ಮಲಗಲು ಹೋದವರಿಗೆ ಬೆಡ್ ಮೇಲೆ ಕಾಣಿಸಿದ್ದು ಹೆಬ್ಬಾವು….

ಕೆಲವರಿಗೆ ಹಲ್ಲಿಗಳು ಗೋಡೆಯಿಂದ‌ ಬಿದ್ದರೆ ಅಥವಾ ಓಡಾಡಿದರೆ ಗಾಬರಿಯಾಗುತ್ತದೆ. ಇನ್ನು ಹೆಬ್ಬಾವೊಂದು ಮನೆಯ ಮೇಲಿಂದ‌ ಬೆಡ್ ಮೇಲೆ ಬಿದ್ದರೆ ಹೇಗಾಗಬೇಡ?

ಹೌದು, ಇದು‌ ಕಲ್ಪನೆಯಲ್ಲ. ಆಸ್ಟ್ರೇಲಿಯಾದಲ್ಲಿ ನಡೆದಿರುವ ಸತ್ಯ ಘಟನೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌‌ನಲ್ಲಿ ಈ ಘಟನೆ ನಡೆದಿದ್ದು, ಮನೆಯೊಂದರ ಬೆಡ್ ಮೇಲೆ ಈ‌ ಬೃಹತ್ ಹೆಬ್ಬಾವು ಬಿದ್ದಿದೆ‌. ಅದೃಷ್ಟವಶಾತ್ ಈ ವೇಳೆ ಬೆಡ್ ಮೇಲೆ‌ ಯಾರೊಬ್ಬರು ಇರಲಿಲ್ಲವೆಂದು ವರದಿಯಾಗಿದೆ.

ಕ್ವೀನ್ಸ್‌ಲ್ಯಾಂಡ್‌ ಸನ್‌ಶೈನ್ ಹಾವು ರಕ್ಷಕರ‌ ತಂಡ ಈ ಬಗ್ಗೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದು, ಛಾವಣಿಯಲ್ಲಿ‌ ಬೆಳಕು ಬರಲೆಂದು ಹಾಕಿರುವ ಗಾಜಿನ ಮೇಲೆ ಈ ಹೆಬ್ಬಾವು ಕುಳಿತಿದೆ. ಹಾವಿನ ಭಾರ ತಾಳಲಾರದೇ ಗಾಜು ಒಡೆದಿರುವುದರಿಂದ ಹಾವು ಬೆಡ್ ಮೇಲೆ ಬಿದ್ದಿದೆ. ಈ ಫೋಟೋಗಳನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಈ ಫೋಟೋಗಳನ್ನು ನೋಡಿ ಅನೇಕರು ಗಾಬರಿಯಾಗಿದ್ದು,‌ಇನ್ನು ಕೆಲವರು ನನಗೆ ಈ‌ ಪರಿಸ್ಥಿತಿ ಬಂದಿದ್ದರೇ, ಬದುಕುತ್ತಲೇ ಇರಲಿಲ್ಲ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights