ರಂಗೇರಿದ ಮನ್ಮುಲ್ ರಾಜಕೀಯ : ಬಿಜೆಪಿ ರಣತಂತ್ರಕ್ಕೆ ಜೆಡಿಎಸ್ ಕಂಗಾಲು, ಪ್ರತಿಭಟನೆ ಎಚ್ಚರಿಕೆ

ಸಕ್ಕರೆನಾಡು ಮಂಡ್ಯದಲ್ಲಿ ಮನ್ಮುಲ್ ನ ಅಧಿಕಾರಕ್ಕೆ ಜೆಡಿಎಸ್ ಮತ್ತು ಬಿಜೆಪಿ ಜಿದ್ದಾಜಿದ್ದಿನ ಪೈಪೋಟಿಗಳಿದಿದೆ. ಕೇವಲ ೧ ಸ್ಥಾನ ಗಳಿಸಿದ್ರು ಅಧಿಕಾರ ಹಿಡಿಯಲು ಬಿಜೆಪಿ ಹಣಸುತ್ತಿದೆ. ಸುಮಲತಾ ಬೆಂಬಲಿಗರಾದ ಮೂವರು ಕಾಂಗ್ರೆಸ್ ನ ಸದಸ್ಯರ ಜೊತೆ ಕೈಜೋಡಿಸಿದ್ದು ,ಓರ್ವ ಜೆಡಿಎಸ್ ಸದಸ್ಯನ್ನು ತೆಕ್ಕೆಗೆ ತೆಗೆದುಕೊಂಡಿದೆ. ಅಲ್ದೆ ಅಧ್ಯಕ್ಷ ಸ್ಥಾನಕ್ಕೆ‌ ಬೇಕಾದ ೯ ಸದಸ್ಯ ಬಲದ ಮ್ಯಾಜಿಕ್ ನಂ ದಾಟಲು ಬೇಕಾದ ರಣತಂತ್ರ ಎಣೆದಿದ್ದು, ಶತಾಯಗತ ಅಧಿಕಾರದ ಗದ್ದುಗೆ ಏರಲು ಪ್ರಯತ್ನ‌ ನಡೆಸ್ತಿದೆ.

ಹೌದು ! ಸಕ್ಕರೆನಾಡು ಮಂಡ್ಯದಲ್ಲಿ ಮನ್ಮುಲ್ ನ ಅಧಿಕಾರಕ್ಕಾಗಿ ಬಿಜೆಪಿ ಮತ್ತು‌ ಜೆಡಿಎಸ್ ಪೈಪೋಟಿಗಿಳಿದಿವೆ.
ಸೆ-೦೮ ರಂದು ನಡೆದ ಮಂಡ್ಯದ ಮನ್ಮುಲ್ ‌ನ ೧೨ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ೮ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು, ೩ ಕಾಂಗ್ರೆಸ್ ಬೆಂಬಲಿತ ಹಾಗೂ ೧, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ರು. ೧೨ ನಿರ್ದೇಶಕರ ಜೊತೆ ೪ ಅಧಿಕ ಮತಗಳಿದ್ದು ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ೧೬ ಮತಗಳು ಚಲಾವಣೆಯಾಗಲಿವೆ. ೧ ಸ್ಥಾನ ಗೆದಿದ್ರು ಬಿಜೆಪಿ ತನ್ನ ತಂತ್ರಗಾರಿಕೆಯ ಮೂಲಕ ಮನ್ಮುಲ್ ಅಧಿಕಾರ ಹಿಡಿಯಲು ಶತಾಯಗತ ಪ್ರಯತ್ನಕ್ಕೆ ಮುಂದಾಗಿದೆ.ಸುಮಲತಾ ಬೆಂಬಲಿಗರಾದ ಕಾಂಗ್ರೇಸ್ ಬೆಂಬಲಿತ ೩ ನಿರ್ದೇಶಕರು, ೧ ಬಿಜೆಪಿ ನಿರ್ದೇಶಕಿ, ಸೇರಿದಂತೆ
೪ ಹೆಚ್ಚುವರಿ ಮತಗಳಿವೆ.ಈಗಾಗಲೇ ೧ ನಾಮಿನಿಯನ್ನು ಬಿಜೆಪಿ ಸರ್ಕಾರ ನೇಮಿಸಿದ್ದು, ೧ ಎಆರ್,೧ ಡಿ.ಆರ್. ಮತ್ತು ೧ kmf ನಿರ್ದೇಶಕರ ಮತಗಳು ಸೇರಿಲಿವೆ.. ಇದ್ರಿಂದ ೮-೮ ಸಮಬಲ ಸಾಧಿಸಿದೆ. ಜೊತೆಗೆ ಜೆಡಿಎಸ್ ಬೆಂಬಲಿತ ಓರ್ವ ಅಭ್ಯರ್ಥಿ ಎಸ್ಪಿ ಸ್ವಾಮಿಯನ್ನು ಬಿಜೆಪಿ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿ ಯಾಗಿದ.

ಇನ್ನು ಇದರ ಜೊತೆಗೆ ಜೆಡಿಎಸ್ ಇಬ್ಬರು ನಿರ್ದೇಶಕರಾಗಿರೋ ಎಚ್.ಟಿ.‌ಮಂಜು, ಮತ್ತು ನೆಲ್ಲಿಗೆರೆ ಬಾಲು ಅಕ್ರಮವಾಗಿ ಸಹಕಾರಿ ಸಂಘದ ಬೈಲಾ ಉಲ್ಲಂಘನೆ ಆರೋಪದಲ್ಲಿ ಸಹಕಾರ ಸಂಘದ ನಿಬಂಧಕರಿದಿಂದ ಇಬ್ಬರಿಗೆ ನೋಟೀಸ್ ಕೊಡಿಸಿ ಮಾಸ್ಟರ್ ಸ್ಟ್ರೋಕ್ ನೀಡಿದೆ‌.‌
ಈ ಇಬ್ಬರು ಜೆಡಿಎಸ್ ಬೆಂಬಲಿತ ಪ್ರಬಲ ನಾಯಕರಾಗಿದ್ದು,ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ರು. ಆದ್ರೀಗ ಈ ಇಬ್ಬರು ನೋಟೀಸ್ ನೀಡಿರೋದು ಜೆಡಿಎಸ್ ನಾಯಕ ಪುಟ್ರಾಜಗೆ ಆಕ್ರೋಶ ತರಿಸಿದೆ. ಇದನ್ನು ಖಂಡಿಸಿ ಡಿ.ಆರ್.ಕಚೇರಿಗೆ ಮುತ್ತಿಗೆ ಹಾಕಿ ಪುಟ್ರಾಜು ಅಸಮಧಾನ ವ್ಯಕ್ತಪಡಿಸಿ ಕುತಂತ್ರದಿಂದ ಅಧಿಕಾರ‌ ಹಿಡಿಯಲು ಪ್ರಯತ್ನಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ‌ ನೀಡಿದ್ರೆ, ಇಂದು ಸಹಕಾರ ಸಂಘದ ನೋಟಿಸ್ ನ ವಿಚಾರಣೆಗೆ ನಿರ್ದೇಶಕ ನೆಲ್ಲಿಗೆರೆ ಬಾಲು ಹಾಜರಾಗಿದ್ರು .ವಿಚಾರಣೆಯಲ್ಲಿ ಆದೇಶವನ್ನು ಸೆ-೨೩ ಕ್ಕೆ ಮುಂದೂಡಿದ್ರಿಂದ ಹತಾಶಗೊಂಡು ನ ಸಹಕಾರ ಸಂಘದ ನಿಬಂಧಕರಿಂದ ವಿರುದ್ದ ತಿರುಗಿ ಬಿದ್ದರಲ್ಲದೆ,ತಮ್ಮನ್ನು ರಾಜಕೀಯವಾಗಿ ಮುಗಿಸಲು ಹೊರಟ ಚಲುವರಾಯಸ್ವಾಮಿ ಮತ್ತು ಅನರ್ಹ ಶಾಸಕ ಕಾರಣ ಅಂತಾ ಏಕ ವಚನದಲ್ಲೆ ವಾಗ್ದಾಳಿದ್ರು.ಅಲ್ದೆ ಹೈಕೋರ್ಟ್ ನಿಂದ ನಿಬಂಧಕರ ‌ ಆದೇಶಕ್ಕೆ ತಡಯಾಜ್ಞೆ ತಂದು ಸೆ-೨೩ ರ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ರು.

ಇನ್ನು ಇತ್ತ ಮಂಡ್ಯ ಮನ್ಮುಲ್ ಅಧಿಕಾರ‌ ಹಿಡಿಯಲು ಈಗಾಗಲೇ ಬಿಜೆಪಿ ಮಾಸ್ಟರ್ ಫ್ಲ್ಯಾನ್ ಮಾಡಿ ಅದರ ಜವಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಿ.ಸಿ.ಎಂ. ಡಾ ಅಶ್ವಥ್ ನಾರಾಯಣ್ ಗೆ ವಸಿಸಲಾಗಿದೆ.‌ಈಗಾಗಲೇ ಓರ್ವ ಜೆಡಿಎಸ್ ನಿರ್ದೇಶಕ ಎಸ್ಪಿ‌ ಸ್ವಾಮಿ ಬಿಜೆಪಿ ಜೊತೆ ಗುರ್ತಿಸಿಜೊಂಡಿದ್ದಾರೆ. ಅಲ್ದೆ ಸುಮಲತಾ ಬೆಂಬಲಿಗರಾದ ೩ಕಾಂಗ್ರೆಸ್ ನಿರ್ದೇಶಕರು ಜಿಲ್ಲೆಯ‌ ಜೆಲ್ಲೆಯ ರೆಬಲ್ ಕೈ‌ನಾಯಕರ ಮೂಲಕ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಇದ್ರಿಂದ ಬಹಳ ಜೆಜೆಪಿ ಅಧಿಕಾರ ಹಾದಿ ಸುಗಮವಾಗಲಿದ್ದು ಜಿಲ್ಲೆಯ ಮನ್ಮುಲ್ ಆಡಳಿತವನ್ನು ಹಿಡಿಯುವ ವಿಶ್ವಾಸದಲ್ಲಿದೆ. ಇಜ ಸಂಬಂಧ ಮಾತನಾಡಿರೋ ಉಪ ಮುಖಮಂತ್ರಿ ಡಾ ಅಶ್ವಥ್ ನಾರಾಯಣ್ ಎಲ್ಲ ಪಕ್ಷದವರು ನಮ್ಮ ಜೊತೆ ಇದ್ದಾರೆ ಮನ್ಮುಲ್ ಅಧಿಕಾರ ಹಿಎಇಯುತ್ತೇವೆ. ಒಂದ್ವೇಳೆ ಯಾರೇ ಅಧ್ಯಕ್ಷರಾಗಿ ಅಧಿಕಾರ‌ ಹಿಡಿದ್ರು ಅದು ಬಿಜೆಪಿ ಬ್ಯಾನರ್ ನಡಿ ಅಂದಿಂದ್ದು. ಸೆ-೨೩ ರವರೆಗೆ ಕಾದು ನೋಡಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಸೆ-೨೩ ರಂದು ಮಂಡ್ಯದಲ್ಲಿ‌ ನಡೆಯಲಿರುವ ಮಂಡ್ಯ ಮನ್ಮುಲ್ ನ ಅಧ್ಯಕ್ಷ ಸ್ಥಾನದ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ರಾಜಕೀಯ ಮೇಲಾಟ ಹಾಗು ತಂತ್ರಗಾರಿಕೆ ಮೂಲಕ ಗಮನ ಸೆಳೆಯುತ್ತಿರುವ ಮನ್ಮುಲ್ ನ ಅಧ್ಯಕ್ಷ ಸ್ಥಾನ ಯಾರ ಪಾಲಾಗುತ್ತದೆ ಅನ್ನೋದ್ನ ಕಾದು ನೋಡಬೇಕಿದೆ.‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights