಬಿಜೆಪಿ ಘಟಕಕ್ಕೆ ಶುರುವಾಗಿದೆ. ನಳೀನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೊದಲ ಸವಾಲನ್ನ ರಾಜ್ಯ ಬಿಜೆಪಿ ಎದುರಿಸುತ್ತಿದೆ. ಚುನಾವಣೆಯಲ್ಲಿ ಸೋತರೆ ಕಟೀಲ್ಗೆ ಕಷ್ಟವಾಗಲಿದೆ.

ಸೋಲಿನ ಭಯದಿಂದ ದಿಢೀರ್ ಅಂತಾ ನಾಳೆ ದಕ್ಷಿಣ ಕರ್ನಾಟಕದ 7 ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆಯನ್ನ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕರೆದಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು ಸಂಜೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ನಾಡಿದ್ದು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಬಾಗದ 8 ವಿಧಾನಸಭಾ ಕ್ಷೇತ್ರಗಳ ಸಭೆಯನ್ನ ಕಟೀಲ್ ಕರೆದಿದ್ದಾರೆ. ಉಪ ಚುನಾವಣೆಯನ್ನ ಗೆಲ್ಲುವ ತೀವ್ರ ಒತ್ತಡದಲ್ಲಿ ಕಟೀಲ್ ಇದ್ದಾರೆ. ಉಪ ಚುನಾವಣೆ ಸೋತಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಪತನದ ಆರೋಪ ಕಟೀಲ್ ಮೇಲೆ ಬರಲಿದೆ. ಹಾಗಾಗಿ ನಾಳೆಯಿಂದಲೇ ಬಿಜೆಪಿ ಸರಣ ಸಭೆಗಳನ್ನ ಉಪ ಚುನಾವಣೆ ಹಿನ್ನೆಲೆಯಲ್ಲಿ ನಡೆಸುತ್ತಿದೆ. ಬಿಜೆಪಿ ಹೈಕಮಾಂಡ್ ಇಟ್ಟಿರುವ ಭರವಸೆಯನ್ನ ನಳೀನ್ ಕುಮಾರ್ ಕಟೀಲ್ ಉಳಿಸಿಕೊಳ್ತಾರ? ಕಾಯ್ದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights