ಬಿಜೆಪಿ ಸರ್ಕಾರದ ಪತನಕ್ಕೆ ಕಾರಣವಾಗುತ್ತಾ ವಾಲ್ಮೀಕಿ ನಾಯಕ ಸಮುದಾಯ..?

ಇಂದು ಸಚಿವರಿಗೆ ಖಾತೆ ಹಂಚಿಕೆಯಾಗುತ್ತಿದ್ದಂತೆ ಸಚಿವರಲ್ಲಿ ಅಸಮಧಾನಗಳು ಬುಗಿಲೆದ್ದಿವೆ.

ವಾಲ್ಮೀಕಿ ನಾಯಕ ಸಮಾಜಕ್ಕೆ ಅಂದರೆ ಸಚಿವ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ಬಿಎಸ್ವೈ, ಆರ್ಎಸ್ಎಸ್ ನಾಯಕರ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ವಾರ್ ಶುರುವಾಗಿದೆ.

ವಾಲ್ಮೀಕಿ ನಾಯಕ ಸಮಾಜದ ಯುವಕರು ಮೋದಿ, ಅಮೀತ್ ಷಾ ಸೇರಿ ಅನೇಕ ನಾಯಕರ ವಿರುದ್ಧವೂ ಕಿಡಿಕಾರುತ್ತಿದ್ದಾರೆ.

ಬಿಜೆಪಿ ವಿರುದ್ಧ ವಾಲ್ಮೀಕಿ ನಾಯಕ ಸಮಾಜ ಕೆಂಡ ಮಂಡಲವಾಗಿದ್ದು, ಶ್ರೀರಾಮುಲು ಅಭಿಮಾನಿ ಬಳಗ, ವಾಲ್ಮೀಕಿ ನಾಯಕ ಸಮಾಜದ ವಾಟ್ಸಾಪ್ ಗ್ರುಪ್, ಫೇಸ್ಬುಕ್ ಗ್ರುಪ್ ಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಸೈಲೆಂಟ್ ಆಗಿದ್ದಕ್ಕೆ ಶ್ರೀರಾಮುಲು ವಿರುದ್ಧ ಕೂಡ ಬೇಸರ ವ್ಯಕ್ತವಾಗುತ್ತಿದೆ. ಶ್ರೀರಾಮುಲು ಡಿಸಿಎಂ ಆಗ್ಬೇಕು, ವಾಲ್ಮೀಕಿ ನಾಯಕ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡ್ಬೇಕು, ಬಿಜೆಪಿ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಲ್ಮೀಕಿ ನಾಯಕ ಸಮಾಜವನ್ನು ಸದುಪಯೋಗ ಪಡೆಸಿಕೊಂಡು, ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಕೊಟ್ಟ ಮಾತು ಬಿಜೆಪಿ ಉಳಿಸಿಕೊಂಡಿಲ್ಲ, ಮೀಸಲಾತಿ ಎಚ್ಚಳ ಮಾಡ್ಲಿಲ್ಲ, ಡಿಸಿಎಂ ಸ್ಥಾನ ನೀಡ್ಲಿಲ್ಲ. ಹೀಗಾಗಿ ಜೊತೆಗೆ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೇ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights