ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿ ಏಕಾಂಗಿಯಲ್ಲ : ಸಿದ್ದು ಮಾಜಿ ಸ್ಪೀಕರ್ ರಮೇಶಕುಮಾರ ಭರ್ಜರಿ ಬ್ಯಾಟಿಂಗ್

ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿ ಏಕಾಂಗಿಯಲ್ಲ ಎಂದು ಮಾಜಿ ಸಿಎಂ ಪರ ಮಾಜಿ ಸ್ಪೀಕರ್ ರಮೇಶಕುಮಾರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಅಥಣಿಯಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶಕುಮಾರ್, ಕಾಂಗ್ರೆಸ್ಸಿನಲ್ಲಿ ಸಿದ್ಧರಾಮಯ್ಯ ಏಕಾಂಗಿಯಾಗಿದ್ಸಾರೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ಧರಾಮಯ್ಯ ಎಂದೂ ಏಕಾಂಗಿಯಲ್ಲ. ಇಬ್ಬಿಬ್ಬರು ಇರೊಕೆ ಇದೇನು ಸಿನೇಮಾನಾ ಡಬಲ್ ಆ್ಯಕ್ಟಿಂಗ್ ಮಾಡೋಕೆ? ಅವರು ಹೆಲಿಕಾಪ್ಟರಲ್ಲಿ ಒಬ್ಬರೆ ಬರ್ತಾರೆ, ಒಂದೇ ಪಂಚೆ, ಒಂದೇ ಜುಬ್ಬಾ. ರಾಜ್ಯದ ಜನ ಸಿದ್ಧರಾಮಯ್ಯ ಪರ ಇದ್ದಾರೆ.ಯಾರೋ ಹೊತ್ತು ಹೋಗದವರು ಇಂತದ್ದನ್ನು ಹುಟ್ಟು ಹಾಕ್ತಿರ್ತಾರೆ.

ಇದು ಕೋಣೆಯೊಳಗೆ ಕುಳಿತುಕೊಂಡು ಕಿಟಕಿಯಲ್ಲಿ ನೋಡಿ ಮಾತನಾಡುವವರ ಮಾತು. ಆತ ಎಂದೂ ಎಂದೂ ಏಕಾಂಗಿಯಲ್ಲ. ಆತ ಜನರ ಮಧ್ಯೆ ಬೆಳೆದ. ಜನಪರತೆ ಉಳ್ಳ ಜನಪರ ನಾಯಕ. ಇಂತವರ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯಾದ್ಯಕ್ಷ ಯಾರಿಗೂ ಪರಿಚಯವಿಲ್ಲ. ತಾಳ್ಮೆ ಇಲ್ಲದವರ ಇಂಥವರ ಮಾತುಗಳಿಗೆ ಬೆಲೆ ಇಲ್ಲ ಎಂದು ಹರಿಹಾಯ್ದರು.

ಶಾಸಕರ ಅನರ್ಹತೆ ವಿಚಾರ :-

ಶಾಸಕರ ಅನರ್ಹತೆಯನ್ನು ರಮೇಶಕುಮಾರ ವ್ಯಕ್ತಿಗತವಾಗಿ ಮಾಡಿದ್ದಲ್ಲ. ಸಂವಿಧಾನದ ಅನ್ವಯ ಮಾಡಿದ್ದೇನೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಮಹೇಶ ಕುಮಠಳ್ಳಿ ತಾವು ಅರ್ಹ ಎಂದು ಹೇಳಿದರೆ ಅವರ ಆರೋಗ್ಯ ಸರಿಯಿಲ್ಲ. ತಕ್ಷಣ ತಲೆಗೆ ಸಂಬಂಧಿಸಿದ ವೈದ್ಯರನ್ನು ಅವರು ಸಂಪರ್ಕಿಸಬೇಕು.

ಮಹೇಶ ಕುಮಠಳ್ಳಿ ವಿರುದ್ಧ ರಮೇಶಕುಮಾರ ಹೇಳಿಕೆ :-

ಸಂವಿಧಾನದ ಪಾವಿತ್ರ್ಯತೆ ಉಳಿಬೇಕಾ ಬೇಡ್ವಾ? ತಪ್ಪುಗಳನ್ನು ಮಾಡಿದವರನ್ನು ಶಿಕ್ಷಿಸದೇ ಹೋದರೆ. ತ್ಯಾಗ, ಬಲಿದಾನ ಮಾಡಿ ಬಂದ ಸ್ವಾತಂತ್ರ್ಯ ಉಳಿಯುತ್ತಾ? ಹಣಬಲ, ತೋಳಬಲ ಹೆಚ್ಚಾದರೆ ಸಂವಿದಾನದ ಹಾಳೆಗಳನ್ನು ಹರಿದು ಹಾಕಿದಂತಾಗುತ್ತೆ. ಸಂವಿಧಾನ ಉಳಿಬೇಕಾ? ಸಂವಿದಾನ ಹೋಗ್ಬೇಕಾ? ಎಂಬುದರ ಮೇಲೆ ಬೈ ಎಲೆಕ್ಷನ್ ನಡೆಯುತ್ತುದೆ. ಸಂವಿದಾನಕ್ಜೆ ವಿರುದ್ಧವಾಗಿ ನಡೆದುಕೊಂಡಿರುವ 15 ಜನರಿಗೆ ಜನ ಬೈ ಎಲೆಕ್ಷನ್ ನಲ್ಲಿ ಬುದ್ದಿ ಹೇಳ್ತಾರೆ. ಕಾಂಗ್ರೆಸ್ ಖಾಲಿ ಮಾಡುತ್ತೇನೆ ಎಂಬುದು ರಮೇಶ ಜಾರಕಿಹೊಳಿ ಅವರ ಭಮೆ. ಭ್ರಮೆಗಳಿಗೆ ಏನೂ ಮಾಡೊಕ್ಕಾಗೊಲ್ಲ, ಹಾಗೆ ಮಾತನಾಡುವವರಿಗೆ ಪ್ರಬುದ್ಧತೆ ಇಲ್ಲ. ಇನ್ನು ಮುಂದೆ ಕಾಂಗ್ರೆಸ್ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಬೈ ಎಲೆಕ್ಷನ್ ಮುಗಿದ ಮೇಲೆ ಕಾಂಗ್ರೆಸ್ ನಿಂದ ಯಾವುದೇ ಜವಾಬ್ದಾರಿಯನ್ನು ನಿರೀಕ್ಷಿಸುತ್ತಿಲ್ಲ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights