ಬೆಣ್ಣೆ ನಗರಿಯಲ್ಲಿ ಪ್ರಶ್ನೆ ಪತ್ರಿಕೆ ಮಾಫಿಯಾ ಬಯಲು : ಮನೆಯೊಂದರಲ್ಲಿ ಸಿಕ್ಕಿವೆ ಬಂಡಲ್

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಪ್ರಶ್ನೆ ಪತ್ರಿಕೆ ಮಾಫಿಯಾ ಬಯಲಾಗಿದೆ. ಮನೆಯೊಂದರಲ್ಲಿ ಸಿಕ್ಕಿವೆ ಬಂಡಲ್ ಗಟ್ಟಲೆ ಪ್ರಶ್ನೆ ಪತ್ರಿಕೆ ಪತ್ತೆ ಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಲೀಕ್ ಮಾಫಿಯಾದ ಶಂಕೆ ವ್ಯಕ್ತವಾಗಿದೆ.

ಮೇ 26 ರಂದು ನಡೆದಿದ್ದ ಟಿಇಟಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ದಾವಣಗೆರೆಯ ಕೆಟಿಜೆ ನಗರದ 17 ನೇ ಕ್ರಾಸ್ ನ ಮನೆಯಲ್ಲಿ ಸಿಕ್ಕಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಂಡಲ್ ಗಟ್ಟಲೆ ಪತ್ತೆಯಾಗಿವೆ. ಮೊನ್ನೆ ರಾತ್ರಿ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರ ದಾಳಿ ನಂತರ ಪ್ರಕರಣ ಬಯಲಿಗೆ ಬಂದಿದೆ. ಕೆಟಿಜೆ ನಗರ ಪೊಲೀಸರು ಪ್ರಶ್ನೆ ಪತ್ರಿಕೆ ಗಳನ್ನು ವಶಕ್ಕೆ ಪಡೆಯಲಾಗಿದೆ.

ಮನೆಯಿಂದ ಆಟೋಗೆ ಪ್ರಶ್ನೆ ಪತ್ರಿಕೆಯ ಬಂಡಲ್ ಲೋಡ್ ಮಾಡುವಾಗ ಪೊಲೀಸ್ ಭೇಟಿ ನೀಡಿದ್ದಾರೆ. ಪೋಲಿಸ್ ಬಂದ್ದಿದ್ದನ್ನ ನೋಡಿ ಸ್ಥಳದಿಂದ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಯಾವುದೇ ಮಾಹಿತಿ ಇಲ್ಲ.

ಕೆಟಿಜೆ ನಗರ ಪೋಲಿಸ್ ರಿಂದ ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights