‘ಪ್ರತಾಪ್‌ಸಿಂಹ ಬುದ್ದಿವಂತ ಇದ್ದಾನೆ ಅವನ ಜೊತೆ ಹುಷಾರಾಗಿ ಇರು’ ವಿ.ಸೋಮಣ್ಣಗೆ ಸಿದ್ದರಾಮಯ್ಯ ಕಿವಿಮಾತು

ದಸರಾ ಅಂದರೆ ಅಂಬಾರಿ ಮೆರವಣಿಗೆ ಮಾತ್ರ ಅಂದುಕೊಂಡಿದ್ದೆ. ಅದೇನು ಮೆರವಣಿಗೆ ಮುಗಿಸಿಬಿಡಬಹುದು ಅಂತ ಊಹಿಸಿಕೊಂಡಿದ್ದೆ. ಆದ್ರೆ ಇಷ್ಟೊಂದು ಆಳವಾಗಿರುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ ಎಂದು ದಸರಾ ಮುಗಿಸಿದ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ದಸರಾ ಆಚರಣೆಗೆ ಸಂದರ್ಭ ಎಲ್ಲರ ಸಹಕಾರ ಪಡೆದೆ. ಸಿದ್ದರಾಮಯ್ಯರಿಗೆ ಮೂರ್ನಾಲ್ಕು ಬಾರಿ ಕರೆ ಮಾಡಿ ಮಾತನಾಡಿದೆ. ತೀಟೆಗಾಗಿ ನಾನೆ ಎರಡು ಮೂರು ಸಲ ಸಿದ್ದರಾಮಯ್ಯರಿಗೆ ಕರೆ ಮಾತನಾಡಿದೆ. ನಾವೇಲ್ಲ ಜೊತೆ ಇದ್ದವರು. ಪ್ರತಾಪ್‌ಸಿಂಹ ಬುದ್ದಿವಂತ ಇದ್ದಾನೆ ಅವನ ಜೊತೆ ಹುಷಾರಾಗಿ ಇರು ಎಂದಿದ್ದರು. ಅವನನ್ನ ಸುಲಭವಾಗಿ ನಂಬಬೇಡ ಅಂತ ಸಿದ್ದರಾಮಯ್ಯ ಸಲಹೆ ಕೊಟ್ಟರು. ಆದ್ರೂ ನಿವೇಲ್ಲ ಸೇರಿಕೊಂಡು ಚೆನ್ನಾಗಿ ದಸರಾ ಮಾಡ್ತಿದ್ದೀರಾ ಅಂತ ಮೈಸೂರಿನಲ್ಲಿ ಉಸ್ತುವಾರಿ ಸಚಿವ ವಿ.ಸೋಮಣ್ಣ  ಹೇಳಿದ್ರು.

ಇಡೀ ದಸರಾ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಮಾಧ್ಯಮದ ಸಹಕಾರದಿಂದ ದಸರಾ ವಿಶ್ವದಾದ್ಯಾಂತ ಪ್ರಚಾರ ಪಡೆದಿದೆ. ದಸರಾ ಯಶಸ್ವಿಯಾಗಲು ಮುಖ್ಯಮಂತ್ರಿ ನನಗೆ ಅವಕಾಶ ಮಾಡಿಕೊಟ್ಟಿದ್ದೇ ಇದಕ್ಕೆ ಕಾರಣ ಎಂದಿದ್ದಾರೆ. ಇದೇ ವೇಳೆ ಪ್ರತಾಪ್‌ಸಿಂಹ ಕಾರ್ಯವೈಖರಿಯನ್ನ ಕೊಂಡಾಡಿದ ಉಸ್ತುವಾರಿ ಸಚಿವ ವಿ.ಸೋಮಣ್ಣ, ಪಕ್ಕದಲ್ಲಿ ಕೂರಿಸಿಕೊಂಡು ಪದೆ ಪದೆ ಪ್ರತಾಪ್‌ಸಿಂಹ ಹೆಸರು ಹೇಳಿ ಶ್ಲಾಘಿಸಿದ್ದಾರೆ. ಜೊತೆಗೆ ಮೈಸೂರಿನ ಎಲ್ಲ ಎಂಎಲ್ಎ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ನಾನು ತುರ್ತಾಗಿ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಲು ಹೊರಟ್ಟಿದ್ದೇನೆ‌. ಆದರೂ ಎಲ್ಲರಿಗೂ ಧನ್ಯವಾದ ತಿಳಿಸಲು ತುರ್ತಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ನಾನು ಈವರೆಗೆ ದಸರಾ ಮಂತ್ರಿಯಾಗಿದ್ದೆ. ಇಂದಿನಿಂದ ವಸತಿ ಸಚಿವನಾಗಿ ಸಂಪುಟದಲ್ಲಿ ಭಾಗಿಯಾಗ್ತಿನೆ. ನಾಳೆಯಿಂದ ರಾಜ್ಯಾದ್ಯಂತ ಓಡಾಡಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇನೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights