ಭಾವನಾತ್ಮಕ ಭಾಷಣ : ಸಾರ್ವತ್ರಿಕ ಚುನಾವಣೆ ಬಳಿಕ ಮತ್ತೆ ಕುಮಾರಸ್ವಾಮಿ ಕಣ್ಣೀರು

ಕಳೆದ ಸಾರ್ವತ್ರಿಕ ವಿಧಾನಸಭಾ ವೇಳೇ hdk ಪ್ರಚಾರದ ವೇಳೆ ಕಣ್ಣೀರು ಸುರಿಸಿ ೨೭ಸ್ಥಾನ ಗೆದ್ದಿದ್ರು. ಅದಾದ ಬಳಿಕ ಸರ್ಕಾರ ಇದ್ದ ಕಾರಣ ಮಗನ ಲೋಕಸಭೆ ಚುನಾವಣೆ ವೇಳೆ ಉತ್ಸಾಹದಿಂದಲೇ ಮಗನ ಚುನಾವಣೆ ಮಾಡಿದ್ರು. ಇದೀಗ ಮಗನ ಚುನಾವಣೆ ಸೋಲಿನ ಬಳಿಕ ಇದೀಗ ಉಪಚುನಾವಣೆಯಲ್ಲಿ ಮತ್ತೆ ಕಣ್ಣೀರುಧಾರೆ ಹರಿಸುತ್ತಿದ್ದು,ಸಕ್ಕರೆನಾಡು ಮಂಡ್ಯ ಕಿಕ್ಕೇರಿಯಲ್ಲಿ‌ ಕಣ್ಣೀರಧಾರೆ ಹರಿಸಿ ಮತ್ತೆ ಮತದಾರರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ.ಆಗಿದ್ರೆ ಕುಮಾರಸ್ವಾಮಿ ಕಣ್ಣೀರಧಾರೆ ಹೇಗಿತ್ತು ಅನ್ನೋದ್ರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..

ಹೌದು! ಕಳೆದ ಸಾರ್ವತ್ರಿಕ ಚುನಾವಣೆ ವೇಳೆ ಕುಮಸರಸ್ವಾಮಿ ಪ್ರಚಾರಕ್ಕೆ ಹೋದ ಕಡೆಯಲೆಲ್ಲ ಕಣ್ಣೀರಾಕಿ ೩೭ ಸ್ಥಾನ ಪಡೆದಿದ್ರು.ಅಲ್ದೆ ಅದೇಗೋ ದೇವರ ದಯೆಯಿಂದ ಸಿ.ಎಂ. ಕೂಡ ಆಗಿದ್ರು. ಸಿ.ಎಂ‌.ಆದ ಬಳಿಕ ಸರ್ಕಾರ ಬಂದ
ಮೇಲೆ ಕಣ್ಣೀರು ಮರೆತು ಹೋಗಿತ್ತು. ಮಗನ ಚುನಾವಣೆ ಸೋಲಿನ ಬಳಿಕ ಸರ್ಕಾರ ಪತನವಾಗಿ ಉಪಚುನಾವಣೆ ಹೊಸ್ತಿಲಲ್ಲಿ ಇದೀಗ ಮಾಜಿ ಸಿ.ಎಂ ಗೆ ಕಣ್ಣೀರು ನೆನನಪಾಗಿದ್ದು ಕಿಕ್ಕೇರಿ ಜೆಡಿಎಸ್ ಸಮಾವೇಶದಲ್ಲಿ ಕಣ್ಣೀರಧಾರೆ ಹರಿಸಿದ್ದಾರೆ. ಕಿಕ್ಕೇರಿ ಉಪಚುನಾವಣೆಯ ಪ್ರಚಾರಕ್ಕೆ ಬಂದ ಎಚ್ಡಿಕೆ ಭರ್ಜರಿ ರೋಡ್ ಶೋ ಮಾಡಿ, ಕಾರ್ಯಕರ್ತರಿಗೆ ಹುರಿದುಂಬಿಸಿದ್ದು ಅಲ್ದೆ ಸಮಾವೇಶದ ವೇದಿಕೆಯಲ್ಲಿ ತನಗೆ ಆದ ಮೋಸದ ಬಗ್ಗೆ ವಿವರಣೆ ನೀಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು.

ಜೆಡಿಎಸ್ ಸಮಾವೇಶದಲ್ಲಿ ಭಾಷಣವನ್ನು ಭಾವನಾತ್ಮಕವಾಗಿ ಆರಂಭಿಸಿದ ಎಚ್ಡಿಕೆ ಮೈತ್ರಿ ಸರ್ಕಾರದಲ್ಲಿ ತನಗೆ ಆದ ಮೋಸದ ಬಗ್ಗೆ ಕಾರ್ಯಕರ್ತರಿಗೆ ವಿವರಣೆ ನೀಡುತ್ತಲೇ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರ ಧಾರೆ ಹರಿಸಿದ್ರು. ಅಂದು ನಾರಾಯಣಗೌಡ ಕುಮಾರಸ್ವಾಮಿಗೆ ಬರೆದ ಪತ್ರ ಓದುತ್ತಾ ಕಣ್ಣೀರು ಹಾಕುತ್ತಾ ಬಿಜೆಪಿ ಅಭ್ಯರ್ಥಿ ವಿರುದ್ಧ ಆಕ್ರೋಶ ಹೊರ ಹಾಕಿದ್ರು ಇದರ ಜೊತೆಗೆ ಮಾಜಿ ಡಿಸಿಎಂ ಡಾ. ಪರಮೇಶ್ವರ್, ಚಲುವರಾಯಸ್ವಾಮಿ ವಿರುದ್ಧವೂ ಗುಡುಗಿದರು. ಅಮೇರಿಕಾಗೆ ಹೋದಾಗ ಸರ್ಕಾರ ಕೆಡವಿದರು ಎಂದು ತಮ್ಮ ನೋವು ತೋಡಿಕೊಂಡರು. ನಿಮ್ಮ ಗಳ ಪ್ರೀತಿ ಮುಖ್ಯ ನಮಗೆ ಸಿ.ಎಂ.ಪದವಿ ಮುಖ್ಯವಲ್ಲ ನಿಮಗಾಗಿ ನಾನು ಬದುಕಿದ್ದೇನೇ ಕೈ ಹಿಡಿಯುವವಂತೆ ಕಣ್ಣೀರಾಕಿ ಮತದಾರನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ಮುಂದಾದ್ರು.

ಇನ್ನು ಮಾಜಿ ಸಚಿವ ಪುಟ್ಟರಾಜು ಜೆಡಿಎಸ್ ಬಹಿರಂಗ ಸಭೆಯಲ್ಲಿ ಸ್ಥಳೀಯ ಜಿ.ಪಂ.‌ಮೂವರು ನಾಯಕರು ಲಕ್ಷಾಂತರ ರೂಪಾಯಿಗೆ ಸೇಲಾಗಿರೋ ಬಗ್ಗೆ ಹೊಸ ಬಾಂಬ್ ಸಿಡಿಸಿದರು. ಬಿಜೆಪಿ ಅಭ್ಯರ್ಥಿ ಜೆಡಿಎಸ್ ಮುಖಂಡರನ್ನು ಕೊಂಡುಕೊಂಡ ಬಗ್ಗೆ ಹೇಳುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದ್ರೆ.ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕೂಡ, ಆತ ಬಾಂಬೆಯಲ್ಲಿದ್ದವನು. ಗೆದ್ದು ಶಾಸಕನಾಗಿ ಒಂದು ದಿನ ಕ್ಷೇತ್ರದಲ್ಲಿದ್ರೆ 6 ದಿನ‌ ಅಲ್ಲಿದ್ದವನು. ಈತ ಕ್ಷೇತ್ರವನ್ನು ಬಾಂಬೆ ಮಾಡ್ತಿನಿ ಅಂತಾನೆ. ಆತ ಬಾಂಬೆ ಮಾಡಲ್ಲ ಕಾಮಾಟಿಪುರ ಮಾಡ್ತಾನೆ ಅಂತಾ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ವಿರುದ್ಧ ಆಕ್ರೋಶ ಹೊರ ಹಾಕಿದ್ರು.

ಒಟ್ಟಾರೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಅನರ್ಹ ಶಾಸಕರನ್ನು ಸೋಲಿಸಲು ಕುಮಾರಸ್ವಾಮಿ ಮತ್ತೆ ಕಣ್ಣೀರನ ಮೊರೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಗೆ ಬಂದಾಗ ಕಣ್ಣೀರು ಹರಿಸಿ ಭಾವನಾತ್ಮಕವಾಗಿ ಕಟ್ಟಿಹಾಕುವ ತಮ್ಮ ಪರಿಪಾಠವನ್ನು ಮತ್ತೆ ಮುಂದುವರೆಸಿದ್ದು, ಉಪಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನ ಮತ್ತೆ ಕುಮಾರಸ್ವಾಮಿ ಕಣ್ಣೀರಿಗೆ ಸೋತು ಜೆಡಿಎಸ್ ಕೈ ಹಿಡಿಯುತ್ತಾರಾ ಅನ್ನೋದ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights