ರಾಜ್ಯ ನೆರೆ ಬಗ್ಗೆ ನಮೋ ಮೌನ : ‘ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ’ ಪ್ರತಾಪ್‌ಸಿಂಹ

ಕರ್ನಾಟಕಕ್ಕೆ ಕೇಂದ್ರದಿಂದ ನೆರೆ ಬಗ್ಗೆ ಮೋದಿ ಮೌನ ವಿಚಾರಕ್ಕೆ ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ,  ಯಾರು ಕಿಸೆಯಿಂದ ಪರಿಹಾರ‌ ಕೊಡೋಕೆ‌ ಆಗೋಲ್ಲ ಎಂದು ವಿವಾದ ಸೃಷ್ಟಿಸಿದ್ದಾರೆ.

ಯಾವ ರಾಜ್ಯಕ್ಕು ಕೇಂದ್ರ ಕೊಡೋದು ಪರಿಹಾರ ಅಲ್ಲ ಅದು ಸಹಾಯಧನ‌. ಆಗಿರುವ ಸಮಸ್ಯೆ ಸರಿಪಡಿಸಿಕೊಳ್ಳಲು NDRF ಹಾಗೂ SDRFನಿಂದ ಕೊಡುವ ಸಹಾಯ ಧನವಾಗಿದೆ. 11 ರಾಜ್ಯದಲ್ಲಿ ಪ್ರವಾಹ ಬಂದಿದೆ. ಎಲ್ಲರಿಗೂ ಪರಿಹಾರ ಬಿಡುಗಡೆಯಾಗಿಲ್ಲ. ಮೊದಲು ಬರ ಬಂದಿತ್ತು ಅದಕ್ಕೆ ಕೇಂದ್ರದ ತಂಡ ಆಗಮಿಸಿ ಪರಿಶೀಲನೆ ನಡೆಸಿ ಈಗ ಹಣ ನೀಡಿದೆ.

ಈಗ ನೆರೆ ಬಂದಿದೆ ಅಮೀತ್ ಷಾ ಬಂದಿದ್ದಾರೆ ಈಗಲೂ ಹಣ ಕೊಡುತ್ತಾರೆ. ಸುಮ್ಮನೆ ಮೋದಿ ಬಗ್ಗೆ ಮಾತನಾಡೋದರಿಂದ ಪ್ರಯೋಜನ ಇಲ್ಲ. ರಾಜ್ಯದಲ್ಲಿ ಆಗಿರುವ ಸಮಸ್ಯೆಗಳಿಗೆ ನಾವು ಸ್ಪಂದಿಸಿಲ್ಲ ಎಂದಾದರೆ ನೀವು ನಮ್ಮನ್ನ ಪ್ರಶ್ನಿಸಿ. ಅದನ್ನ ಬಿಟ್ಟು ಮಾಹಿತಿ ಇಲ್ಲದೆ ಮಾತನಾಡಬಾರದು.

ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ.ಆಕಾಶಕ್ಕೆ ಉಗುಳಿದ್ರೆ ಅದು ಅವರ ಮೇಲೆಯೇ ಬಿಳುತ್ತೆ. ಮೋದಿ ಟೀಕಾಕಾರರಿಗೆ ಪ್ರತಾಪ್‌ಸಿಂಹ ತಿರುಗೇಟು. ಮೊದಲು ರಾಜ್ಯದ ಸಂಸದ ಬಗ್ಗೆ ಮಾತನಾಡುತ್ತಿದ್ದರು. ಈಗ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ.

ಇದರಿಂದ ಯಾವುದೇ ಪ್ರಯೋಜನ ಇಲ್ಲ. 17 ಸಂಸದರು ಕಳೆದ ಬಾರಿ ಇದ್ದರು. ಕಾವೇರಿ,ಮಹಾದಾಯಿ ವಿಚಾರದಲ್ಲಿ ಏನ್ ಮಾಡಿದ್ರು ಇವರುಗೆ ಮಾತನಾಡಲು ಧೈರ್ಯ ಇಲ್ಲವಾ ಅಂದ್ರು. ಈ ಬಾರಿ 17 ಜೊತೆಗೆ ಇನ್ನು 8 ಮಂದಿ ಹೆಚ್ಚಾಗಿ ಬಿಜೆಪಿ ಸಂಸದರನ್ನ ಆಯ್ಕೆ‌ ಮಾಡಿದ್ದಾರೆ. ಅದರ ಅರ್ಥ ಬಿಜೆಪಿ ಸಂಸದರು ಕೆಲಸ ಮಾಡಿದ್ದಾರೆ ಅಂತಾನೇ ಅರ್ಥ. ಮೋದಿ ಟ್ವಿಟ್ ಮಾಡಲಿಲ್ಲ ಅಂತಾರೆ. ಆದ್ರೆ ಮೋದಿ ಅಮೀತ್ ಷಾರನ್ನೆ ಕಳುಹಿಸಿದ್ದು ನಿಮಗೆ ಕಾಣೋಲ್ಲವೇ. ಮೋದಿ ಬಗ್ಗೆ ಮಾತನಾಡೋಕೆ ಸಂಸದರಿಗೆ ಧೈರ್ಯ ಇಲ್ಲವಾ ಅಂತಾರೆ. ಕೆಲಸ ಮಾಡೋಕೆ ಧೈರ್ಯ ಯಾಕೇ ಬೇಕು. ಪದಬಳಕೆ, ಶಬ್ದ ಬಳಕೆ ಮಾಡಿ ಟೀಕಿಸೋದ್ರಿಂದ ಯಾವುದೇ ಪ್ರಯೋಜನೆ ಇಲ್ಲ‌ ಎಂದು ‌ಸಂಸದ ಪ್ರತಾಪ್‌ಸಿಂಹ ಗುಡುಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights