ಬೆಂಗಳೂರು ಸೇರಿದಂತೆ ರಾಜ್ಯದ 26 ಜಿಲ್ಲೆಗಳಿಗೆ ಇಂದು ಹಾಗೂ ನಾಳೆ ಹಳದಿ ಅಲರ್ಟ್…

ಹವಾಮಾನ ಇಲಾಖೆ ರಾಜ್ಯದ 26 ಜಿಲ್ಲೆಗಳಿಗೆ ಇಂದು ಹಾಗೂ ನಾಳೆ ಹಳದಿ ಅಲರ್ಟ್ ಘೋಷಿಸಿದೆ.

ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ, ದಾವಣಗೆರೆ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಇಂದು ಮತ್ತು ನಾಳೆ ಬೆಂಗಳೂರಿಗೆ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಂಗಳವಾರ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಹೊರತುಪಡಿಸಿ ಉಳಿದ 23 ಜಿಲ್ಲೆಗಳಿಗೆ ಹಳದಿ ಅಲರ್ಟ್ ಮುಂದುವರಿಯಲಿದೆ. ಅಲ್ಲದೆ 7 ರಿಂದ 11 ಸೆಂಟಿಮೀಟರ್ ಮಳೆಯಾಗುವ ನಿರೀಕ್ಷೆ ಇದೆ.

ಮಂಗಳವಾರ ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣವಿದ್ದು, ಸಂಜೆಯಿಂದ ರಾತ್ರಿವರೆಗೂ ವ್ಯಾಪಕವಾದ ಗುಡುಗು ಸಹಿತ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ತೆಲಂಗಾಣದಲ್ಲಿ ಸೈಕ್ಲೋನ್ ಸರ್ಕ್ಯುಲೇಶನ್ ಇರುವುದರಿಂದ ಹಾಗೂ ಕೇರಳದ ಕಡಿಮೆ ಒತ್ತಡ ರೇಖೆ ತನ್ನ ದಿಕ್ಕು ಬದಲಿಸುತ್ತಿರುವುದರಿಂದ ಮಳೆ ಆಗಲಿದೆ ಎಂದು ಹವಾಮಾನ ತಜ್ಞ ರಾಜ ರಮೇಶ್ ಅವರು ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights