ಸಕ್ಕರೆನಾಡು ಮಂಡ್ಯದ ಮೇಲುಕೋಟೆಯಲ್ಲಿ ನಡೆಯುತ್ತೆ ತೊಟ್ಟಿಲ ಮಡು ಉತ್ಸವ…

ಅವ್ರೆಲ್ಲ ಮಕ್ಕಳಾಗದ ದಂಪತಿಗಳು.ಮಕ್ಕಳಾಗದ ದಂಪತಿಗಳು ಇಲ್ಲಿ ಈ ದೇವರ ಉತ್ಸವಕ್ಕೆ ಬಂದು ಹರಿಕೆ ಕಟ್ಟಿಕೊಂಡ್ರೆ ಮಕ್ಕಳಾಗುತ್ತೆ ಅನ್ನೋದು ಇಲ್ಲಿನ ನಂಬಿಕೆ. ಅದಕ್ಕಾಗಿಯೇ ದೇವಾಲಯದಲ್ಲಿ ತೊಟ್ಟಿಲಮಡು ಕೂಡ ಉತ್ಸವ ನಡೆಯುತ್ತೆ‌. ಈ ಉತ್ಸವದಲ್ಲಿ ಪಾಲ್ಗೊಂಡು ದಂಪತಿಗಳು ಹರಿಕೆ ಕಟ್ಟಿಕೊಂಡ್ರೆ ಮಕ್ಕಳಾಗುತ್ತದೆ ಅನ್ನೋ ಸಂಪ್ರದಾಯ ಶತಮಾನಗಳಿಂದಲೂ‌ ಆಚರಣೆಯಲ್ಲಿದೆ.  ಅಲ್ದೆ ಇಂದಿಗೂ ಕೂಡ ಈ ಸಂಪ್ರದಾಯದ ಆಚರಣೆ ನಡೆಯುತ್ತಿದ್ದು ಮಕ್ಕಳಾಗದವರು ಬಂದು ಈ ಉತ್ಸವದಲ್ಲಿ ಹರಿಕೆ ಕಟ್ಟಿಕೊಂಡು ಸಂತಾನ ಪಡೆದಿದ್ದಾರೆ‌.ಆಗಿದ್ರೆ ಆ ದೇಗುಲ ಎಲ್ಲಿದೆ ಅಂತೀರಾ. ಅದಕ್ಕುತ್ತರ ಇಲ್ಲಿದೆ ನೋಡಿ.

ಹೌದು! ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಪ್ರತಿವರ್ಷ ಕಾರ್ತಿಕಮಾಸದಲ್ಲಿ ರಾಜಮುಡಿ ಮಹೋತ್ಸವ ನಡೆಯುತ್ತೆ.ಈ ಮಹೋತ್ಸವದ ೧೧ ದಿನ ನಡೆಯಲಿದ್ದು ೫ ನೇ ದಿನ ಅಷ್ಟತೀರ್ಥೋತ್ಸವ ಸೇರಿದಂತೆ ತೊಟ್ಟಿಲಮಡು ಮಡು ಉತ್ಸವ ಇಲ್ಲಿ‌ ಬಹಳ ವಿಜ್ರಂಭೃಣೆಯಿಂದ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ಮಕ್ಕಳಾಗದ ದಂಪತಿಗಳು ಪಾಲ್ಗೊಂಡ್ರೆ ಮಕ್ಕಳಾಗುತ್ತದೆ ಅನ್ನೋ ಪ್ರತೀತಿ ಇದೆ. ಶತಮಾನಗಳಿಂದ ಇಲ್ಲಿ ಈ ಆಚರಣೆ ಇಂದಿಗೂ ನಡೆಯುತ್ತಿದ್ದು,ರಾಜ್ಯವು ಸೇರಿದಂತೆ ವಿವಿದೆಡೆಯಿಂದ ಭಕ್ತರು‌ ಬಂದು ಹರಿಕೆ ಕಟ್ಟಿಕೊಂಡು‌ ಮಕ್ಕಳ ಭಾಗ್ಯ ಪಡೆದಿದ್ದಾರೆ ಅಂತಾರೆ ಇಲ್ಲಿನ ಅರ್ಚಕರು

ಇನ್ನು ಮೇಲುಕೋಟೆಯಲ್ಲಿ ಇಂದು ನಡೆದ ಈ ತೊಟ್ಟಿಲುಮಡು ಉತ್ಸವಕ್ಕೆ ಬೇರೆ ಬೆರೆ ಕಡೆಯಿಂದ ಸಾವಿರಾರು‌ ದಂಪತಿಗಳು ಇಲ್ಲಿಗೆ ಬಂದು ಹರಿಕೆ ಕಟ್ಟಿಕೊಂಡು ಮಡಿಲಲ್ಲಿ ತೆಂಗಿನಕಾಯಿಯ ಫಲ ತುಂಬಿಕೊಂಡು ಉತ್ಸವದಲ್ಲಿ ಬಾಗಿಯಾಗಿ ಪೂಜೆ ಸಲ್ಲಿಸಿದ್ರು. ಅಲ್ದೆ ಬರಿಗಾಲಲ್ಲಿ ಚಲುವನಾರಾಯಣಸ್ವಾಮಿ ತೊಟ್ಟಿಲು ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಅಷ್ಟ ಕಲ್ಯಾಣಿಯಲ್ಲಿ ಮಿಂದು ಅಷ್ಟತೀರ್ಥೋತ್ಸವ ಸ್ನಾನ ಮಾಡಿದ್ರು. ಬಳಿಕ ದೇವರ ಉತ್ಸವದ ಜೊತೆ ಯೋಗನರಸಿಂಹಸ್ವಾಮಿ ಬೆಟ್ಟಹತ್ತಿ ದೇವರಲ್ಲಿ ಸಂತಾನದ ಹರಿಕೆ ಕಟ್ಟಿಕೊಂಡು. ಇನ್ನು ಹರಿಕೆಯಿಂದ ಮಕ್ಕಳಾದವರು ಕೂಡ ಬಂದುಈ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಿಕೆ ತೀರಿಸಿದ್ರು.

ಒಟ್ಟಾರೆ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ನಡೆಯುವ ಈ ತೊಟ್ಟಿಲಮಡು ಉತ್ಸವ ಸಾಕಷ್ಟು ಪ್ರಸಿದ್ದಿಯಾಗಿದೆ.ಬಹುತೇಕ ಮಕ್ಕಳಾಗದವರು ಈ ಉತ್ಸವದಲ್ಲಿ ಬಂದು ಪಾಲ್ಗೊಂಡು ಹರಿಕೆ ಮೂಲಕ ಸಂತಾನ ಭಾಗ್ಯ ಪಡೆದ ಸಾಕಷ್ಟು ಉದಾಹರಣೆ ಭಕ್ತರಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights