ಶ್ರೀರಂಗಪಟ್ಟಣ ದಸರಾ ಆಚರಣೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ : ಆರೋಪ ತಳ್ಳಿಹಾಕಿದ ಜಿಲ್ಲಾಡಳಿತ

ಮೂಲ ದಸೆರೆಯ ನೆಲ ಶ್ರೀರಂಗಪಟ್ಟಣದಲ್ಲಿ ಈ ಬಾರಿ ಅದ್ದೂರಿ ದಸರಗೆ ಸಿದ್ದತೆ ನಡೀತಾ ಇದೆ. ಈ ಬಾರಿ ಶ್ರೀರಂಗಪಟ್ಟಣದಲ್ಲಿ ಜಂಬೂ ಸವಾರಿ ಸೇರಿದಂತೆ ಮೂರು ದಿನದ ದಸರೆ ಕಾರ್ಯಕ್ರಮಗಳಿಗಾಗಿ ಸರ್ಕಾರದಿಂದ ೨ ಕೋಟಿ‌ ಅನುದಾನ ಸಿಕ್ಕಿದ್ದು, ಒಂದೆಡೆ ಅದ್ದೂರಿ ದಸರಾ ಆಚರಣೆಗಾಗಿ ಶ್ರೀರಂಗಪಟ್ಟಣದಲ್ಲಿ ಸಂಭ್ರಮದ ದಸರೆಗಾಗಿ ಸಜ್ಜಾಗ್ತಿದ್ರೆ, ಮತ್ತೊಂದು ಕಡೆ ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯ ಮಾಡಲಾಗ್ತಿದೆ ಎಂದು ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಮುನಿಸಿಕೊಂಡಿದ್ದಾರೆ.

ಹೌದು ! ಮೈಸೂರು ದಸರೆಯ ಮೂಲವಾದ ಶ್ರೀರಂಗಪಟ್ಟಣದಲ್ಲಿ ಈ ಬಾರೀ ಅದ್ದೂರಿ‌ ದಸರಾ ಆಚರಣೆ ನಡೆಯಲಿದೆ. ಮೂಲ‌ ದಸೆರೆಯ ನೆಲವಾದ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗಾಗಿ ಸರ್ಕಾರ ಈ ಬಾರೀ ೨ ಕೋಟಿ ಅನುದಾನ‌ ನೀಡಿದ್ದು,೩ ದಿನಗಳ ಶ್ರೀರಂಗಪಟ್ಟಣದಲ್ಲಿ ಅದ್ದೂರಿ‌ ದಸರಾ ಸಂಭ್ರಮ ನಡೆಯಲಿದೆ. ಅ-೦೩ ನೇ ತಾರೀಖಿನಿಂದ ಅ-೦೫ ರ ವರೆಗೆ ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ ನಡೆಯಲಿದ್ದು, ಈಗಾಗಲೇ ಜಿಲ್ಲಾಡಳಿತದಿಂದ ಶ್ರೀರಂಗಪಟ್ಟಣದಲ್ಲಿ ದಸರೆ ಆಚರಣೆಗಾಗಿ ಭರದ ಸಿದ್ದತೆ ಕಾರ್ಯ ನಡೆಯುತ್ತಿದೆ. ಶ್ರೀರಂಗಪಟ್ಟಣ ಕಿರಂಗೂರು ಬಳಿಯ ಬನ್ನಿ ಮಂಟಪ್ಪದ ಬಳಿ ಶ್ರೀರಂಗಪಟ್ಟಣ ದಸರಾಗೆ ಚಾಲನೆ ಸಿಗಲಿದ್ದು,ಅಲ್ಲಿರೋ ಬನ್ನಿ ಮಂಟಪ್ಪಕ್ಕೆ ಸುಣ್ಣ ಬಣ್ಣದ ಅಲಂಕಾರ‌ ಮಾಡಲಾಗಿದ್ರೆ, ದಸರಾ ಅಂಬಾರಿ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಬಣ್ಣದ ದೀಪಾಂಲಕಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದ ಆವರಣದ ಮೈದಾನದಲ್ಲಿ ಮೂರು‌ ದಿನಗಳವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು,ಇದಕ್ಕಾಗಿ ಬೃಹತ್ ವೇದಿಕೆ ಸಿದ್ದಪಡಿಸಲಾಗ್ತಿದೆ. ಈ ವೇದಿಕೆಯಲ್ಲಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿ‌ ಮತ್ತು‌ ಮನೋರಂಜನೆ ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ನಡೆಯಲಿವೆ.

ಇನ್ನು ಅತ್ತ ಸಂಭ್ರಮದ ಶ್ರೀರಂಗಪಟ್ಟಣ ದಸರಾ ಆಚರಣೆ ಮಂಡ್ಯ ಜಿಲ್ಲಾಡಳಿತ ಮತ್ತು ಸ್ಥಳೀಯ ಶ್ರೀರಂಗಪಟ್ಟಣದ ತಾಲೂಕು ಆಡಳಿತ ಭರದ ಸಿದ್ದತೆ ಮಾಡಿಕೊಳ್ತಿದ್ರೆ, ಇತ್ತ ಸ್ಥಳೀಯ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಲ ರವೀಂದ್ರ ಶ್ರೀಕಂಠಯ್ಯ ಮಾತ್ರ ಸ್ಥಳೀಯ ಜನಪ್ರತಿನಿಧಿಗಳನ್ನು ದಸರಾ ಕಾರ್ಯಕ್ರದಲ್ಲಿ ನಿರ್ಲಕ್ಷ್ಯ ಮಾಡಲಾಗ್ತಿದೆ ಅಂತಾ ಗಂಭೀರ ಆರೋಪ ಮಾಡಿದ್ದು,  ಈ ಸಂಬಂಧ ಇಂದು ಶ್ರೀರಂಗಪಟ್ಟಣದಲ್ಲಿ ಸುದ್ದಿಗೋಷ್ಟಿ ಕರೆದು ಶ್ರೀರಂಗಪಟ್ಟಣ ದಸರೆ ಕೇವಲ ಅತಿಥಿಗಳ ಕಾರ್ಯಕ್ರಮವಾಗ್ತಿದೆ ಅಂತಾ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಆದ್ರೆ ಸ್ಥಳೀಯ ಶಾಸಕರ ಈ ಆರೋಪವನ್ನು ಜಿಲ್ಲಾಡಳಿತ ಮಾತ್ರ ತಳ್ಳಿ‌ ಹಾಕಿದ್ದು‌,ಆ ರೀತಿಯಾಗಿ ಯಾವ ನಿರ್ಲಕ್ಷ್ತವು ಮಾಡಿಲ್ಲ. ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ‌ದ್ದು, ಅವರ ಒಪ್ಪಿಗೆ ಪಡೆದು ಅವರು ಸೂಚಿಸಿದ ವ್ಯಕ್ತಿಯನ್ನೆ ದಸರಾಗೆ ಆಹ್ವಾನಿಸಲಾಗಿದೆ. ಸಣ್ಣಪುಟ್ಟ ವ್ಯತ್ಯಾಸ ಆಗಿರಬಹುದು ಸರಿ ಪಡಿಸಿಕೊಂಡು ಒಟ್ಟಾಗಿ ಎಲ್ರೂ ನಾಡ ಹಬ್ಬ ದಸರಾ ಆಚರಿಸ್ತಿವಿ‌ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಈ ಬಾರಿ ಮೂಲ‌ ದಸರೆಯ ನೆಲವಾದ ಶ್ರೀರಂಗಪಟ್ಟಣದಲ್ಲಿ ಅದ್ದೂರಿ ದಸರಾ ನಡೆಯಲಿದ್ದು, ಸಂಭ್ರಮದ ದಸರಾ ಆಚರಣೆಗೆ ಜಿಲ್ಲಾಡಳಿತ ಮತ್ತು‌ ಜಿಲ್ಲೆ ಜ‌ನಪ್ರತಿನಿಧಿಗಳು ಕೈ ಜೋಡಿಸಿ ಯಶಸ್ವಿಗೊಳಿಸಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights