ಸಾಂಪ್ರದಾಯಿಕ ದಸರಾ ಚಾಲನೆಗೆ ಸಿದ್ಧಗೊಂಡ ರತ್ನಖಚಿತ ಸಿಂಹಾಸನ…

ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ದಸರಾಗೆ ಚಾಲನೆ ನೀಡಲು ಇಂದು ಅರಮೆಯ ರತ್ನ ಖಚಿತ ಸಿಂಹಾಸನವನ್ನು ಸಿದ್ದಗೊಳಿಸಲಾಗಿದೆ. ಸೆಪ್ಟೆಂಬರ್ 29ರಿಂದ ಆರಂಭವಾಗಲಿರುವ ರಾಜಮನೆತನದ ದಸರಾ ಖಾಸಗಿ ದರ್ಬಾರ್ ಗೆ ರತ್ನಖಚಿತ ಸಿಂಹಾಸನವನ್ನು ಶಾಸ್ರೋಕ್ತವಾಗಿ ಜೋಡಣೆ ಮಾಡಲಾಯಿತು.

ರಾಜಮನೆತನದ ಖಾಸಗಿ ದರ್ಬಾರಿಗೆ ನಡೆಯುವ ಮೊದಲ ಕಾರ್ಯಕ್ರಮ ಇದಾಗಿದ್ದು, ಇದಕ್ಕೆ ರತ್ನಖಚಿತ ಸಿಂಹಾಸನ ಜೋಡಣೆಯಾಗಿದೆ. ಇತರೆ ಪೂಜಾ ಕೈಂಕರ್ಯಗಳಿಗು ರಾಜಮನೆತನದಿಂದ ಭರದ ಸಿದ್ಧತೆ ನಡೆಯುತ್ತಿವೆ.

ಶುಭಲಗ್ನದಲ್ಲಿ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಚಿನ್ನದ ಸಿಂಹಾಸನ ಜೋಡಣೆ ಕಾರ್ಯ ನೆರವೇರಿತು.  ಯದುವಂಶದ ಪ್ರಮೋದಾದೇವಿ, ಯದುವೀರ್ ಒಡೆಯರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಇದಾಗಿತ್ತು. ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾದ ಸಿಂಹಾಸನ ಜೋಡಣೆ, ಮಧ್ಯಾಹ್ನ 1 ಗಂಟೆಯ ನಂತರ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ನೀಡಲಾಯ್ತು.

ಸಿಂಹಾಸನ ಜೋಡಣೆಯ ವೇಳೆ ಅರಮನೆಯಲ್ಲಿ ನವಗ್ರಹ, ಗಣ ಹೋಮ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights