ಬಬ್ರೂ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಗೀತೆ, ‘ಕನಸೆಲ್ಲಾ ನನಸಾಗೋ..’ ಬಿಡುಗಡೆ ಮಾಡಿದ ರಿಯಲ್ ಸ್ಟಾರ್
ಬಬ್ರೂ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಗೀತೆ, ‘ಕನಸೆಲ್ಲಾ ನನಸಾಗೋ..’ಯನ್ನು ರಿಯಲ್ ಸ್ಟಾರ್ ಬಿಡುಗಡೆ ಮಾಡಿದ್ದಾರೆ.
ಹೌದು.. ರಿಯಲ್ ಸ್ಟಾರ್ ಉಪೇಂದ್ರರಿಂದ ಬಬ್ರೂವಿನ ‘ಕನಸೆಲ್ಲಾ ನನಸಾಗೋ..’ ಎಂಬ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದಾರೆ.
ಭಿನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ ಚಿತ್ರವೊಂದು ಈಗ ಮತ್ತೆ ಸುದ್ದಿಯಾಗಿದೆ. ಅಪರಿಚಿತರ ಪಯಣದ ಪ್ರೇಮ ಕಥಾಹಂದರವನ್ನು ಒಳಗೊಂಡಿರುವ ಬಬ್ರೂ ಚಿತ್ರದ ಮೊದಲ ಗೀತೆ ಬುಧವಾರ, ನ.20 ರಂದು ಬಿಡುಗಡೆಯಾಗಿದೆ. ಸಂಪೂರ್ಣವಾಗಿ ಅಮೆರಿಕದಲ್ಲೇ ಚಿತ್ರೀಕರಣಗೊಂಡಿರುವ ಮೊಟ್ಟ ಮೊದಲ ಹಾಲಿವುಡ್ ಕನ್ನಡ ಚಿತ್ರ ಎಂಬ ದಾಖಲೆ ಹೊಂದಿರುವ ಈ ಚಿತ್ರದ ‘ಕನಸೆಲ್ಲಾ ನನಸಾಗೋ’ ಎಂಬ ಲಿರಿಕಲ್ ವಿಡಿಯೋ ಗೀತೆಯನ್ನು ನಮ್ಮೆಲ್ಲರ ಅಚ್ಚುಮೆಚ್ಚಿನ ರಿಯಲ್ ಸ್ಟಾರ್ ಉಪೇಂದ್ರ ಅವರು ಬಿಡುಗಡೆ ಮಾಡಿದ್ದಾರೆ. ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು.
ಸುಮನ್ ನಗರ್ ಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೇಷನ್ಸ್ ನಿರ್ಮಿಸಿರುವ ಮೊದಲ ಹಾಲಿವುಡ್ ಕನ್ನಡ ಚಲನಚಿತ್ರ “ಬಬ್ರೂ” ವಿನ ಮೊದಲ ಹಾಡನ್ನು ಇದೀಗ ತಾನೇ ಬಿಡುಗಡೆ ಮಾಡಿದ್ದಾರೆ “ಕನಸೆಲ್ಲ ನನಸಾಗೋ” ಹಾಡಿನ ಸಾಹಿತ್ಯ ಲೋಕೇಶ್ ಬಿ. ಎಸ್, ಸಂಗೀತ ನಿರ್ದೇಶಕರು ಪೂರ್ಣಚಂದ್ರ ತೇಜಸ್ವಿ, ಸಂಜಿತ್ ಹೆಗ್ಡೆ ಗೀತೆ ಹಾಡಿದ್ದಾರೆ. ಇದೀಗ ನಿಮ್ಮ ಮುಂದೆ “ಬಬ್ರೂ” ಚಿತ್ರದ ಮೊದಲ ಹಾಡು “ಕನಸೆಲ್ಲ ನನಸಾಗೋ”. ಈ ಹಾಡನ್ನು ಆನಂದಿಸಿ ಪಿಆರ್ ಕೆ ಆಡಿಯೋ ಚಾನೆಲ್ ನಲ್ಲಿ ಇದು ಲಭ್ಯವಿದೆ.