ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆ : ಜಿಲ್ಲೆಗಳಲ್ಲಿ ಹೆಲ್ಮೆಟ್ ಮತ್ತು ಸ್ಚಚ್ಚತೆ ಬಗ್ಗೆ ಅರಿವು

ಇಂದು  ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಹೆಲ್ಮೆಟ್ ಕಡ್ಡಾಯ ಧರಿಸುವ ಅರಿವು ಕಾರ್ಯಕ್ರಮ ನಡೆಸಲಾಯಿತು.

ಹೆಲ್ಮೆಟ್ ಇಲ್ಲದ ವಾಹನ ಸವಾರರಿಗೆ ೧೦೦೦ ದಂಡ ಹಾಗು ಹೆಲ್ಮೆಟ್ ನೀಡಿದ ಪೊಲೀಸರು ಗಾಂಧಿಗಿರಿ ಪ್ರದರ್ಶಿಸಿದರು.  ಎಸ್ಪಿ ಡಾ ಸಿ ಬು ವೇದಮೂರ್ತಿ ನೇತ್ರತ್ವದಲ್ಲಿ ಹೆಲ್ಮೆಟ್ ನೀಡುವ ಕಾರ್ಯಕ್ರಮ ನೆರವೇರಿತು.

ಇನ್ನೂ ಬಾಗಲಕೋಟೆಯ ಇಲಕಲ್ ಪಟ್ಟಣದಲ್ಲಿ ಮಹಾಂತ ಶ್ರೀಗಳ ನೇತೃತ್ವದಲ್ಲಿ ಸ್ಚಚ್ಚತಾ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಗಾಂಧಿ ವೃತ್ತ ಸೇರಿದಂತೆ ಹಲವೆಡೆ ಇಲಕಲ್ ಮಹಾಂತ್ ಶ್ರೀ, ನಗರಸಭೆ ಸಿಬ್ಬಂದಿ ಮತ್ತು ಸಾವ೯ಜನಿಕರು ಕಸಗೂಡಿಸಿ ಪ್ರೇರಣೆಯಾದರು.

ರಾಷ್ಟ್ರಿಪಿತಾ ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ ಮಂಡ್ಯದಲ್ಲಿ ಶ್ರೀರಂಗಪಟ್ಟಣದಲ್ಲಿ ಗಾಂಧಿ ಸ್ಮಾರಕದ ಬಳಿ ಸ್ವಚ್ಚತಾ ಶಿಬಿರದ ಮೂಲಕ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಕಾವೇರಿ ನದಿ ದಂಡೆಯ ಮೇಲಿರುವ ಗಾಂಧಿ ಸ್ವಾರಕ ಬಳಿ ಶ್ರೀರಂಗಪಟ್ಟಣ ಪುರಸಭೆ ಸಿಬ್ಬಂದಿಗಳಿಂದ ಸ್ವಚ್ಛತಾ ಶ್ರಮದಾನದ ಮೂಲಕ ಅರ್ಥಪೂರ್ಣ ಆಚರಣೆ ಮಾಡಲಾಯಿತು.

 

ಗಾಂಧೀಜಿ ಚಿತಾಭಸ್ಮವನ್ನು ಇಲ್ಲಿ ವಿಸರ್ಜನೆ ಬಳಿಕ ನೆನಪಿಗಾಗಿ ನಿರ್ಮಿಸಿರುವ ಗಾಂಧಿ ಸ್ಮಾರಕ ಸ್ಚಚ್ಛತಾ ಶ್ರಮದಾನದ ಬಳಿಕ ಸಿಬ್ಬಂದಿಗಳು ಗಾಂಧಿ ಸ್ಮಾರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸರ್ವಜ್ಞಶಾಲೆಯ ವಿದ್ಯಾರ್ಥಿಗಳು ಪುರಸಭೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights