‘ಶಾಶ್ವತ ಪರಿಹಾರ ನೀಡದೆ ಗಂಜಿ ಕೇಂದ್ರದಿಂದ ಹೊರಹೋಗುವುದಿಲ್ಲ’ ನೆರೆ ಸಂತ್ರಸ್ತರ ಪಟ್ಟು

ಶಾಶ್ವತ ಪರಿಹಾರ ನೀಡದೆ ಗಂಜಿ ಕೇಂದ್ರದಿಂದ ಹೊರಹೋಗುವುದಿಲ್ಲ ಎಂಬ ನೆರೆ ಸಂತ್ರಸ್ತರ ಪಟ್ಟು ಹಿಡಿದಿದ್ದಾರೆ.

ಹೌದು… ರಾಯಚೂರಿನ ಲಿಂಗಸಗೂರು ತಾಲೂಕಿನ ಮ್ಯಾದರಗಡ್ಡೆ, ಕರಕಲಗಡ್ಡೆ ಹಾಗು ಒಂಕಾರಮ್ಮನಗಡ್ಡೆ ಸಂತ್ರಸ್ತರು ಪ್ರವಾಹಕ್ಕೆ ಅಕ್ಷರಶ: ನಲುಗಿ ಹೋಗಿದ್ದಾರೆ. ಆಗಾಗ ಕೃಷ್ಣಾ ನದಿ ಪ್ರವಾಹ ಬಂದಾಗ ನಮ್ಮನ್ನು ನಡುಗಡ್ಡೆಯಿಂದ ಹೊರ ತಂದು ನಂತರ ನಮ್ಮನ್ನು ಮರೆತು ಬಿಡುತ್ತಾರೆ. ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಗಂಜಿ ಕೇಂದ್ರದಿಂದ ತಮ್ಮ ಗಡ್ಡೆಗಳಿಗೆ ಹೋಗಲು ನಿರಾಶ್ರಿತರು ನಿರಾಕರಿಸಿದ್ದಾರೆ.

ಯರಗೋಡಿಯಲ್ಲಿ ಗಡ್ಡೆಯಲ್ಲಿದ್ದರಿಗೆ ಶಾಶ್ವತ ಪರಿಹಾರಕ್ಕೆ ಸರಕಾರಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ.  ಸುಮಾರು ೬೫ ಎಕರೆ ಭೂಮಿ ಸ್ವಾದೀನ ಪಡಿಸಿಕೊಂಡು ಅವರಿಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದು ಲಿಂಗಸಗೂರು ತಹಸೀಲ್ದಾರ ಚಾಮರಾಜ ಪಾಟೀಲ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights