ಮೈಸೂರು ದಸರಾಕ್ಕೆ ಕಳೆ ತಂದ ಸಚಿವ ಮತ್ತ ಸಂಸದರು : ಪಗಡೆ ಆಟ ಹಾಡಿದ ಪ್ರತಾಪ್‌ ಸಿಂಹ ಹಾಗೂ ಸೋಮಣ್ಣ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ  ಮಹಾಭಾರತದ ಸನ್ನಿವೇಶವನ್ನು ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಸೃಷ್ಟಿ ಮಾಡಿದ್ದಾರೆ.

ಹೌದು.. ಮೈಸೂರು ವಸ್ತು ಪ್ರದರ್ಶನ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎದುರು ಬದರು ಕೂತು ಪಗಡೆ ಆಟ ಹಾಡಿದ ಸಂಸದ ಪ್ರತಾಪ್‌ ಸಿಂಹ ಹಾಗೂ ಸಚಿವ ಸೋಮಣ್ಣ. ಪಗೆಡೆ ಆಟ, ಅಳಿಗುಳಿ ಮನೆ ಪಾರಂಪರಿಕ ಆಟಗಳ ಸ್ಪರ್ಧೆಗೆ ಚಾಲನೆ ಕೊಟ್ಟ ಉಸ್ತುವಾರಿ ಸಚಿವ ವಿ.ಸೋಮಣ್ಣ, ಪ್ರತಾಪ್ ಸಿಂಹ ಜೊತೆ ಪಗಡೆ ಆಟ ಆಡಿದ್ದಾರೆ. ಈ ವೇಳೆ ಸಚಿವರಿಗೆ ಸಂಸದ ಪ್ರತಾಪ್ ಸಿಂಹ ಸಾಥ್ ಕೊಟ್ಟಿದ್ದಾರೆ. ಅಳಿಗುಳಿ ಮನೆ ಆಟದಲ್ಲಿ ವಿ.ಸೋಮಣ್ಣ 14 ಕಾಯಿ ಗೆದ್ದರು.

ಹತ್ತು ವರ್ಷದಿಂದ 25 ವರ್ಷದ ವಯೋಮಾನದವರಿಗಾಗಿ ನಡೆದ ವಿವಿಧ ಪಾರಂಪರಿಕ ಆಟಗಳಲ್ಲಿ ಸಚಿವ ಹಾಗೂ ಸಂಸದರ ಇಬ್ಬರು ಆಟ ಆಡಿ ಸಂಭ್ರಮಿಸಿದ್ದಾರೆ. 16 ವರ್ಷದ ಒಳಗಿನವರಿಗಾಗಿ ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ, ಹಾವುಹೆಣಿ, ಗೋಲಿ, ಚೌಕಾಬಾರ,ಹಾಗೂ ಮೂರು ಕಾಲಿನ ಓಟ ಆಟಗಳು ಮತ್ತು 17 ವರ್ಷದಿಂದ 25 ವಯೋಮಾನದವರಿಗಾಗಿ ಅಳಿಗುಳಿಮನೆ,ಹಗ್ಗಜಗ್ಗಾಟ,ಹಾವುಹೆಣಿ,ಗೋಲಿ,ಚಿನ್ನಿದಾಂಡು,ಬುಗುರಿ,ಗೋಣಿಚೀಲದ ಓಟ,ಹುಲಿಕುರಿ ಆಟ ಜೊತೆಗೆ 25 ವರ್ಷ ಮೇಲ್ಪಟ್ಟವರಿಗಾಗಿ ಪಗಡೆ,ಹಗ್ಗಜಗ್ಗಾಟ, ಅಳಿಗುಳಿಮನೆ, ಬಿಲ್ಲುಬಾಣ,ಚೌಕಾಬಾರ  ಪಾರಂಪರಿಕ ಆಟ ಆಡಲು ಬಹಳ ಆಸಕ್ತಿಯಿಂದ ಯುವ ಸಮೂಹ ಪಾಲ್ಗೊಂಡಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights